ಮಂಡ್ಯ: ಜಿಲ್ಲೆಯಲ್ಲಿ ಆಸ್ತಿ ವಿಚಾರವಾಗಿ ಉಂಟಾದಂತ ಜಗಳದಲ್ಲಿ ತಂದೆಯನ್ನೇ ಮಗ ಬರ್ಬರವಾಗಿ ಹತ್ಯೆ ಮಾಡಿರುವಂತ ಶಾಕಿಂಗ್ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಸುಂಡಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಪುತ್ರ ಮಹದೇವ್ ಹಾಗೂ ತಂದೆ ನಂಜಪ್ಪ ನಡುವೆ ಗಲಾಟೆಯಾಗಿತ್ತು. ಈ ಗಲಾಟೆಯ ಬಳಿಕ ತಂದೆ ನಂಜಪ್ಪ(65) ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆಯನ್ನು ಪುತ್ರ ಮಹದೇವ್ ಮಾಡಿರೋದಾಗಿ ತಿಳಿದು ಬಂದಿದೆ.
ಮಗಳ ಹೆಸರಿಗೆ ಆಸ್ತಿ ಬರೆದುಕೊಟ್ಟಿದ್ದ ನಂಜಪ್ಪನ ಜೊತೆಗೆ ಪುತ್ರ ಮಹದೇವ್ ಕಿರಿಕ್ ತೆಗೆದಿದ್ದಾನೆ. ಆಸ್ತಿ ಕೊಡಲಿಲ್ಲವೆಂದು ಆಕ್ರೋಶಗೊಂಡಿದ್ದಂತ ಮಹದೇವಪ್ಪ ಇಂದು ಬೆಳಗಿನ ಜಾವ ರಸ್ತೆಯಲ್ಲಿ ಒಡಾಡಿಸಿಕೊಂಡು ನಂಜಪ್ಪ ಅವರನ್ನು ಹಲ್ಲೆ ಮಾಡಿ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾನೆ.
ಗಲಾಟೆಯ ವೇಳೆಯಲ್ಲಿ ಅಡ್ಡಬಂದ ತಾಯಿ ಮಹದೇವಮ್ಮಳಿಗೂ ಗಾಯವಾಗಿದೆ. ಹತ್ಯೆಯ ಬಳಿಕ ಮಗ ಮಹದೇವ ಎಸ್ಕೇಪ್ ಆಗಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಮ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ರಾಜ್ಯಸಭೆ 4 ಸ್ಥಾನಗಳಿಗೆ ‘ಮತದಾನ’ ಪ್ರಕ್ರಿಯೆ ಆರಂಭ: ಮೊದಲು ಮತ ಚಲಾಯಿಸಿದ ‘ಎಸ್.ಸುರೇಶ್ ಕುಮಾರ್’