ತುಮಕೂರು: ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿದ್ದರೂ, ಅದು ಸರ್ಕಾರಿ ಭೂಮಿ ಒತ್ತುವರಿ ಜಾಗ ಎಂಬುದಾಗಿ ತೆರವುಗೊಳಿಸೋದಕ್ಕೆ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆಯಲ್ಲಿ ಅಧಿಕಾರಿಗಳ ಮುಂದೆಯೇ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಂತ ಘಟನೆ ಶಿರಾದಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಲ್ಲಿಗೋನಹಳ್ಳಿಯ ಸರ್ವೆ ನಂ.118ನ ಜಮೀನಿನಲ್ಲಿ ರೈತ ಕಾಂತರಾಜು 60 ರಿಂದ 70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದರು. ಈ ಭೂಮಿ ಸರ್ಕಾರಿ ಸ್ವತ್ತಾಗಿದ್ದು, ತೆರವುಗೊಳಿಸೋದಕ್ಕೆ ಶಿರಾ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪೊಲೀಸರ ಜೊತೆಗೂಡಿ ಮುಂದಾಗಿದ್ದರು.
ಈ ವೇಳೆಯಲ್ಲಿ ರೈತ ಕಾಂತರಾಜು ಯಾವುದೇ ನೋಟಿಸ್ ನೀಡದೇ ತಮ್ಮ ಜಮೀನು ತೆರವುಗೊಳಿಸೋದಕ್ಕೆ ಬಂದಿದ್ದೀರಿ. ಇದು ಕಾನೂನು ಕ್ರಮದ ಸರಿಯಾದ ನಿರ್ಧಾರವಲ್ಲ. ಇದನ್ನು 60-70 ವರ್ಷಗಳಿಂದ ನಾವು ಉಳುಮೆ ಮಾಡಿಕೊಂಡು ಬಂದಿದ್ದೇವೆ. ಈ ಭೂಮಿಯಲ್ಲಿನ ಕೃಷಿಯ ಆದಾಯವನ್ನೇ ನಂಬಿಕೊಂಡು ಬದುಕುತ್ತಿರುವಂತ ಕುಟುಂಬವಾಗಿದೆ ಎಂಬುದಾಗಿ ಹೇಳಿದರೂ ಅಧಿಕಾರಿಗಳು ಕರಗಲಿಲ್ಲ.
ರೈತ ಕಾಂತರಾಜು ಒತ್ತುವರಿ ಜಮೀನು ತೆರವುಗೊಳಿಸೋದಕ್ಕೆ ಮುಂದಾದ ವೇಳೆಯಲ್ಲಿ ಅವರ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಕೂಡಲೇ ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಭತ್ತ, ತೊಗರಿ ಖರೀದಿ ಕೇಂದ್ರ ತೆರೆಯದಿದ್ದರೆ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿದು ಪ್ರತಿಭಟನೆ: ಆರ್.ಅಶೋಕ ಎಚ್ಚರಿಕೆ
BREAKING : 11 ಮಂದಿ `DYSP’ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ | DYSP Transfer