ಕಲಬುರ್ಗಿ: ಮಹಾ ಶಿವರಾತ್ರಿಯ ದಿನವಾದಂತ ಇಂದೇ ಕಲಬುರ್ಗಿಯ ಅಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ ನೀಡಿತ್ತು. ಅದರಂತೆ ಶಿವರಾತ್ರಿಯ ದಿನವಾದಂತ ಇಂದು ಅಳಂದದ ಲಾಡ್ಲೇ ಮಶಾಕ್ ದರ್ಗಾದಲ್ಲಿರುವಂತ ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.
ಕಲಬುರ್ಗಿಯ ಅಳಂದ ಪಟ್ಟಣದಲ್ಲಿರುವಂತ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿರುವಂತ ಶಿವಲಿಂಗಕ್ಕೆ ಪೂಜೆ ಸಲ್ಲಿಕೆಗೆ ಹೈಕೋರ್ಟ್ ಅನುಮತಿ ನೀಡಿತ್ತು. ರಾಘವ ಚೈತನ್ಯ ಅವರಿಂದ ಪೂಜೆ ನೆರವೇರಿಸುವುದಕ್ಕೆ ಅನುಮತಿ ನೀಡಿತ್ತು. ಅದರಂತೆ ಇಂದು ರಾಘವ ಚೈತನ್ಯ ಅವರು ಲಾಡ್ಲೆ ಮಶಾಕ್ ದರ್ಗಾದಲ್ಲಿರುವಂತ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.
ಅಂದಹಾಗೇ ಅಳಂದದಲ್ಲಿರುವಂತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಸುಮಾರು 400 ವರ್ಷಗಳ ಪೂರಾತನ ಶಿವಲಿಂಗ ಇರುವುದು ತಿಳಿದು ಬಂದಿತ್ತು. ಈ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಕೋರ್ಟ್ ಮೆಟ್ಟಿಲೇರಲಾಗಿತ್ತು. ನಿನ್ನೆ ಕೋರ್ಟ್ ಅನುಮತಿ ನೀಡಿದ್ದರಿಂದ ಇಂದು ಪೂಜೆ ಸಲ್ಲಿಸಲಾಗಿದೆ.
BIG NEWS : ಫೆ.28ರಿಂದ 3 ದಿನ `ಹಂಪಿ ಉತ್ಸವ’ : CM ಸಿದ್ದರಾಮಯ್ಯ ಚಾಲನೆ.!