ದಾವಣಗೆರೆ: ವಿಮಾನದಲ್ಲಿ ಸಂಚರಿಸಬೇಕು ಎಂಬುದು ಹಲವರ ಬಯಕೆ. ಹೀಗೆ ಕೂಲಿ ಕಾರ್ಮಿಕರಾಗಿದ್ದಂತ ಆ ಮಹಿಳೆಯರಲ್ಲೂ ಆಸೆ ಬಂದಿತ್ತು. ಇಂತಹ ಮಹಿಳಾ ಕೂಲಿ ಕಾರ್ಮಿಕರ ಆಸೆಯನ್ನು ರೈತನೊಬ್ಬ ಈಡೇರಿಸಿದ್ದಾನೆ.
ಹೌದು. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಶಿರಗನಹಳ್ಳಿ ರೈತನೊಬ್ಬ, ಮಹಿಳಾ ಕೂಲಿ ಕಾರ್ಮಿಕರ ವಿಮಾನದ ಆಸೆಯನ್ನು ಈಡೇರಿಸಿದ್ದಾರೆ. ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಂತ ಮಹಿಳಾ ಕೂಲಿ ಕಾರ್ಮಿಕರಿಗೆ ವಿಮಾನ ಪ್ರಯಾಣ ಮಾಡಿಸಿದ್ದಾರೆ.
ಶಿರಗನಹಳ್ಳಿಯ ರೈತ ವಿಶ್ವನಾಥ್ ಎಂಬುವರೇ ಹತ್ತು ಜನ ಮಹಿಳಾ ಕೂಲಿ ಕಾರ್ಮಿಕರಿಗೆ ವಿಮಾನ ಮಾಡಿಸಿ, ಆಸೆ ಪೂರೈಸಿದಂತವರಾಗಿದ್ದಾರೆ. ಅವರ ತೋಟದಲ್ಲಿ ಕೂಲಿ ಕೆಲಸಕ್ಕೆ ಇದ್ದಂತ ಮಹಿಳೆಯರು ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣಿಸಬೇಕು ಎನ್ನುವಂತ ಆಸೆ ವ್ಯಕ್ತ ಪಡಿಸಿದ್ದಾರೆ.
ಈ ಆಸೆಯನ್ನು ಕಾರ್ಯರೂಪಕ್ಕೆ ತಂದು, ಶಿವಮೊಗ್ಗ ಏರ್ ಪೋರ್ಟ್ ನಿಂದ ಗೋವಾದವರೆಗೆ ವಿಮಾನ ಪ್ರಯಾಣ ಮಾಡಿಸಿದ್ದಾರೆ. ಆ ಮೂಲಕ ವಿಮಾನಯಾನ ಭಾಗ್ಯವನ್ನು ರೈತ ಕಲ್ಪಿಸಿದ್ದಾನೆ. ರೈತ ವಿಶ್ವನಾಥ್ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ರಾಜ್ಯದಲ್ಲಿ ಯಾವುದೇ ಎಸ್ಕಾಂಗಳು ನಷ್ಟದಲ್ಲಿಲ್ಲ- ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ
GOOD NEWS: ರಾಜ್ಯದ ರೈತರಿಗೆ ಗುಡ್ ನ್ಯೂಸ್: ಕೃಷಿಗೆ 7 ಗಂಟೆ ವಿದ್ಯುತ್ ಪೂರೈಕೆ – ಸಚಿವ ಕೆ.ಜೆ ಜಾರ್ಜ್