ಬೆಂಗಳೂರು: ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ತಂದೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಸಮನ್ಸ್ ಜಾರಿ ಮಾಡಿದೆ.
ಈ ನಡುವೆ ಸದ್ಯ ಸಂಸದ ಪ್ರಜ್ಚಲ್ ರೇವಣ್ಣಣನವರು ಜರ್ಮನಿಯಲ್ಲಿದ್ದು, ಅವರಿಗೆ ಈಗಾಗಲೇ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ ಎಸ್‌ಐಟಿ ಅಧಿಕಾರಿಗಳು ಎನ್ನಲಾಗಿದೆ. ಆದರೆ ಸದ್ಯ ಅವರು ಜರ್ಮನಿಯಲ್ಲಿರುವುದರಿಂದ ಅವರ ಪರ ವಕೀಲರು ಕಾಲಾವಕಾಶ ಕೇಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇವೆಲ್ಲದರ ನಡುವೆ ಪ್ರಜ್ವಲ್ ರೇವಣ್ಣನರಿಗೆ ಇನ್ನೇರಡು ಬಾರಿ ಸಮನ್ಸ್ ಕೂಡ ಸಾಧ್ಯತೆ ಇದೇ ಎನ್ನಲಾಗಿದ್ದು, ಈ ನಡುವೆ ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರಕರಣ ಸಂಬಂಧ ಎಸ್‌ಐಟಿ ಎಲ್ಲಾ ತನಿಖೆಯನ್ನು ಮಾಡುತ್ತಿದೆ. ಈಗಾಗಲೇ ಸಮನ್ಸ್ ಕೂಡ ನೀಡಲಾಗಿದೆ ಅಂತ ಹೇಳಿದರು.
ಇದಲ್ಲದೇ ಅವರು ಮಾತನಾಡಿ ಪ್ರಜ್ವಲ್ ರೇವಣ್ಣನರು ಎಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಕೂಡ ಕಲೆ ಹಾಕಲಾಗಿದೆ ಅಂತ ತಿಳಿಸದಿರು. ಇನ್ನೂ ತನಿಖೆಗಾಗಿ ಎಸ್‌ಐಟಿ ತಂಡದವರು ಜರ್ಮನಿಗೆ ತೆರಳುವ ಸಾಧ್ಯತೆ ಕೂಡ ಇದ್ದು, ಈ ಬಗ್ಗೆ ಕೇಂದ್ರ ಗೃಹ ಇಲಾಖೆಯ ಜೊತೆಗೆ ಹೆಚ್ಚಿನ ಸಂಪರ್ಕ ಸಾಧಿಸಿ ಪ್ರಜ್ವಲ್ ರೇವಣ್ಣನವರನ್ನು ತಮ್ಮ ವಶಕ್ಕೆ ಜರ್ಮನಿಂದಲೇ ಕರೆತರಲಾಗುವುದು ಎನ್ನಲಾಗುತ್ತಿದೆ. ಆದರೆ ಇವೆಲ್ಲವೂ ಕಾನೂನು ರೀತಿ ಪ್ವಜ್ವಲ್ ನಡೆದುಕೊಳ್ಳದೇ ಇದ್ದ ವೇಳೆಯಲ್ಲಿ ನಡೆಯುತ್ತದೆ ಎನ್ನಲಾಗಿದೆ.