ಬೆಂಗಳೂರು: ಇತ್ತೀಚಿಗೆ ತೆರೆಕಂಡಿದ್ದ ಸಿನಿಮಾವೊಂದರ ನಟ ತಮ್ಮ ಸ್ನೇಹಿತರ ಜೊತೆಗೆ ಬೆಂಗಳೂರಿನ ಒರಾಯನ್ ಮಾಲ್ ಬಳಿ ಇರುವ ಜೆಟ್ ಲ್ಯಾಗ್ ಪಬ್ನಲ್ಲಿ ಪಾರ್ಟಿ ನಟ, ನಿರ್ದೇಶಕ, ನಿರ್ಮಾಪಕ ಸೇರಿದಂತೆ ಹಲವು ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗಿ ಆಗಿದ್ದರು ಎನ್ನಲಾಗಿದೆ.
ಆದರೆ ಸರ್ಕಾರ ನಿಗದಿ ಮಾಡಿದ್ದ ಸಮಯಕ್ಕಿಂತ ಹೆಚ್ಚು ಪಬ್ ತೆರೆದಿದ್ದ ಕಾರಣ ಈಗ ಜೆಟ್ ಲ್ಯಾಗ್ ಮ್ಯಾನೇಜರ್ ಪ್ರಶಾಂತ್, ಮಾಲೀಕರಾದ ಶಶಿರೇಖಾ ಜಗದೀಶ್ ಮೇಲೆ ಎಫ್ಐಆರ್ ದಾಖಲಾಗಿದೆ. ಅವಧಿ ಮೀರಿ ಬೆಳಗ್ಗೆ ಮುಂಜಾನೆ 5ರವರೆಗೆ ಪಬ್ ತೆರದಿತ್ತು ಎನ್ನಲಾಗಿದ್ದು, ಸದ್ಯ ಅಬಕಾರಿ ಮತ್ತು ಪೊಲೀಸ್ ಕಾಯಿದೆ ಷರತ್ತು ಉಲ್ಲಂಘನೆ ಆರೋಪದಡಿ ಎಫ್ಐಆರ್ ಹಾಕಲಾಗಿದೆ ಅಂಥ ತಿಳಿದು ಬಂದಿದೆ. ಇನ್ನೂ ಆ ನಟನ ಕಾರು ನೋಡಿದ ಅಭಿಮಾನಿಗಳು ಕೂಡ ಮಾಲ್ ಸುತ್ತ ನಿಂತುಕೊಂಡು ಟ್ರಾಫಿಕ್ ಜಾಮ್ ಮಾಡಿದ್ದಾರೆ ಎನ್ನಲಾಗಿದ್ದು, ಈ ಎಲ್ಲ ಘಟನೆಗಳು ಸಿಸಿಟಿವಿಯಲ್ಲಿ ರೆಕಾರ್ಟ್ ಆಗಿವೆಯಂತೆ. ಇದಲ್ಲದೇ ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಜನವರಿ 3ರಂದು ರಾತ್ರಿ ಪಬ್ಗೆ ಸಿನಿಮಾ ತಂಡ ಆಗಮಿಸಿದ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು ಪೊಲೀಸರ ಕಾರ್ಯವೈಖರಿ ಬಗ್ಗೆ ಜನತೆ ಪ್ರಶ್ನೆ ಮಾಡುತ್ತಿದ್ದಾರೆ.