ತುಮಕೂರು: ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಪರಿಶೀಲನೆಗೆ ಬರಲು ಕೆಲ ಅಧಿಕಾರಿಗಳು ರೈತನೊಬ್ಬನಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೇ ರೈತ ಮಾತ್ರ ಲಂಚ ಕೇಳಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದು ಮಾತ್ರ ವಿನೂತನ ರೀತಿಯಲ್ಲಿ ಪ್ರತಿಭಟಿಸುವ ಮೂಲಕವಾಗಿದೆ. ಅದು ಹೇಗೆ ಅಂತ ಮುಂದೆ ಓದಿ..
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಜಕ್ಕೇನಹಳ್ಳಿಯ ಗ್ರಾಮದ ರೈತ ಪ್ರಸನ್ನ ಕುಮಾರ್ ಅವರೇ ಈ ರೀತಿಯ ಪ್ರತಿಭಟಿಸಿ ಲಂಚ ಕೇಳಿದ ಅಧಿಕಾರಿಗಳಿಗೆ ಶಾಕ್ ಕೊಟ್ಟವರು. ತಮ್ಮ ಜಮೀನಿಗೆ ರಸ್ತೆ ಇಲ್ಲ. ರಸ್ತೆ ಬಿಡಿಸಿಕೊಡಿ ಎಂಬುದಾಗಿ ಮಧುಗಿರಿ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದರು. ಆದರೇ ರೈತ ಪ್ರಸನ್ನ ಕುಮಾರ್ ಮನವಿಗೆ ಅಧಿಕಾರಿಗಳು ಕಿವಿಗೊಟ್ಟಿರಲಿಲ್ಲ. ಹೀಗಾಗಿ ಲೋಕಾಯುಕ್ತ ನ್ಯಾಯಾಲಯ ಮೊರೆಯನ್ನು ಹೋಗಿದ್ದರು. ಆಗ ಲೋಕಾಯುಕ್ತ ನ್ಯಾಯಾಲಯವು ರೈತ ಪ್ರಸನ್ನ ಕುಮಾರ್ ಅವರಿಗೆ ಒಂದು ತಿಂಗಳಿನಲ್ಲಿ ರಸ್ತೆ ನಿರ್ಮಿಸಿಕೊಡುವಂತೆ ಸೂಚಿಸಿತ್ತು.
ಲೋಕಾಯುಕ್ತ ಕೋರ್ಟ್ ಆದೇಶದಂತೆ ರಸ್ತೆ ನಿರ್ಮಿಸಿಕೊಡಬೇಕಾಗಿದ್ದಂತ ಅಧಿಕಾರಿಗಳು ಮಾತ್ರ ಆ ಕೆಲಸಕ್ಕೆ ಅಣಿಯಾಗಿರಲಿಲ್ಲ. ಬದಲಾಗಿ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು, ಪರಿಶೀಲನೆ ನಡೆಸಲು ಬರೋದಕ್ಕೆ ಕೆಲ ಅಧಿಕಾರಿಗಳು ರೈತ ಪ್ರಸನ್ನ ಕುಮಾರ್ ಅವರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ.
ಈ ಹಿನ್ನಲೆಯಲ್ಲಿ ರೈತ ಪ್ರಸನ್ನ ಕುಮಾರ್, ತಾನು ಬೆಳೆದಿದ್ದಂತ ಮೂಲಂಗಿಯೊಂದಿಗೆ ಮಧುಗಿರಿ ತಾಲ್ಲೂಕು ಕಚೇರಿಗೆ ಆಗಮಿಸಿ, ಮೈಕ್ ಹಿಡಿದು, ನನ್ನ ಬಳಿಯಲ್ಲಿ ಲಂಚ ನೀಡಲು ಹಣವಿಲ್ಲ. ನಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ನೀಡುತ್ತೇನೆ ಬನ್ನಿ, ಬನ್ನಿ ಎಂಬುದಾಗಿ ಕೂಗಿ, ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಇಂದಿನಿಂದ ಸರ್ಕಾರಿ ಸ್ವಾಮ್ಯದ ‘ಭಾರತ್ ಟ್ಯಾಕ್ಸಿ ಸೇವೆ’ ಆರಂಭ: ರೈಡ್ ಸೇರಿದಂತೆ ಇತರೆ ಮಹತ್ವದ ಮಾಹಿತಿ ಇಲ್ಲಿದೆ
ತ್ಯಾಜ್ಯ ನೀರು ಮರುಬಳಕೆ ಕುರಿತ ಸಂಶೋಧನೆಗೆ BWSSB ಮುಖ್ಯ ಅಭಿಯಂತರರಾದ ರಾಜೀವ್ ಕೆ.ಎನ್ ಗೆ ‘ಪಿಎಚ್‌ಡಿ’








