ಬೆಂಗಳೂರು: ಕಳೆದ 24 ವರ್ಷದಿಂದ ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅನುಕಂಪದ ಆಧಾರದ ನೌಕರಿಗೆ ಸೇರಿದ್ದಂತ ಅವರು ಸಹಾಯ ಆಡಳಿತಾಧಿಕಾರಿಯಾಗಿಯೂ ಕೆಲಸ ಮಾಡ್ತಿದ್ದರು. ಆದ್ರೇ 24 ವರ್ಷಗಳ ಬಳಿಕ ಸುಳ್ಳಿ ಆದಾಯ ಪ್ರಮಾಣ ಪತ್ರ ನೀಡಿದ ಕಾರಣಕ್ಕೆ ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದಂತ ಡಿ.ರಂದೀಪ್ ಅವರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಆರ್. ವಾಣಿ, ಸಹಾಯಕ ಆಡಳಿತಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆರೋಗ್ಯ ಸೌಧ, ಬೆಂಗಳೂರು ಇವರು ಅಕ್ರಮವಾಗಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೇಮಕಾತಿ ಪಡೆದಿರುತ್ತಾರೆಂಬ ಎಂದು ಸಿ. ಆರ್. ಮಂಜುನಾಥ ಹಾಸನ ಶಿವಣ್ಣ ಕೆ.ಹೆಚ್. ಮತ್ತು ಮಂಜುನಾಥ ನಿಲಸೋಗೆ ಬೆಂಗಳೂರು ಇವರುಗಳು ಮೇಲೆ ಓದಲಾದ (1) ಮತ್ತು (2)ರಲ್ಲಿ ದೂರು ಸಲ್ಲಿಸಿದ್ದು ಸದರಿ ದೂರಿಗೆ ಸಂಬಂಧಿಸಿದಂತೆ ಮುಖ್ಯ ಜಾಗೃತಾಧಿಕಾರಿಗಳು, ಜಾಗೃತಕೋಶ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಇವರು ತನಿಖೆ ನಡೆಸಿ ವರದಿಯನ್ನು ಮೇಲೆ ಓದಲಾದ (3)ರಲ್ಲಿ ಸಲ್ಲಿಸಿರುತ್ತಾರೆ ಎಂದಿದ್ದಾರೆ.
ತನಿಖಾ ವರದಿಯಲ್ಲಿ ಸದರಿಯವರು ಅನುಕಂಪದ ಆಧಾರದ ಮೇಲೆ ಪಡೆದಿರುವ ನೇಮಕಾತಿಯು ಕರ್ನಾಟಕ ನಾಗರೀಕ ಸೇವಾ(ಅನುಕಂಪದ ಆಧಾರಿತ ನೇಮಕಾತಿ)ನಿಯಮಗಳು 1996ರ ನಿಯಮ 4(1)(ಎ) ಮತ್ತು 4(1) (ಬಿ) ರ ಪ್ರಕಾರ ದಿವಂಗತ ನೌಕರರ ಕುಟುಂಬದ ಆದಾಯ ನಿಗದಿಪಡಿಸಿದ ಆದಾಯಕ್ಕಿಂತ ಹೆಚ್ಚಿಗೆ ಇರಬಾರದು ಎಂದು ಉಲ್ಲೇಖವಿದ್ದರೂ ಸದರಿ ನಿಯಮವನ್ನು ಪಾಲಿಸದೇ ಇಲಾಖೆಗೆ ಸುಳ್ಳು, ಆದಾಯ ದೃಢೀಕರಣ ಮಾಹಿತಿ ನೀಡಿ, ಸತ್ಯವನ್ನು ಮರೆಮಾಚಿ ಸರ್ಕಾರಕ್ಕೆ ವಂಚಿಸಿ ಮೋಸವೆಸಗಿ ನೇಮಕಗೊಂಡಿರುವುದು ಲಭ್ಯ ದಾಖಲೆಗಳು ಮತ್ತು ಸಾಕ್ಷ್ಯಗಳಿಂದ ಸಾಬೀತಾಗಿರುತ್ತದೆ ಎಂದು ನಿಯಮಾನುಸಾರ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.
ತನಿಖಾ ವರದಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಇವರ ವಿರುದ್ಧದ ಆರೋಪವು ಗಂಭೀರ ಸ್ವರೂಪದಿಂದ ಕೂಡಿರುವುದರಿಂದ ಆರ್. ವಾಣಿ, ಸಹಾಯಕ ಆಡಳಿತಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆರೋಗ್ಯ ಸೌಧ, ಬೆಂಗಳೂರು ಈ ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲು ತೀರ್ಮಾನಿಸಿದೆ ಎಂದಿದ್ದಾರೆ.
ಪುಸ್ತಾವನೆಯಲ್ಲಿ ವಿವರಿಸಲಾದ ಕಾರಣಗಳಿಗಾಗಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 1957ರ ನಿಯಮ 10(1)(ಡಿ) ಮೇರೆಗೆ ಪುದತ್ತವಾದ ಅಧಿಕಾರವನ್ನು ಚಲಾಯಿಸಿ ಡಿ. ರಂದೀಪ್ ಭಾ.ಆ.ಸೇ., ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಆದ ನಾನು, ಆರ್. ವಾಣಿ, ಸಹಾಯಕ ಆಡಳಿತಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆರೋಗ್ಯ ಸೌಧ ಬೆಂಗಳೂರು ಇವರ ವಿರುದ್ಧದ ಆರೋಪದ ಬಗ್ಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿರುತ್ತೇನೆ. ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆ ಪಡೆಯನ್ನು ಪಡೆಯುವ ಸಲುವಾಗಿ ಲೀನ್ ಅನ್ನು ಜಿಲ್ಲಾ ಆಸ್ಪತ್ರೆ ಇಲ್ಲಿ ಖಾಲಿ ಇರುವ ಸಹಾಯಕ ಆಡಳಿತಾಧಿಕಾರಿಗಳ ಹುದ್ದೆಗೆ ಸ್ಥಳಾಂತರಿಸಲಾಗಿದೆ. ಸದರಿಯವರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯನ್ನು ಪಡೆಯದೆ ಕೇಂದ್ರ ಸ್ಥಾನವನ್ನು ಬಿಡತಕ್ಕದಲ್ಲವೆಂದು ಆದೇಶಿಸಿದ್ದಾರೆ.
2024ರ ‘ಟಿ20 ವಿಶ್ವಕಪ್’ಗೆ $11.25 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ ‘ICC’ | T20 World Cup 2024
‘ಬ್ರದರ್’ ಎನ್ನುವ ಕಾರಣಕ್ಕೆ ಸಿದ್ಧರಾಮಯ್ಯ ಸರ್ಕಾರ ‘ಈ ಪೆಡ್ಲರ್’ಗೂ ‘ಅಮಾಯಕ’ ಪಟ್ಟ ಕಟ್ಟಿದರೆ ಅಚ್ಚರಿ ಇಲ್ಲ: ಬಿಜೆಪಿ