ಬೆಂಗಳೂರು: ರಾಜ್ಯದ ರೈತರಿಗೆ ಕಾಂಗ್ರೆಸ್ ಸರ್ಕಾರದಿಂದಲೇ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆಗೂ ಮುನ್ನವೇ 2,000 ಬರ ಪರಿಹಾರವನ್ನು ನೀಡಲಾಗುತ್ತಿದೆ. ಈ ಹಣ ಪಡೆಯೋದಕ್ಕೆ ರೈತರು ಬಹುಮುಖ್ಯವಾಗಿ ಕೆಲಸವೊಂದನ್ನು ಮಾಡಬೇಕಿದೆ. ಒಂದು ವೇಳೆ ಆ ಕೆಲಸ ಮಾಡದೇ ಇದ್ರೆ ನಿಮ್ಮ ಖಾತೆಗೆ ಬರ ಪರಿಹಾರದ ಹಣ ಜಮಾ ಆಗೋದಿಲ್ಲ.
ಈ ಕುರಿತು ಮಾಹಿತಿ ಹಂಚಿಕೊಂಡಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ರಾಜ್ಯದ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ ರಾಜ್ಯ ಸರ್ಕಾರದಿಂದ 2 ಸಾವಿರ ರೂ.ಗಳನ್ನು ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರಿಗೆ ತಲುಪಲಿದೆ. ಆಧಾರ್ ಲಿಂಕ್ ಆಗದ ರೈತರು ತಕ್ಷಣ ಲಿಂಕ್ ಮಾಡಿಸಬೇಕು ಎಂಬುದಾಗಿ ತಿಳಿಸಿದ್ದಾರೆ.
ಮತ್ತೊಂದೆಡೆ ಕರ್ನಾಟಕ ಕಾಂಗ್ರೆಸ್ ಪತ್ರ ಬರೆದದ್ದಾಯ್ತು, ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾಯ್ತು, ಕೇಂದ್ರ ಬರ ಅಧ್ಯಯನ ತಂಡ ಬಂದು ಹೋಗಿದ್ದಾಯ್ತು, 18 ಗಂಟೆ ಕೆಲಸ ಮಾಡುವ ಮೋದಿಯವರಿಗೆ ಕರ್ನಾಟಕದ ಬರ ಪರಿಸ್ಥಿತಿಯ ಬಗ್ಗೆ ಗಮನಿಸಿ ಪರಿಹಾರ ಒದಗಿಸಲು ಕನಿಷ್ಠ 18 ನಿಮಿಷ ಸಮಯವಿಲ್ಲವೇ ಬಿಜೆಪಿ? ಎಂದು ಪ್ರಶ್ನಿಸಿದೆ.
ರಾಜ್ಯದ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ ರಾಜ್ಯ ಸರ್ಕಾರದಿಂದ 2 ಸಾವಿರ ರೂ.ಗಳನ್ನು ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರಿಗೆ ತಲುಪಲಿದೆ. ಆಧಾರ್ ಲಿಂಕ್ ಆಗದ ರೈತರು ತಕ್ಷಣ ಲಿಂಕ್ ಮಾಡಿಸಬೇಕು.
– ಮುಖ್ಯಮಂತ್ರಿ @siddaramaiah #ಬರಪರಿಹಾರ…— CM of Karnataka (@CMofKarnataka) January 2, 2024
ಬಿಜೆಪಿಯ 25 ಸಂಸದರು ಬರ ಪರಿಹಾರ ಬಿಡುಗಡೆ ಮಾಡುವಂತೆ ಇದುವರೆಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಕೆಲಸ ಮಾಡಿಲ್ಲವೇಕೆ? ಬಿಜೆಪಿಗರಿಗೆ ಕನ್ನಡಿಗರ ಮತ ಮಾತ್ರ ಬೇಕು, ಕನ್ನಡಿಗರ ಹಿತ ಬೇಡವಾಗಿದೆ ಎಂದು ಕೇಳಿದೆ.
BREAKING: ನನ್ನನ್ನು ಸಾಯಿಸಲು ಹೊಂಚು ಹಾಕಿಸ್ತಿದ್ದಾರೆ – ವಿದ್ಯಾಧರನಾಥಶ್ರೀ ಗಂಭೀರ ಆರೋಪ
BIG NEWS: ರಾಮಜನ್ಮಭೂಮಿ ಹೋರಾಟಗಾರ ‘ಶ್ರೀಕಾಂತ್ ಪೂಜಾರಿ’ ಬಂಧನ ಪ್ರಕರಣ: ಬರೋಬ್ಬರಿ 15 ಕೇಸ್ ದಾಖಲು