ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮ 2022 ರನ್ವಯ ದಿನಾಂಕ: 13-03-2024 ರಂದು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 277 (ಆರ್‍ಪಿಸಿ) ಗ್ರೂಪ್-ಬಿ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಜಾರಿ ಮಾಡಲಾಗಿತ್ತು. ಈ ಅಧಿಸೂಚನೆಯಲ್ಲಿನ ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ (ವಿಭಾಗ-1) ಹುದ್ದೆಗಳಿಗೆ ಬಿ.ಟೆಕ್ ಪದವಿಯನ್ನು ಸಹ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕವನ್ನು ಮೇ 24 ರವರೆಗೆ ವಿಸ್ತರಿಸಲಾಗಿದೆ.
ದಿನಾಂಕ: 13-03-2024ರ ಅಧಿಸೂಚನೆಯಲ್ಲಿನ ಇತರೆ ಷರತ್ತು / ಸೂಚನೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರು ಹಾಗೂ ಕಾರ್ಯದರ್ಶಿ(ಪ್ರ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.