ಶಿವಮೊಗ್ಗ: ರಾಜ್ಯ ಸರ್ಕಾರದಿಂದ ರೈತರಿಗೆ ಬರ ಪರಿಹಾರವನ್ನು 2ನೇ ಹಂತದಲ್ಲಿ ಸಂದಾಯ ಮಾಡೋದಕ್ಕೆ ಬಿಡುಗಡೆ ಮಾಡಲಾಗಿತ್ತು. ಶಿವಮೊಗ್ಗ ಜಿಲ್ಲೆ. ಕೆಲ ರೈತರಿಗೆ ಬಂದಿರದೇ ಇದ್ರೆ, ಪರಿಹಾರಕ್ಕಾಗಿ ಸಹಾಯವಾಣಿ ಸಂಖ್ಯೆಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.
ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದಾರೆ. 2023-24ನೇ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂಬುದಾಗಿ ಸರ್ಕಾರದಿಂದ ಘೋಷಣೆ ಮಾಡಲಾಗಿರುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರವು 2ನೇ ಹಂತದ ಬರ ಪರಿಹಾರವನ್ನು ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಜಿಲ್ಲೆಯ ಒಟ್ಟು 59605 ಫಲಾನುಭವಿಗಳಿಗೆ ಒಟ್ಟು ರೂ.38,74,31.015 ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಿರುತ್ತದೆ ಎಂದು ಹೇಳಿದ್ದಾರೆ.
ಪರಿಹಾರ ವಿತರಣೆ ಕುರಿತು ಕುಂದು ಕೊರತೆ ಹಾಗೂ ವಿಚಾರಣೆಗೆ ಜಿಲ್ಲೆಯ ತಾಲ್ಲೂಕುಗಳಲ್ಲಿ ಸಹಾಯವಾಣಿಯನ್ನು ಸ್ಥಾಪನೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಲು ತಿಳಿಸಿದ್ದಾರೆ.
ಹೀಗಿದೆ ಶಿವಮೊಗ್ಗ ತಾಲೂಕು ವಾರು ಸಹಾಯವಾಣಿ ಸಂಖ್ಯೆಗಳು
- ಶಿವಮೊಗ್ಗ ತಹಶೀಲ್ದಾರ್ 08128-279311
- ಭದ್ರಾವತಿ ತಹಶೀಲ್ದಾರ್ 08282-263466
- ತೀರ್ಥಹಳ್ಳಿ ತಹಶೀಲ್ದಾರ್ 08181-228239
- ಸಾಗರ ತಹಶೀಲ್ದಾರ್ 08183-226074
- ಶಿಕಾರಿಪುರ ತಹಶೀಲ್ದಾರ್ 08187-222239
- ಸೊರಬ ತಹಶೀಲ್ದಾರ್ 08184-272241
- ಹೊಸನಗರ ತಹಶೀಲ್ದಾರ್ 08185-221235
BREAKING: ಕೆ.ಆರ್ ನಗರ ‘ಸಂತ್ರಸ್ತೆ ಕಿಡ್ನ್ಯಾಪ್’ ಕೇಸ್: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
ಬೆಂಗಳೂರಲ್ಲಿ ಉಪ ವಿಭಾಗಗಳ ಹಂತದಲ್ಲಿ ‘ವಿಪತ್ತು ನಿರ್ವಹಣಾ ತಂಡಗಳ’ ನಿಯೋಜನೆ: ತುಷಾರ್ ಗಿರಿ ನಾಥ್