ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಪದವಿ ಕೋರ್ಸ್ ಗಳ ಎರಡನೇ ಹಾಗೂ ಆಯುಷ್ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಇಂದು ಪ್ರಕಟಿಸಿದ್ದು, ಈ ಕೋರ್ಸ್ ಗಳಿಗೆ ಇದುವರೆಗೂ ಒಟ್ಟು 18,867 ಸೀಟು ಹಂಚಿಕೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಎರಡೂ ಸುತ್ತುಗಳಿಂದ ವೈದ್ಯಕೀಯ ಕೋರ್ಸ್ ಗೆ 9,958, ದಂತ ವೈದ್ಯಕೀಯ ಕೋರ್ಸ್ ಗೆ 2,658 ಮತ್ತು ಆಯುಷ್ ಕೋರ್ಸ್ ಗಳಿಗೆ 6,257 ಸೀಟು ಹಂಚಿಕೆ ಮಾಡಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದುವರೆಗಿನ ಸೀಟು ಹಂಚಿಕೆ ನಂತರ ವೈದ್ಯಕೀಯ ಕೋರ್ಸ್ ನಲ್ಲಿ 158 ಸೀಟು, ದಂತ ವೈದ್ಯಕೀಯ ದಲ್ಲಿ 50 ಹಾಗೂ ಆಯುಷ್ ಕೋರ್ಸ್ ನಲ್ಲಿ 6,251 ಸೀಟುಗಳು ಉಳಿದಿವೆ. ಇವಲ್ಲದೆ, ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಪ್ರವೇಶ ಪಡೆಯದೇ ಉಳಿಯುವ ಸೀಟುಗಳನ್ನು ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಲು ಸೆ.26ರವರೆಗೆ ಹಾಗೂ ಕಾಲೇಜಿಗೆ ವರದಿ ಮಾಡಿಕೊಳ್ಳಲು ಸೆ.28ರವರೆಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
BREAKING: ಉತ್ತರ ಕನ್ನಡದಲ್ಲಿ ಘೋರ ದುರಂತ: ಮನೆಯಲ್ಲಿ LPG ಸಿಲಿಂಡರ್ ಸ್ಪೋಟದಿಂದ ಯುವತಿ ಸಾವು
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ – ರಾಜ್ಯದಲ್ಲಿ ಸೆ.29ರವರೆಗೆ ಭಾರಿ ಮಳೆ