Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ರಾಜ್ಯದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದಕ್ಕೆ ಮನನೊಂದು ಇಬ್ಬರು ಯುವಕರು ಆತ್ಮಹತ್ಯೆ.!

04/04/2026 12:57 PM

ALERT : ವಾಹನ ಸವಾರರೇ ಗಮನಿಸಿ : ಏ.10ರಿಂದ ‘ಟೋಲ್ ಪ್ಲಾಜಾ’ಗಳಲ್ಲಿ ನಗದು ಪಾವತಿ ಬಂದ್.!

04/04/2026 12:51 PM

ವಿಜಯಪುರದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದ್ದಕ್ಕೆ, ಮರಕ್ಕೆ ನೇಣು ಬಿಗಿದುಕೊಂಡು ಯುವಕ ಸೂಸೈಡ್!

04/04/2026 12:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾವೇರಿ ಆರತಿಗೆ ರೈತರ ವಿರೋಧವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
KARNATAKA

ಕಾವೇರಿ ಆರತಿಗೆ ರೈತರ ವಿರೋಧವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

By kannadanewsnow0924/09/2025 9:08 PM

ಮೈಸೂರು : “ರೈತರ ಒಳಿತಿಗಾಗಿ ಕಾವೇರಿ ಮಾತೆಯನ್ನು ಪೂಜಿಸಿ, ಪಾರ್ಥಿಸುವ ಕಾವೇರಿ ಆರತಿ ಕಾರ್ಯಕ್ರಮಕ್ಕೆ ರೈತರ ವಿರೋಧವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಅವರು ಬುಧವಾರ ಈ ರೀತಿ ಉತ್ತರಿಸಿದರು.

ಕಾವೇರಿ ಆರತಿಗೆ ರೈತರ ವಿರೋಧವಿದೆ ಎಂದು ಕೇಳಿದಾಗ, “ರೈತರ ವಿರೋಧ ಇದೆ ಎಂದು ಯಾರು ಹೇಳಿದರು? ಪೂಜೆ ಮಾಡಲು ಯಾರಾದರೂ ವಿರೋಧ ಮಾಡುತ್ತಾರಾ? ನೀವು ವಿರೋಧ ಮಾಡಬಹುದು” ಎಂದು ತಿಳಿಸಿದರು.

“ಕೆಆರ್ ಎಸ್ ನಲ್ಲಿ ಈ ಬಾರಿ ಸಾಂಕೇತಿಕವಾಗಿ ಹಮ್ಮಿಕೊಂಡಿರುವ ಕಾವೇರಿ ಆರತಿ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡಿದ್ದೇನೆ. ನಾವು ದೊಡ್ಡದಾಗಿ ಮಾಡಬೇಕು ಎಂದುಕೊಂಡಿದ್ದ ಜಾಗದಲ್ಲಿ ಈ ಬಾರಿ ಕಾರ್ಯಕ್ರಮ ಮಾಡುತ್ತಿಲ್ಲ” ಎಂದು ತಿಳಿಸಿದರು.

ನೇರ, ನಿಷ್ಠುರ ನಡೆಯ ಕ್ರಾಂತಿಕಾರಿ ಸಾಹಿತಿ ಎಸ್.ಎಲ್. ಬೈರಪ್ಪ

ಸಾಹಿತಿ ಎಸ್.ಎಲ್. ಬೈರಪ್ಪ ಅವರ ನಿಧನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ಎಸ್.ಎಲ್. ಬೈರಪ್ಪ ಅವರು ಕ್ರಾಂತಿಕಾರಿ ಸಾಹಿತಿಗಳು. ಯಾರಿಗೂ ಹೆದರದೆ ನೇರ, ನಿಷ್ಠುರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಈ ಹಿಂದೆ ಕನಕಪುರದಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಾಹಿತ್ಯ ಲೋಕಕ್ಕೆ ಮಾತ್ರವಲ್ಲ ಎಲ್ಲಾ ರಂಗದ ವ್ಯಕ್ತಿಗಳಿಗೂ ಮಾರ್ಗದರ್ಶನ ನೀಡುವಂತಹ ವ್ಯಕ್ತಿತ್ವ ಇವರದ್ದಾಗಿತ್ತು. ತಮ್ಮಪಾಡಿಗೆ ಕೆಲಸ ಮಾಡುತ್ತಾ ಹೋದವರು. ಇಡೀ ಸಾಹಿತ್ಯ ಕ್ಷೇತ್ರದಲ್ಲಿ ಇವರ ಹೆಸರು ಶಾಶ್ವತವಾಗಿ ಉಳಿದುಕೊಂಡಿದೆ” ಎಂದರು.

“ಬೈರಪ್ಪ ಅವರ ಆತ್ಮಕ್ಕೆ ಶಾಂತಿ ದೊರಕಲಿ. ಕರ್ನಾಟಕ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತದೆ. ಅವರ ಕುಟುಂಬ ವರ್ಗ ‌ಸೇರಿದಂತೆ ಅಭಿಮಾನಿಗಳಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.

ಸರ್ಕಾರದಿಂದ ವಿಶೇಷ ಗೌರವ ನೀಡಲಾಗುವುದೇ ಎಂದು ಕೇಳಿದಾಗ, “ಈ ವಿಚಾರವಾಗಿ ನಾನು ಏಕಾಏಕಿ ತೀರ್ಮಾನ ಮಾಡಲು ಆಗುವುದಿಲ್ಲ. ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡಬೇಕು. ಹೀಗಾಗಿ ಮುಖ್ಯಮಂತ್ರಿಗಳು ಈ ವಿಚಾರವಾಗಿ ತೀರ್ಮಾನ ಮಾಡುತ್ತಾರೆ” ಎಂದರು.

ರಾಜ್ಯದಲ್ಲಿ ‘ರೇಷನ್ ಕಾರ್ಡ್’ ರದ್ದತಿಗೆ ಕಾರಣವೇನು? ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ | Ration Card Cancel

ಸೊರಬ ತಾಲ್ಲೂಕಿನ ರಸ್ತೆಗಳಲ್ಲಿ ‘ಗುಂಡಿ ದರ್ಬಾರ್’: ಮುಚ್ಚುವಂತೆ ಆಗ್ರಹಿಸಿ ‘ಬಿಜೆಪಿ ಪ್ರತಿಭಟನೆ’, ಭಾರೀ ಆಕ್ರೋಶ

Share. Facebook Twitter LinkedIn WhatsApp Email

Related Posts

SHOCKING : ರಾಜ್ಯದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದಕ್ಕೆ ಮನನೊಂದು ಇಬ್ಬರು ಯುವಕರು ಆತ್ಮಹತ್ಯೆ.!

04/04/2026 12:57 PM2 Mins Read

ವಿಜಯಪುರದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದ್ದಕ್ಕೆ, ಮರಕ್ಕೆ ನೇಣು ಬಿಗಿದುಕೊಂಡು ಯುವಕ ಸೂಸೈಡ್!

04/04/2026 12:48 PM1 Min Read

ನಾನು ಯುಗಾದಿ, ದೀಪಾವಳಿ ಹಬ್ಬದಂದು ಮಾಂಸ ತಿನ್ನುತ್ತೇನೆ ತಪ್ಪೇನು?: ಪ್ರತಾಪ್ ಸಿಂಹಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

04/04/2026 12:39 PM1 Min Read
Recent News

SHOCKING : ರಾಜ್ಯದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದಕ್ಕೆ ಮನನೊಂದು ಇಬ್ಬರು ಯುವಕರು ಆತ್ಮಹತ್ಯೆ.!

04/04/2026 12:57 PM

ALERT : ವಾಹನ ಸವಾರರೇ ಗಮನಿಸಿ : ಏ.10ರಿಂದ ‘ಟೋಲ್ ಪ್ಲಾಜಾ’ಗಳಲ್ಲಿ ನಗದು ಪಾವತಿ ಬಂದ್.!

04/04/2026 12:51 PM

ವಿಜಯಪುರದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದ್ದಕ್ಕೆ, ಮರಕ್ಕೆ ನೇಣು ಬಿಗಿದುಕೊಂಡು ಯುವಕ ಸೂಸೈಡ್!

04/04/2026 12:48 PM

ನಾನು ಯುಗಾದಿ, ದೀಪಾವಳಿ ಹಬ್ಬದಂದು ಮಾಂಸ ತಿನ್ನುತ್ತೇನೆ ತಪ್ಪೇನು?: ಪ್ರತಾಪ್ ಸಿಂಹಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

04/04/2026 12:39 PM
State News
KARNATAKA

SHOCKING : ರಾಜ್ಯದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದಕ್ಕೆ ಮನನೊಂದು ಇಬ್ಬರು ಯುವಕರು ಆತ್ಮಹತ್ಯೆ.!

By kannadanewsnow5704/04/2026 12:57 PM KARNATAKA 2 Mins Read

ಚಿಕ್ಕಮಗಳೂರು/ವಿಜಯಪುರ: ಸರಿಯಾದ ಮದುವೆ ಸಂಬಂಧ ಕೂಡಿಬರುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದು ಇಬ್ಬರು ಯುವಕರು ನೇಣಿಗೆ ಶರಣಾಗಿರುವ ಘಟನೆಗಳು ರಾಜ್ಯದ ಬೇರೆ…

ವಿಜಯಪುರದಲ್ಲಿ ಘೋರ ಘಟನೆ : ಮದುವೆಗೆ ಹೆಣ್ಣು ಸಿಗದಿದ್ದಕ್ಕೆ, ಮರಕ್ಕೆ ನೇಣು ಬಿಗಿದುಕೊಂಡು ಯುವಕ ಸೂಸೈಡ್!

04/04/2026 12:48 PM

ನಾನು ಯುಗಾದಿ, ದೀಪಾವಳಿ ಹಬ್ಬದಂದು ಮಾಂಸ ತಿನ್ನುತ್ತೇನೆ ತಪ್ಪೇನು?: ಪ್ರತಾಪ್ ಸಿಂಹಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

04/04/2026 12:39 PM

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ `ಲೋಕಾಯುಕ್ತ ಸಹಾಯವಾಣಿ’ ಫಲಕ ಅಳವಡಿಕೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

04/04/2026 12:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.