ಬೆಳಗಾವಿ: ಕ್ಷುಲ್ಲಕ ಕಾರಣಕ್ಕಾಗಿ ಮನೆಯ ಖುಷಿಯಲ್ಲಿದ್ದಂತ ಮಗನನ್ನೇ ತಂದೆಯೊಬ್ಬ ಕಲ್ಲಿನಿಂದ ಹೊಡೆದು ಕೊಂದಿರುವಂತ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ತಾಲ್ಲೂಕಿನ ಚಿಕ್ಕ ನಂದಿಹಳ್ಳಿ ಗ್ರಾಮದ ಮಂಜುನಾಥ್ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಎಷ್ಟೇ ಕುಡಿತ ಬಿಡಿಸೋದಕ್ಕೆ ಪ್ರಯತ್ನಿಸಿದರೂ ಬಿಟ್ಟಿಲ್ಲ. ಮದುವೆ ಬೇರೆ ಸೆಟ್ ಆಗಿದೆ. ಈಗಲಾದರೂ ಸರಿಯಾಗಿ ಇರುವಂತ ತಂದೆ ನಾಗಪ್ಪ ಹಾಗೂ ಸಹೋದರ ಗುರುಬಸಪ್ಪ ಬುದ್ಧಿವಾದ ಹೇಳಿದ್ದಾರೆ.
ಕುಡಿದ ಮತ್ತಿನಲ್ಲಿ ಮಂಜುನಾಥ್ ಉಳ್ಳಾಗಡ್ಡಿ ಗಲಾಟೆ ಜೋರಾಗಿ ಮಾಡಿದ್ದಾನೆ. ಇದರಿಂದ ಬೇಸತ್ತಂತ ತಂದೆ ನಾಗಪ್ಪ ಹಾಗೂ ಗುರಬಸಪ್ಪ ಇಬ್ಬರು ಸೇರಿ ಕಲ್ಲಿನಿಂದ ಹೊಡೆದಿದ್ದಾರೆ. ತಲೆಗೆ ಕಲ್ಲಿನಿಂದ ಹೊಡೆದ ಕಾರಣ ತೀವ್ರವಾಗಿ ಗಾಯಗೊಂಡಿದ್ದಂತ ಮಂಜುನಾಥ್ ಉಳ್ಳಾಗಡ್ಡಿ(25) ಸಾವನ್ನಪ್ಪಿದ್ದಾರೆ.
ಅಂದಹಾಗೇ ಮಾರ್ಚ್.12ರಂದು ಸಹೋದರ ಮಂಜುನಾಥ್ ಮದುವೆ ನಿಗದಿಯಾಗಿತ್ತು. ಈ ಕಾರಣ ಸೇನೆಯಲ್ಲಿದ್ದಂತ ಗುರುಬಸಪ್ಪ ರಜೆಯ ಮೇಲೆ ಊರಿಗೆ ಬಂದಿದ್ದರು. ಇದೀಗ ಸಹೋದರ ಮಂಜುನಾಥ್ ಹತ್ಯೆ ಕೇಸಲ್ಲಿ ತಂದೆ ನಾಗಪ್ಪ ಹಾಗೂ ಗುರುಬಸಪ್ಪ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
BIG UPDATE: ಹಾಸನದ ಬೇಲೂರಲ್ಲಿ ಸಜ್ಜಾ ಕುಸಿದು ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯ
ಎರಡು ರಾಜ್ಯಗಳಲ್ಲಿ ಇಸ್ರೋದಿಂದ ಎರಡು ಹೊಸ ಉಡಾವಣಾ ಪ್ಯಾಡ್ ಗಳು, ಚಂದ್ರಯಾನ -4 ಸಿದ್ಧ | Chandrayaan-4
BIG NEWS : ದೇಶಾದ್ಯಂತ `ತಾಪಮಾನ’ ಹೆಚ್ಚಳ : ಹೃದಯ, ಶ್ವಾಸಕೋಶ, ಮೆದುಳಿಗೆ ಹಾನಿಕಾರಕ.!