ಮಂಡ್ಯ: ಜಿಲ್ಲೆಯಲ್ಲಿ ಹಲವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿದಂತ ನಕಲಿ ಸರ್ಕಾರಿ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಂತ ಮಂಡ್ಯ ಪೂರ್ವ ಠಾಣೆಯ ಪೊಲೀಸರು ಹೆಚ್.ಸಿ ವೆಂಕಟೇಶ್ ಎಂಬಾತನನ್ನು ಬಂಧಿಸಿದ್ದಾರೆ. ಮಂಡ್ಯದ ತಾವರೆಗೆರೆ ನಿವಾಸಿಯಾದಂತ ಹೆಚ್.ಸಿ ವೆಂಕಟೇಶ್ ಎಂಬವರೋ ಬಂಧನಕ್ಕೆ ಒಳಗಾದಂತ ನಕಲಿ ಸರ್ಕಾರಿ ಅಧಿಕಾರಿಯಾಗಿದ್ದಾರೆ.
ಬಂಧಿತ ಆರೋಪಿ ಹೆಚ್.ಸಿ ವೆಂಕಟೇಶ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ಕೋಟಿ ಕೋಟಿ ವಂಚಿಸಿದ್ದರು. ಅಲ್ಲದೇ ಸಿಎಂ, ಸಿಎಸ್, ಜಿಲ್ಲಾಧಿಕಾರಿ, ಹಿರಿಯ ಅಧಿಕಾರಿಗಳ ಹೆಸರು, ಸಹಿ ಕೂಡ ದುರ್ಬಳಕೆ ಮಾಡಿಕೊಂಡಿರುವಂತ ಆರೋಪ ಕೇಳಿ ಬಂದಿತ್ತು.
ಅಬಕಾರಿ ಇಲಾಖೆಯಲ್ಲಿ ಚಾಲಕರ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿ ಹೆಚ್.ಸಿ ವೆಂಕಟೇಶ್ ಮೂವರು ಅಭ್ಯರ್ಥಿಗಳಇಂದ 45 ಲಕ್ಷ ರೂ ಪಡೆದು ವಂಚಿಸಿದ್ದರು. ಈ ಸಂಬಂಧ ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲಾಗಿದ್ದವು. ಈ ಹಿನ್ನಲೆಯಲ್ಲಿ ನಕಲಿ ಸರ್ಕಾರಿ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.
‘NHM ನೌಕರ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ವಿಮಾ ಯೋಜನೆಗೆ ಅಕ್ಸಿಸ್ ಬ್ಯಾಂಕ್ ಜೊತೆಗೆ ಒಪ್ಪಂದಕ್ಕೆ ಸಹಿ