ಬೆಂಗಳೂರು: ಮಹಿಳೆಯೊಬ್ಬರ ಕಿಡ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಳೆ ಸಂಜೆ ಐದರಒಳಗೆ ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇದಲ್ಲದೇ ನೋಟಿಸ್‌ನಲ್ಲಿ ನೀವು ಹೊಳೆ ನರಸೀಪುರದಲ್ಲಿರುವ ನಿಮ್ಮ ಮನೆಯಲ್ಲೇ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಭವಾನಿ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶ ಇಂದು ಮಧ್ಯಾಹ್ನ 2.45ಕ್ಕೆ ನ್ಯಾಯಾಲದಿಂದ ತೀರ್ಪು ಪ್ರಕಟವಾಗಲಿದೆ.ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ (ಸಿಸಿಎಚ್–82) ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ವಾದ-ಪ್ರತಿವಾದವನ್ನು ಆಲಿಸಿದ್ದು, ಇಂದು ಮಧ್ಯಾಹ್ನ ಇಂದು ಮಧ್ಯಾಹ್ನ 2.45ಕ್ಕೆ ತೀರ್ಪು ನೀಡಲಿದ್ದಾರೆ.
ಇವೆದಲ್ಲದರ ನಡುವೆ ಕಳೆದ ಹದಿನೈದು ದಿನಗಳಿಂದ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರು ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ, ಇದಲ್ಲದೇ ಎಸ್‌ಐಟಿ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಕೂಡ ಅವರು ಉತ್ತರ ನೀಡಿಲ್ಲ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಎಸ್‌ಐಟಿ ಅಧಿಕಾರಿಗಳು ಅವರನ್ನು ಹುಡುಕಾಟ ನಡೆಸುತ್ತಿದ್ದು, ಒಂದು ವೇಳೆ ಇಂದು ಮಧ್ಯಾಹ್ನ ನ್ಯಾಯಾಲವರ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದರೆ ಅವರನ್ನು ಬಂಧಿಸಲೇ ಬೇಕು, ಇಲ್ಲವೇ ಜಾಮೀನು ನೀಡಿದರೆ ಅವರು ಎಸ್‌ಐಟಿ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಹಾಜರಾಗಿ ಉತ್ತರಿಸಲೇ ಬೇಕಾಗಿದೆ. ಇವೆಲ್ಲದಕ್ಕೂ ಇಂದು ಮಧ್ಯಾಹ್ನ 2.45ಕ್ಕೆ ನ್ಯಾಯಾಲಯ ನೀಡಲಿರುವ ಆದೇಶದಲ್ಲಿ ಉತ್ತರ ಸಿಗಲಿದೆ.