ಶಿವಮೊಗ್ಗ : 2024-25ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಭದ್ರಾವತಿ ತಾಲ್ಲೂಕಿಗೆ ವಿವಿಧ ಕಾರ್ಯಕ್ರಮಗಳು ಮಂಜೂರಾಗಿದ್ದು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳು ಅನುಮೋದನೆಗೊಂಡಿದ್ದು, ವೈಯಕ್ತಿಕ ಕೃಷಿ ಹೊಂಡ ನಿರ್ಮಾಣ, ಅಂಗಾಂಶ ಬಾಳೆ, ಕಾಳುಮೆಣಸು ಪ್ರದೇಶ ವಿಸ್ತರಣೆ, ಪ್ಯಾಕ್‌ಹೌಸ್, ಅಡಿಕೆ ಪ್ರಾಥಮಿಕ ಸಂಸ್ಕರಣಾ ಘಟಕ ಇತ್ಯಾದಿ ಸೌಲಭ್ಯ ನೀಡಲು ಫಲಾನುಭವಿಗಳಿಂದ ಅರ್ಜಿ ಕರೆಯಲಾಗಿದೆ.
ಆಯಾ ಕಾರ್ಯಕ್ರಮಗಳಿಗೆ ನಿಗದಿಯಾದ ಮಾರ್ಗಸೂಚಿಯನ್ವಯ ಅರ್ಜಿಯನ್ನು ಪರಿಗಣಿಸಲಾಗುವುದು. ಯೋಜನೆಯ ಲಾಭ ಪಡೆಯಲಿಚ್ಚಿಸುವ ರೈತರು ತಮ್ಮ ಹೆಸರನ್ನು ಆಯಾ ತಾಲ್ಲೂಕಿನಲ್ಲಿ ತೋಟಗಾರಿಕೆ ಇಲಾಖೆ ಕಚೇರಿಗಳಲ್ಲಿ ಆಗಸ್ಟ್ ೫ ರೊಳಗೆ ನೋಂದಾಯಿಸಬಹುದು.
ನಿಗದಿತ ಗುರಿಗಿಂತ ಹೆಚ್ಚಿನ ಅರ್ಜಿಗಳು ಬಂದಲ್ಲಿ ಜೇಷ್ಟತೆಯ ಪ್ರಕಾರ ಹಾಗೂ ನಿಗದಿತ ಮೀಸಲಾತಿಯಂತೆ ಫಲಾನುಭವಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಭದ್ರಾವತಿ ಇಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
BREAKING: ರಾಜ್ಯದಲ್ಲೊಂದು ಪೈಶಾಚಿಕ ಕೃತ್ಯ: ಒಂದೂವರೆ ವರ್ಷದ ಹಸುಗೂಸಿನ ಮೇಲೆ ಅತ್ಯಾಚಾರ, ಕೊಲೆ
ಇನ್ಮುಂದೆ ನಿಮ್ಮ ಭೂಮಿಗೂ ಸಿಗುತ್ತೆ ʻಆಧಾರ್ʼ : ʻಭೂ ಆಧಾರ್ʼ ಕುರಿತು ಇಲ್ಲಿದೆ ಮಾಹಿತಿ | Bhu Aadhar yojana