ಬೆಳಗಾವಿ: ಜಿಲ್ಲೆಯಲ್ಲಿ ಸಚಿವ ಮಂಕಾಳು ವೈದ್ಯ ಅವರ ಕಾರಿಗೆ ಮುತ್ತಿಗೆ ಹಾಕಿ ರೈತರು ತಮ್ಮ ಆಕ್ರೋಶವನ್ನು ಹೊರ ಹಾಕಿರುವಂತ ಘಟನೆ ನಡೆದಿದೆ.
ಬೆಳಗಾವಿಯ ಸುವರ್ಣ ಸೌಧದ ಬಳಿಯಲ್ಲಿ ಅಧಿವೇಶನದ 5ನೇ ದಿನವೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರ ಹೋರಾಟ ಮುಂದುವರೆದಿದೆ. ಸುವರ್ಣ ಸೌಧದ ಹೊರಗೆ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಬೆಳಗಾವಿಯ ಆಲಾರವಾಡ್ ಕ್ರಾಸ್ ಬಳಿಯಲ್ಲಿ ರೈತರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಅಲ್ಲದೇ ಸಚಿವ ಮಂಕಾಳು ವೈದ್ಯ ಕಾರಿಗೆ ಮುತ್ತಿಗೆ ಹಾಕಿ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ರೈತರ ಸಮಸ್ಯೆ ಆಲಿಸಿ ವಾಪಾಸ್ ಆಗುವಾಗ ಸಚಿವ ಮಂಕಾಳು ವೈದ್ಯಗೆ ರೈತರು ಮುತ್ತಿಗೆ ಹಾಕಿದ್ದಾರೆ. ಸುವರ್ಣ ವಿಧಾನಸೌಧದ ಬಳಿಯಲ್ಲಿ ರಾಜ್ಯದ ವಿವಿಧ ಕಡೆಯಿಂದ ಆಗಮಿಸಿರುವಂತ ರೈತರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಳಗಾವಿಯ ಕಿರು ಮೃಗಾಲಯ ಆಕರ್ಷಗೊಳಿಸಲು ಕ್ರಮ, ಬರಲಿದೆ ಮೊಸಳೆ, ಹಾವು- ಸಚಿವ ಈಶ್ವರ್ ಖಂಡ್ರೆ
BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ‘ಆರೋಗ್ಯ ಸಂಜೀವಿನಿ ಯೋಜನೆ’ಗೆ ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ.!








