ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಹೆಸರಿನಲ್ಲಿ ನಕಲಿ ಖಾತೆ ತೆರೆದಿರುವಂತ ಕಿಡಿಗೇಡಿಗಳು, ಸ್ಟಾರ್ ನಟರಿಗೆ ಅವಹೇಳನ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಎಸ್.ನಾರಾಯಣ್ ದೂರು ನೀಡಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಖಾತೆ ತೆರೆದಿದ್ದಾರೆ. ಇಂತಹ ಖಾತೆಯ ಮೂಲಕ ಕೆಲವು ಸ್ಟಾರ್ ನಟರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಕೂಡ ಮಾಡಿದ್ದಾರೆ.
ಕಿಡಿಗೇಡಿಗಳು ತಮ್ಮ ನಕಲಿ ಖಾತೆ ತೆರೆದು ಸ್ಟಾರ್ ನಟರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರಿಂದ ನಟ ಎಸ್.ನಾರಾಯಣ್ ಅವರಿಗೆ ಮುಜುಗರವನ್ನು ಉಂಟು ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಎಸ್ ನಾರಾಯಣ್ ಅವರು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಅವರನ್ನು ಭೇಟಿಯಾಗಿ, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
BREAKING: ಅಲಾಸ್ಕಾ, ಹವಾಯಿಯಲ್ಲಿ ಸುನಾಮಿ: 10 ಅಡಿ ಎತ್ತರದ ಅಲೆಗಳ ಅಬ್ಬರ !
ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ