ಬೆಂಗಳೂರು: ಬೆಳಗಾವಿಯಲ್ಲಿನ ಎಂಇಎಸ್ ಪುಂಡಾಟ ಖಂಡಿಸಿ ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಅಂದು ರಾಜ್ಯಾಧ್ಯಂತ ಸಿನಿಮಾ ಪ್ರದರ್ಶನ್ ಬಂದ್ ಮಾಡಲಾಗುತ್ತಿದೆ ಎಂಬುದಾಗಿ ಸಿನಿಮಾ ಪ್ರದರ್ಶಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಬೆಳಗಾವಿಯಲ್ಲಿ ಕನ್ನಡಿಗರ ಮೇಲಿನ ಹಲ್ಲೆ, ಮರಾಠಿಗರ ಪುಂಡಾಟ ಖಂಡಿಸಿ ಕನ್ನಡಪರ ಸಂಘಟನೆಗಳಿಂದ ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಇಂತಹ ಬಂದ್ ಗೆ ಸಿನಿಮಾ ಪ್ರದರ್ಶಕರ ಸಂಘವು ಬೆಂಬಲ ನೀಡುತ್ತಿದೆ ಎಂದರು.
ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಬೆಂಬಲಿಸಿ ರಾಜ್ಯಾಧ್ಯಂತ ಒಂದು ದಿನ ಸಿನಿಮಾ ಪ್ರದರ್ಶನ ಸ್ಥಗಿತಕ್ಕೆ ನಿರ್ಧರಿಸಲಾಗಿದೆ. ಮಾರ್ಚ್.22ರಂದು ರಾಜ್ಯಾಧ್ಯಂತ ಸಿನಿಮಾ ಪ್ರದರ್ಶ ಬಂದ್ ಆಗಲಿದೆ ಎಂಬುದಾಗಿ ತಿಳಿಸಿದರು.
BIG NEWS : ಮಾ.22 ರಂದು ‘ಅಖಂಡ ಕರ್ನಾಟಕ ಬಂದ್’ ವಿಚಾರ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
BREAKING ಛತ್ತೀಸ್ ಗಢದ ಬಿಜಾಪುರದಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್ : 22 ಮಂದಿ ನಕ್ಸಲರ ಹತ್ಯೆ | Naxal Encounter