Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಸರ್ಕಾರಿ ವೈದ್ಯರ ಗಮನಕ್ಕೆ: ಜು.1ರಿಂದ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿ

16/06/2025 6:34 PM

GOOD NEWS: ರಾಜ್ಯದ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ವಸತಿ ಶಾಲೆ ಆರಂಭಕ್ಕೆ ಸರ್ಕಾರ ನಿರ್ಧಾರ

16/06/2025 6:31 PM

BREAKING: ಕಾಂತಾರ ಚಾಪ್ಟರ್-1ರ ಚಿತ್ರೀಕರಣಕ್ಕೆ ಮತ್ತೆ ಸಂಕಷ್ಟ: ತಹಸಿಲ್ದಾರ್ ನೋಟಿಸ್, ಉತ್ತರಕ್ಕೆ 3 ದಿನಗಳ ಡೆಡ್ ಲೈನ್

16/06/2025 6:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಂತಿಮ ಮತದಾರರ ಪಟ್ಟಿ 2024 ಪ್ರಕಟ: ಕರ್ನಾಟಕದಲ್ಲಿ ಈಗ ಒಟ್ಟು 5,37,85,815 ಮತದಾರರು
KARNATAKA

ಅಂತಿಮ ಮತದಾರರ ಪಟ್ಟಿ 2024 ಪ್ರಕಟ: ಕರ್ನಾಟಕದಲ್ಲಿ ಈಗ ಒಟ್ಟು 5,37,85,815 ಮತದಾರರು

By kannadanewsnow0724/01/2024 6:33 AM

ಬೆಂಗಳೂರು: ಕರ್ನಾಟಕ ರಾಜ್ಯದ ಅಂತಿಮ ಮತದಾರರ ಪಟ್ಟಿ-2024 ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸಾಮಾನ್ಯ ಮತದಾರರ ಸಂಖ್ಯೆ 5,37,85,815 ಆಗಿದ್ದು, ಇದರಲ್ಲಿ 2,69,33,750 ಪುರುಷ ಮತದಾರರು, 2,68,47,145 ಮಹಿಳಾ ಮತದಾರರು ಮತ್ತು 4,920 ಇತರೆ ಮತದಾರರು ಇದ್ದಾರೆ. ಇದರಲ್ಲಿ ಮಹಿಳಾ ಮತದಾರರಿಗೂ ಹಾಗೂ ಪುರುಷ ಮತದಾರರಿಗೂ ಸ್ವಲ್ಪ ಮಾತ್ರ ವ್ಯತ್ಯಾಸವಿರುವುದು ಸಂತಸದ ವಿಷಯವಾಗಿದೆ. ಮಹಿಳೆಯರು ಸಹ ದೊಡ್ಡ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಮಾಹಿತಿ ನೀಡಿದ್ದಾರೆ.

ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಪ್ರಕಟಿಸಲಾದ ರಾಜ್ಯದ ಅಂತಿಮ ಮತದಾರರ ಪಟ್ಟಿ – 2024 ಕ್ಕೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿ ಪ್ರಕಾರ 5.33 ಕೋಟಿ ಮತದಾರರಿದ್ದರು. ಇದೀಗ 4.08 ಲಕ್ಷ ಮತದಾರರು ಹೆಚ್ಚಳವಾಗಿದ್ದಾರೆ.

ಮಹಿಳಾ ಮತದಾರರದಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದ್ದು, 2.77 ಲಕ್ಷ ಮತದಾರರು ಅಧಿಕವಾಗಿದ್ದಾರೆ. ಪುರುಷ ಮತದಾರರಲ್ಲಿ 1.30 ಮತ್ತು ಇತರೆ ಮತದಾರರಲ್ಲಿ 24 ಮತದಾರರ ಸಂಖ್ಯೆ ಹೆಚ್ಚಳವಾಗಿದೆ. 100 ವರ್ಷ ಮೇಲ್ಪಟ್ಟ ವಯಸ್ಸಿನ ಮತದಾರರ ಸಂಖ್ಯೆ 17,937 ಆಗಿದೆ. ಆದರೆ ಕರಡು ಮತದಾರರ ಪಟ್ಟಿಯಲ್ಲಿ 100 ವರ್ಷ ಮೇಲ್ಪಟ್ಟ ವಯಸ್ಸಿನ ಮತದಾರರ ಸಂಖ್ಯೆಯು 23,377 ಇತ್ತು. 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದ್ದು,  ಕರಡುಪಟ್ಟಿಯಲ್ಲಿ 13.82 ಲಕ್ಷ ಮತದಾರರಿದ್ದರೆ, ಅಂತಿಮ ಮದಾರರ ಪಟ್ಟಿಯಲ್ಲಿ 12.71 ಲಕ್ಷ ಮತದಾರರಿದ್ದಾರೆ.

18-19 ವರ್ಷ ವಯಸ್ಸಿನ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕರಡುಪಟ್ಟಿಯಲ್ಲಿ 6.45 ಲಕ್ಷ ಮತದಾರರಿದ್ದರೆ, ಅಂತಿಮಪಟ್ಟಿಯಲ್ಲಿ 10.34 ಮತದಾರರಿದ್ದಾರೆ. ಒಟ್ಟು 3.88 ಲಕ್ಷ ಮತದಾರರ ಅಧಿಕವಾಗಿದ್ದಾರೆ. ಸೇವಾ ಮತದಾರರು ಒಟ್ಟು 46,501 ರಷ್ಟು ಇದ್ದಾರೆ. 3,164 ಸಾಗರೋತ್ತರ ಮತದಾರರಿದ್ದಾರೆ. ವಿಕಲಚೇತನ ಮತದಾರರು 5.62 ಲಕ್ಷ ಮಂದಿ ಇದ್ದಾರೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರವು ಅತಿ ಹೆಚ್ಚು 7,17,201 ಮತದಾರರಿದ್ದು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಒಟ್ಟು 1,67,556  ಮತದಾರರಿದ್ದಾರೆ.

ಮತದಾರರ ಗುರುತಿನ ಚೀಟಿಗಳನ್ನು ಮತದಾರರಿಗೆ ತ್ವರಿತ ಅಂಚೆ ಸೇವೆಯ ಮೂಲಕ ಆಯಾ ವಿಳಾಸಗಳಿಗೆ ರವಾನಿಸಲಾಗುತ್ತಿದೆ. ನವೆಂಬರ್ 2023ರ ಅಂತ್ಯದ ವೇಳೆಗೆ 17.47 ಮತದಾರರ ಗುರುತಿನ ಚೀಟಿಗಳನ್ನು ಯಶಸ್ವಿಯಾಗಿ ತ್ವರಿತ ಅಂಚೆ ಮೂಲಕ ನೇರವಾಗಿ ಮತದಾರರಿಗೆ ತಲುಪಿಸಲಾಗಿದೆ. ಪ್ರಸ್ತುತ 10.76 ಲಕ್ಷ  ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸಿದ್ದು, ಪ್ರಸ್ತುತ ಮತದಾರರಿಗೆ ರವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಅಂತಿಮ ಮತದಾರರ ಪಟ್ಟಿ ಪ್ರಕಾರ ಒಟ್ಟು ಮತಗಟ್ಟೆಗಳ ಸಂಖ್ಯೆ 58,834 ಆಗಿದೆ. ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ ಸಮಯದಲ್ಲಿ 845 ಮತಗಟ್ಟೆಗಳನ್ನು ಸೇರ್ಪಡೆಗೊಳಿಸಿದ್ದು, 552 ಮತಗಟ್ಟೆಗಳು ಹೆಚ್ಚಳವಾಗಿವೆ. ಕಳೆದ 2023 ರ ಸಾಲಿನ ವಿಧಾನಸಭೆ ಚುನಾವಣೆ ವೇಳೆ 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ತಕ್ಷಣವೇ ನೋಂದಾಯಿಸಲು ಪೆÇ್ರೀತ್ಸಾಹಿಸಲಾಗುತ್ತದೆ. ಮತದಾನದ ದಿನದಂದು ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂಬುದು ಗಮನದಲ್ಲಿಟ್ಟುಕೊಳ್ಳುವುದು.

ಆದ್ದರಿಂದ, ಮತದಾರರು ತುರ್ತಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಮತ್ತು ದೃಢೀಕರಿಸಲು ಮನವಿ ಮಾಡಲಾಗಿದೆ. ಅರ್ಹ ಮತದಾರರು ಅರ್ಜಿಗಳನ್ನು ಸಲ್ಲಿಸಲು ತಮ್ಮ ಮೊಬೈಲ್‍ನಲ್ಲಿ ವೋಟರ್ ಹೆಲ್ಪಲೈನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ತಾವೇ ಅರ್ಜಿ ಸಲ್ಲಿಸಬಹುದು ಅಥವಾ https://voterportal.eci.gov.in/  ಪೆÇೀರ್ಟಲ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು.

37 815 voters in Karnataka 815 ಮತದಾರರು 85 Final voters' list 2024 released Total 5 ಅಂತಿಮ ಮತದಾರರ ಪಟ್ಟಿ 2024 ಪ್ರಕಟ: ಕರ್ನಾಟಕದಲ್ಲಿ ಒಟ್ಟು 5
Share. Facebook Twitter LinkedIn WhatsApp Email

Related Posts

ರಾಜ್ಯದ ಸರ್ಕಾರಿ ವೈದ್ಯರ ಗಮನಕ್ಕೆ: ಜು.1ರಿಂದ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿ

16/06/2025 6:34 PM2 Mins Read

GOOD NEWS: ರಾಜ್ಯದ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ವಸತಿ ಶಾಲೆ ಆರಂಭಕ್ಕೆ ಸರ್ಕಾರ ನಿರ್ಧಾರ

16/06/2025 6:31 PM1 Min Read

BREAKING: ಕಾಂತಾರ ಚಾಪ್ಟರ್-1ರ ಚಿತ್ರೀಕರಣಕ್ಕೆ ಮತ್ತೆ ಸಂಕಷ್ಟ: ತಹಸಿಲ್ದಾರ್ ನೋಟಿಸ್, ಉತ್ತರಕ್ಕೆ 3 ದಿನಗಳ ಡೆಡ್ ಲೈನ್

16/06/2025 6:23 PM1 Min Read
Recent News

ರಾಜ್ಯದ ಸರ್ಕಾರಿ ವೈದ್ಯರ ಗಮನಕ್ಕೆ: ಜು.1ರಿಂದ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿ

16/06/2025 6:34 PM

GOOD NEWS: ರಾಜ್ಯದ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ವಸತಿ ಶಾಲೆ ಆರಂಭಕ್ಕೆ ಸರ್ಕಾರ ನಿರ್ಧಾರ

16/06/2025 6:31 PM

BREAKING: ಕಾಂತಾರ ಚಾಪ್ಟರ್-1ರ ಚಿತ್ರೀಕರಣಕ್ಕೆ ಮತ್ತೆ ಸಂಕಷ್ಟ: ತಹಸಿಲ್ದಾರ್ ನೋಟಿಸ್, ಉತ್ತರಕ್ಕೆ 3 ದಿನಗಳ ಡೆಡ್ ಲೈನ್

16/06/2025 6:23 PM

BREAKING: ಇಂದು ಒಂದೇ ದಿನ ಬೆಂಗಳೂರಲ್ಲಿ 103 ಅನಧಿಕೃತ ಬೈಕ್ ಟ್ಯಾಕ್ಸಿ ಸೀಜ್: RTO ಅಡಿಷನಲ್ ಕಮಿಷನರ್ ಮಾಹಿತಿ

16/06/2025 6:15 PM
State News
KARNATAKA

ರಾಜ್ಯದ ಸರ್ಕಾರಿ ವೈದ್ಯರ ಗಮನಕ್ಕೆ: ಜು.1ರಿಂದ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿ

By kannadanewsnow0916/06/2025 6:34 PM KARNATAKA 2 Mins Read

ಬೆಂಗಳೂರು: ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗೆ ಮೊಬೈಲ್‌ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಜುಲೈ 1 ರಿಂದ…

GOOD NEWS: ರಾಜ್ಯದ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ವಸತಿ ಶಾಲೆ ಆರಂಭಕ್ಕೆ ಸರ್ಕಾರ ನಿರ್ಧಾರ

16/06/2025 6:31 PM

BREAKING: ಕಾಂತಾರ ಚಾಪ್ಟರ್-1ರ ಚಿತ್ರೀಕರಣಕ್ಕೆ ಮತ್ತೆ ಸಂಕಷ್ಟ: ತಹಸಿಲ್ದಾರ್ ನೋಟಿಸ್, ಉತ್ತರಕ್ಕೆ 3 ದಿನಗಳ ಡೆಡ್ ಲೈನ್

16/06/2025 6:23 PM

BREAKING: ಇಂದು ಒಂದೇ ದಿನ ಬೆಂಗಳೂರಲ್ಲಿ 103 ಅನಧಿಕೃತ ಬೈಕ್ ಟ್ಯಾಕ್ಸಿ ಸೀಜ್: RTO ಅಡಿಷನಲ್ ಕಮಿಷನರ್ ಮಾಹಿತಿ

16/06/2025 6:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.