Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ಪ್ರಯಾಣ ದರದ ಜಗಳಕ್ಕೆ ಐಟಿ ಉದ್ಯೋಗಿಯ ಬೆರಳನ್ನೇ ಕಚ್ಚಿ ತುಂಡರಿಸಿದ ಟ್ಯಾಕ್ಸಿ ಚಾಲಕ!

20/03/2026 3:23 PM

BIG NEWS: ರಾಜ್ಯದಲ್ಲಿ ‘ತಾಲ್ಲೂಕು ಕಚೇರಿ’ಯಲ್ಲೇ ‘ನಕಲಿ ದಾಖಲೆ ಸೃಷ್ಠಿ ಜಾಲ’ ಪತ್ತೆ: ಆರು ಮಂದಿ ವಿರುದ್ಧ ‘FIR’ ದಾಖಲು

20/03/2026 3:20 PM

BREAKING : ದೇಶಾದ್ಯಂತ ‘ಪ್ರೀಮಿಯಂ ಪೆಟ್ರೋಲ್’ ಬೆಲೆ ಹೆಚ್ಚಳ ; ಇಂದಿನಿಂದ್ಲೇ ಹೊಸ ದರ ಜಾರಿ |Petrol Price Hike

20/03/2026 3:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯದಲ್ಲಿ ‘ತಾಲ್ಲೂಕು ಕಚೇರಿ’ಯಲ್ಲೇ ‘ನಕಲಿ ದಾಖಲೆ ಸೃಷ್ಠಿ ಜಾಲ’ ಪತ್ತೆ: ಆರು ಮಂದಿ ವಿರುದ್ಧ ‘FIR’ ದಾಖಲು
KARNATAKA

BIG NEWS: ರಾಜ್ಯದಲ್ಲಿ ‘ತಾಲ್ಲೂಕು ಕಚೇರಿ’ಯಲ್ಲೇ ‘ನಕಲಿ ದಾಖಲೆ ಸೃಷ್ಠಿ ಜಾಲ’ ಪತ್ತೆ: ಆರು ಮಂದಿ ವಿರುದ್ಧ ‘FIR’ ದಾಖಲು

By kannadanewsnow0920/03/2026 3:20 PM

ಶಿವಮೊಗ್ಗ: ರಾಜ್ಯದಲ್ಲಿ ತಾಲ್ಲೂಕು ಕಚೇರಿಯಲ್ಲೇ ನಕಲಿ ದಾಖಲೆ ಸೃಷ್ಠಿ ಮಾಡುತ್ತಿದ್ದಂತ ಜಾಲವೊಂದು ಪತ್ತೆಯಾಗಿದೆ.  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಛೇರಿಯಲ್ಲಿ ಭೂ ಸುರಕ್ಷಾ ಯೋಜನೆಯಡಿ ನಡೆಯುತ್ತಿರುವ ಕಂದಾಯ ದಾಖಲೆಗಳ ಗಣಕೀಕರಣ ಕಾರ್ಯದಲ್ಲಿ ನಕಲಿ ದಾಖಲೆಗಳನ್ನು ಸೇರಿಸಲು ಯತ್ನಿಸಿದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ತಹಶೀಲ್ದಾರ್ ರಶ್ಮಿ ಅವರು ನೀಡಿದ ದೂರಿನ ಮೇರೆಗೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ: ದಿನಾಂಕ 18-03-2026 ರಂದು ಮಧ್ಯಾಹ್ನ ತಾಲೂಕು ಕಛೇರಿಯಲ್ಲಿ ಗಣಕೀಕರಣ ಕಾರ್ಯ ನಡೆಯುತ್ತಿದ್ದಾಗ, ಚುನಾವಣಾ ಶಿರಸ್ತೇದಾರರಾದ ರಾಮಾಂಜನೇಯ ಅವರು ಮೂರು ದರಖಾಸ್ತು ಮಂಜೂರಾತಿ ಕಡತಗಳನ್ನು ಅನಧಿಕೃತವಾಗಿ ಡಾಟಾ ಎಂಟ್ರಿ ಆಪರೇಟರ್‌ಗಳ ಮೂಲಕ ಸ್ಕ್ಯಾನ್ ಮಾಡಿಸಿ ಕಂಪ್ಯೂಟರ್‌ಗೆ ಸೇರಿಸಲು ಮುಂದಾಗಿದ್ದರು. ಈ ಕಡತಗಳು ನಕಲಿ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅವರು ವಿಚಾರಣೆ ನಡೆಸಿದಾಗ ದೊಡ್ಡ ಹಗರಣವೊಂದು ಬಯಲಾಗಿದೆ.

ತನಿಖೆಯಲ್ಲಿ ಬಯಲಾದ ಅಂಶಗಳು:

  • ಲಂಚದ ಆಮಿಷ: ಭೂಮಾಪನ ಇಲಾಖೆಯ ಜವಾನ ಅವಿನಾಶ್ ಎಂಬುವವರು ಈ ನಕಲಿ ಕಡತಗಳನ್ನು ನೀಡಿದ್ದರು. ವಿಚಾರಣೆ ವೇಳೆ ಅವರು, ಸಾಗರದ ವಕೀಲರಾದ ಷಣ್ಮುಖ ಎಂಬುವವರು ಈ ನಕಲಿ ದಾಖಲೆಗಳನ್ನು ನೈಜ ಕಡತಗಳ ಜೊತೆ ಸೇರಿಸಲು ತನಗೆ 2 ಲಕ್ಷ ರೂಪಾಯಿ ಹಣ ನೀಡಿದ್ದರು ಎಂದು ಒಪ್ಪಿಕೊಂಡಿದ್ದಾರೆ.
  • ಹಣ ಅಮಾನತ್ತು: ಆರೋಪಿಗಳ ಹೇಳಿಕೆಯ ಮೇರೆಗೆ ಕಾರೊಂದರ (ಬ್ರೆಜಾ ಸಂಖ್ಯೆ KA 15 P 5706) ಡ್ಯಾಶ್‌ಬೋರ್ಡ್‌ನಲ್ಲಿ ಇರಿಸಲಾಗಿದ್ದ ₹1,75,000 ನಗದನ್ನು ಪೊಲೀಸರು ಪಂಚನಾಮೆಯ ಮೂಲಕ ವಶಪಡಿಸಿಕೊಂಡಿದ್ದಾರೆ.
  • ನಕಲಿ ಕಡತಗಳು: ಚನ್ನಶೆಟ್ಟಿಕೊಪ್ಪ ಮತ್ತು ಹಿರೇಮನೆ ಗ್ರಾಮಗಳಿಗೆ ಸಂಬಂಧಿಸಿದ ಸುಮಾರು 66 ಪುಟಗಳ ನಕಲಿ ಮಂಜೂರಾತಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಆರೋಪಿಗಳ ಮೇಲೆ ಸಾಗರ ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲು:

ಈ ಪ್ರಕರಣ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಎ1 ಆರೋಪಿಯಾಗಿ ಸಾಗರ ತಹಶೀಲ್ದಾರ್ ಕಚೇರಿಯ ಶಿರೇಸ್ತೇದಾರರಾದಂತ ರಾಮಾಂಜನೇಯ, ಎ2 ಆರೋಪಿಯಾಗಿ ಜವಾನ ಅವಿನಾಶ್ ಎನ್ ಎಂ, ಎ3 ಆರೋಪಿಯಾಗಿ ವಕೀಲ ಷಣ್ಮುಖ, ಎ4 ಆರೋಪಿಯಾಗಿ ಹರಟೆ ಧರ್ಮಪ್ಪ, ಎ5 ಆರೋಪಿಯಾಗಿ ಲಕ್ಷ್ಮಣ ಪೂಜಾರಿ ಹಾಗೂ ಎ6 ಆರೋಪಿಯಾಗಿ ಹಾಲಮ್ಮ ಎಂಬುವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ವಿವಿಧ ಸೆಕ್ಷನ್‌ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. 

ಒಟ್ಟಾರೆಯಾಗಿ ರಾಜ್ಯದಲ್ಲೊಂದು ತಾಲ್ಲೂಕು ಕಚೇರಿಯಲ್ಲೇ ಬೃಹತ್ ನಕಲಿ ದಾಖಲೆ ಸೃಷ್ಠಿಸುವಂತ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಹಶೀಲ್ದಾರ್ ಕಚೇರಿಯಲ್ಲೇ ಹೀಗೆ ನಕಲಿ ದಾಖಲೆ ಸೃಷ್ಠಿಸೋ ಕೆಲಸ ಆದ್ರೇ, ಇನ್ನೂ ಜನಸಾಮಾನ್ಯರ ಪಾಡೇನು ಎಂಬ ಯಕ್ಷಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ಜಾಗತಿಕ ತೈಲ-ಅನಿಲ ಬಿಕ್ಕಟ್ಟು: ಅಗತ್ಯ ಸರಕುಗಳ ಕಾಯ್ದೆಯಡಿ ಕಠಿಣ ಕ್ರಮಕ್ಕೆ ಮುಂದಾದ ಭಾರತ ಸರ್ಕಾರ

BREAKING : ಉಪಚುನಾವಣೆ ಕಾವು : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ತಾಯಿಯೊಂದಿಗೆ ಬಂದು ನಾಮಪತ್ರ ಸಲ್ಲಿಸಿದ ಸಮರ್ಥ

ತೆರಿಗೆದಾರರೇ ಗಮನಿಸಿ: ಏಪ್ರಿಲ್ 1ರಿಂದ ಹೊಸ ‘ಆದಾಯ ತೆರಿಗೆ ನಿಯಮ 2026’ ಜಾರಿ; ಸರ್ಕಾರದ ಅಧಿಕೃತ ಅಧಿಸೂಚನೆ ಪ್ರಕಟ

Share. Facebook Twitter LinkedIn WhatsApp Email

Related Posts

ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆಯ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲುವು: ಬಿ.ವೈ.ವಿಜಯೇಂದ್ರ

20/03/2026 2:59 PM2 Mins Read

Rain Alert: ಇಂದು, ನಾಳೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ‘ಮಳೆ’: ಮಾ.24ರಿಂದ ರಾಜ್ಯಾಧ್ಯಂತ ಹೆಚ್ಚಾಗಲಿದೆ ‘ಬಿಸಿಲು’

20/03/2026 2:53 PM1 Min Read

ಠಾಣೆಯಲ್ಲಿ ರಾಜಿ ಮಾಡಿಕೊಂಡರೂ ತಣಿಯದ ಕೋಪ: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವಿವಾಹಿತೆಯ ಬರ್ಬರ ಹತ್ಯೆ!

20/03/2026 2:34 PM1 Min Read
Recent News

Shocking: ಪ್ರಯಾಣ ದರದ ಜಗಳಕ್ಕೆ ಐಟಿ ಉದ್ಯೋಗಿಯ ಬೆರಳನ್ನೇ ಕಚ್ಚಿ ತುಂಡರಿಸಿದ ಟ್ಯಾಕ್ಸಿ ಚಾಲಕ!

20/03/2026 3:23 PM

BIG NEWS: ರಾಜ್ಯದಲ್ಲಿ ‘ತಾಲ್ಲೂಕು ಕಚೇರಿ’ಯಲ್ಲೇ ‘ನಕಲಿ ದಾಖಲೆ ಸೃಷ್ಠಿ ಜಾಲ’ ಪತ್ತೆ: ಆರು ಮಂದಿ ವಿರುದ್ಧ ‘FIR’ ದಾಖಲು

20/03/2026 3:20 PM

BREAKING : ದೇಶಾದ್ಯಂತ ‘ಪ್ರೀಮಿಯಂ ಪೆಟ್ರೋಲ್’ ಬೆಲೆ ಹೆಚ್ಚಳ ; ಇಂದಿನಿಂದ್ಲೇ ಹೊಸ ದರ ಜಾರಿ |Petrol Price Hike

20/03/2026 3:17 PM

ತಪ್ಪು ನಂಬರ್‌ಗೆ ಯುಪಿಐ (UPI) ಹಣ ಕಳುಹಿಸಿದ್ದೀರಾ? ಚಿಂತಿಸಬೇಡಿ, ಈ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ ಹಣ ಮರಳಿ ಪಡೆಯಿರಿ!

20/03/2026 3:02 PM
State News
KARNATAKA

BIG NEWS: ರಾಜ್ಯದಲ್ಲಿ ‘ತಾಲ್ಲೂಕು ಕಚೇರಿ’ಯಲ್ಲೇ ‘ನಕಲಿ ದಾಖಲೆ ಸೃಷ್ಠಿ ಜಾಲ’ ಪತ್ತೆ: ಆರು ಮಂದಿ ವಿರುದ್ಧ ‘FIR’ ದಾಖಲು

By kannadanewsnow0920/03/2026 3:20 PM KARNATAKA 2 Mins Read

ಶಿವಮೊಗ್ಗ: ರಾಜ್ಯದಲ್ಲಿ ತಾಲ್ಲೂಕು ಕಚೇರಿಯಲ್ಲೇ ನಕಲಿ ದಾಖಲೆ ಸೃಷ್ಠಿ ಮಾಡುತ್ತಿದ್ದಂತ ಜಾಲವೊಂದು ಪತ್ತೆಯಾಗಿದೆ.  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕಛೇರಿಯಲ್ಲಿ…

ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆಯ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲುವು: ಬಿ.ವೈ.ವಿಜಯೇಂದ್ರ

20/03/2026 2:59 PM

Rain Alert: ಇಂದು, ನಾಳೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ‘ಮಳೆ’: ಮಾ.24ರಿಂದ ರಾಜ್ಯಾಧ್ಯಂತ ಹೆಚ್ಚಾಗಲಿದೆ ‘ಬಿಸಿಲು’

20/03/2026 2:53 PM

ಠಾಣೆಯಲ್ಲಿ ರಾಜಿ ಮಾಡಿಕೊಂಡರೂ ತಣಿಯದ ಕೋಪ: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವಿವಾಹಿತೆಯ ಬರ್ಬರ ಹತ್ಯೆ!

20/03/2026 2:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.