ದೊಡ್ಡಬಳ್ಳಾಪುರ: ರೈತರು ಬ್ಯಾಂಕ್ ನಲ್ಲಿ ಇರಿಸಲಾಗಿದ್ದಂತ ಹಣವನ್ನು ಏಕಾಏಕಿ ಕಡಿತಗೊಂಡಿದ್ದರಿಂದ ಅಚ್ಚರಿಯಿಂದ ಬ್ಯಾಂಕ್ ಮುಂದೆ ಜಮಾಯಿಸಿದಂತ ಘಟನೆ ದೊಡ್ಡಬಳ್ಳಾಪುರದ ತೂಬಗೆರೆಯ ಯೂನಿಯನ್ ಬ್ಯಾಂಕ್ ನಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿರುವಂತ ಯೂನಿಯನ್ ಬ್ಯಾಂಕ್ ನಲ್ಲಿ ರೈತರು ಹಣವನ್ನು ಇರಿಸಿದ್ದರು. ಈ ಹಣವನ್ನು ಏಕಾಏಕಿ ಕಡಿತಗೊಳಿಸಿರೋ ಬಗ್ಗೆ ಸಂದೇಶ ಬಂದಿತ್ತು.
ಸಂದೇಶ ನೋಡಿದಂತ ರೈತರು ಎದ್ದನೋ ಬಿದ್ದನೋ ಅಂತ ಯೂನಿಯನ್ ಬ್ಯಾಂಕ್ ಬಳಿಗೆ ಓಡೋಡಿ ಹೋಗಿ, ಹಣ ಕಡಿತವಾದಂತ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ.
ಸಿಬ್ಬಂದಿ ಸರಿಯಾಗಿ ಉತ್ತರಿಸಿದ ಕಾರಣ ರೈತರು ಯೂನಿಯನ್ ಬ್ಯಾಂಕ್ ಮುಂದೆ ಜಮಾಯಿಸಿ ಸಾವಿರಾರೂ ರೂಪಾಯಿ ಹಣ ಕಡಿತ ಯಾಕೆ ಆಗಿದೆ ಅಂತ ಮಾಹಿತಿ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.
BIG UPDATE: ‘ತಡರಾತ್ರಿ ಪಾರ್ಟಿ’ ಕೇಸ್: ಪೊಲೀಸರ ಮುಂದೆ ವಿಚಾರಣೆ ಹಾಜರಾದ ‘ಸ್ಯಾಂಡಲ್ ವುಡ್ ಸೆಲೆಬ್ರೆಟೀಸ್’
BREAKING: ದೇಶದ ಅತಿ ಉದ್ದದ ‘ಸಮುದ್ರ ಸೇತುವೆ’ ಉದ್ಘಾಟಿಸಿದ ‘ಪ್ರಧಾನಿ ಮೋದಿ’ | Atal Setu inauguration