ಬೆಂಗಳೂರು: 2024-25ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಟೆಕ್ಸ್ಟೈಲ್ ಟೆಕ್ನಾಲಜಿ ಕೋರ್ಸಿಗೆ ಆಗಸ್ಟ್ 06, 2024 ರ ವರೆಗೆ ಪ್ರವೇಶ ಪಡೆಯಲು ಪ್ರವೇಶಾವಧಿಯನ್ನು ವಿಸ್ತರಿಸಲಾಗಿದೆ.
ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಯಲ್ಲಿ ಪಾಸಾದ ಹಾಗೂ ಪಿ.ಯು.ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣ/ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆ, ಬೆಂಗಳೂರು ಇಲ್ಲಿ ಟೆಕ್ಸ್ಟೈಲ್ ಟೆಕ್ನಾಲಜಿ ಕೋರ್ಸಿಗೆ ಪ್ರವೇಶ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಉಷಾ ಎಸ್. ಪ್ರಾಂಶುಪಾಲರು ಮೊ. 9481101049 ಹಾಗೂ ಶ್ರೀನಿವಾಸಯ್ಯ ವಿ, ವಿಭಾಗದ ಮುಖ್ಯಸ್ಥರು ಮೊ:9448705205 ಇವರನ್ನು ಸಂಪರ್ಕಿಸಬಹುದು ಅಥವಾ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆ, ಕೆ.ಆರ್.ಸರ್ಕಲ್. ಬೆಂಗಳೂರು ಕಾರ್ಯಾಲಯದಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.