ಚಿತ್ರದುರ್ಗ: ಬೇಸಿಗೆ ಬಂದ್ರೆ ಸಾಕು ಬೋರ್ ಗಳಲ್ಲಿ ಫೇಲ್ ಆಗೋದು ಕಾಮನ್. ಅಯ್ಯೋ ಬೋರಿನಲ್ಲಿ ನೀರು ಬರುತ್ತಿಲ್ಲ. ಮತ್ತೊಂದು ಸಾಲ ಸೂಲ ಮಾಡಿ ಹಾಕಿಸಬೇಕು ಅಂತ ಅದೆಷ್ಟೋ ರೈತರು ಬೆಳೆ ಉಳಿಸಿಕೊಳ್ಳೋದಕ್ಕೆ ಪರದಾಡುತ್ತಾರೆ. ಆದ್ರೇ ಇಲ್ಲೊಬ್ಬ ರೈತ ಹಾಕಿಸಿದಂತ ಬೋರ್ ವೆಲ್ ನಲ್ಲಿ ಕೇವಲ 45 ಅಡಿಗೆ ಬರೋಬ್ಬರಿ 2.5 ಇಂಚು ನೀರು ಬರುತ್ತಿದ್ದಾವೆ. ಅದೆಲ್ಲಿ ಅನ್ನೋ ಬಗ್ಗೆ ಮುಂದೆ ಸುದ್ದಿ ಓದಿ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಈಶ್ವರಗೆರೆ ಗ್ರಾಮದ ಮರಡಪ್ಪ ಎಂಬುವರು ತಮ್ಮ ಹೊಲದಲ್ಲಿ ಮೊದಲು 260 ಅಡಿ ಬೋರ್ ವೆಲ್ ಕೊರೆಸಿದ್ದರು. ಆದ್ರೇ ಅದರಲ್ಲಿ ನೀರು ಸಿಗದೇ ಫೇಲ್ ಆಗಿತ್ತು. ಬೆಳೆಯನ್ನು ಉಳಿಸಿಕೊಳ್ಳೋ ನಿಟ್ಟಿನಲ್ಲಿ ಮತ್ತೊಂದು ಬೋರ್ ಅನ್ನು ಹಾಕಿಸಿದಂತ ಅವರಿಗೆ ಅದೃಷ್ಟವೇ ಖುಲಾಯಿಸಿತು ಅನ್ನೋ ಹಾಗೆ ನೀರು ಬರುತ್ತಿದ್ದಾವೆ.
ಎರಡನೇ ಬೋರ್ ವೆಲ್ ಅನ್ನು ಮರಡಪ್ಪ ಎಂಬ ರೈತರು 240 ಅಡಿ ಕೊರೆಸಿದ್ದಾರೆ. 45 ಅಡಿಗಳವರೆಗೆ ಸರಿಯಾದ ದಿಂಡು ಸಿಗದ ಕಾರಣ ಕೇಸಿಂಗ್ ಹಾಕಲಾಗಿದೆ. ಆ ಬಳಿಕ ಕೇಸಿಂಗ್ ಇಳಿದಿಲ್ಲ. ಅಲ್ಲಿಂದ ಮುಂದಕ್ಕೆ ಕಲ್ಲು ಬಿದ್ದ ಕಾರಣ 240 ಅಡಿಗಳನ್ನು ಮಾತ್ರವೇ ಕೊರೆಸಲಾಗಿದ್ದು, 3 ಇಂಚಿನಷ್ಟು ನೀರು ಬಿದ್ದಿದೆ.
ಕಳೆದ ಶುಕ್ರವಾರದಂದು ಮೋಟಾರು, ಪಂಪ್ ಅನ್ನು ಕೊಳವೆ ಬಾವಿಗೆ ಇಳಿಬಿಟ್ಟಾಗ ಅದು ಕೇವಲ 45 ಅಡಿಯಷ್ಟು ಕೇಸಿಂಗ್ ಹಾಕಿದ್ದರ ವರೆಗೆ ಮಾತ್ರವೇ ಇಳಿದಿದೆ. ಆ ಬಳಿಕದ ಮತ್ತಷ್ಟು ಆಳಕ್ಕೆ ಕೊಳವೆ ಭಾವಿ ಕಲ್ಲಿನಿಂದ ಮುಚ್ಚಿದ ಕಾರಣ ಮೋಟಾರ್ ಇಳಿದಿಲ್ಲ. ಆಗಿದ್ದಾಗಲೇ ಅಂತ ಅಷ್ಟೇ ಅಡಿಗೆ ಎರಡು ಕೇಸಿಂಗ್ ಪೈಪ್ ಗಳನ್ನು ಇಳಿಸಿದ್ದಾರೆ.
ಮೋಟಾರ್ ರನ್ ಮಾಡಿ ನೋಡಿದ್ರೇ ಬರೋಬ್ಬರಿ 2.5 ಇಂಚು ನೀರು ಕೇವಲ 45 ಅಡಿಗಳಿಂದಲೇ ಬರುತ್ತಿದೆ. ಹೀಗಾಗಿ ಆತಂಕದಲ್ಲಿದ್ದಂತ ರೈತ ಮರಡಪ್ಪನ ಹಾಗೂ ಮಕ್ಕಳ ಮೊಗದಲ್ಲಿ ಸಂತಸ ಮನೆ ಮಾಡಿದೆ. ಜೊತೆಗೆ ಇದಪ್ಪ ರೈತನ ಅದೃಷ್ಠ ಅನ್ನೋದು ಈಶ್ವರಗೆರೆ ಗ್ರಾಮದ ಗ್ರಾಮಸ್ಥರ ಮಾತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ರೈತ ಮರಡಪ್ಪನವರ ಪುತ್ರ ತಿಪ್ಪೇಸ್ವಾಮಿ +919535895520 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಪಡೆಯಬಹುದಾಗಿದೆ. ಈ ಕೆಳಗಿನ ಲಿಂಕ್ ನಲ್ಲಿ ವೀಡಿಯೋ ಇದೆ ನೋಡಿ.
ವರದಿ: ವಸಂತ ಬಿ ಈಶ್ವರಗೆರೆ
ಇಸ್ರೇಲಿನಲ್ಲಿ ಕ್ಷಿಪಣಿ ದಾಳಿಗೆ ಕೇರಳದ ವ್ಯಕ್ತಿ ಬಲಿ: ಭಾರತೀಯರಿಗೆ ಈ ಸಲಹೆ ನೀಡಿದ ಕೇಂದ್ರ ಸರ್ಕಾರ
ಮಾರ್ಚ್14 ಅಥವಾ 15 ರಂದು ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ, 7 ಹಂತಗಳಲ್ಲಿ ಮತದಾನ: ವರದಿ