ಉಡುಪಿ : ಕನ್ನಡದ ಖ್ಯಾತ ಚುಟುಕು ಕವಿ ಹಾಗೂ ದಿನಕರ ದೇಸಾಯಿ ಪ್ರಶಸ್ತಿ ವಿಜೇತ ಉಪ್ಪುಂದ ಗಣೇಶ್ ವೈದ್ಯ ಅವರು ಹೃದಯಾಘಾದಿಂದ ನಿಧನರಾಗಿದ್ದಾರೆ.
ಸಾಹಿತ್ಯ ಲೋಕದಲ್ಲಿ ತಮ್ಮ ವಿನೂತನ ಚುಟುಕು ಕವಿತೆಗಳ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಗಣೇಶ್ ವೈದ್ಯ, ಅನೇಕ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಿ ಮಾರ್ಗ ದರ್ಶನ ನೀಡಿದ್ದರು. ದ್ವಾರಕ ಚೆಸ್ ಸ್ಕೂಲ್‌ನ ಸಂಸ್ಥಾಪಕರಾಗಿ, ಕುವೆಂಪು ಯೂನಿವರ್ಸಿಟಿಯ ಮಾಜಿ ಚೆಸ್ ಕೋಚ್ ಆಗಿಯೂ, ಜ್ಯೋತಿಷ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಹೆಸರನ್ನು ಮಾಡಿದ್ದರು.
ಗಣೇಶ್ ವೈದ್ಯ ಅವರ ಅಗಲಿಕೆಗೆ ಸಾಹಿತ್ಯಪ್ರೇಮಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.








