ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ತಮ್ಮ ನ್ಯಾಯಾಲಯದ ವಿಚಾರಣೆಯ ಎರಡು ವೀಡಿಯೊ ತುಣುಕುಗಳು ವಿವಾದಕ್ಕೆ ಕಾರಣವಾಗಿದ್ದು, ಸಧ್ಯ ಅವರು ತಮ್ಮ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿ ಶ್ರೀಶಾನಂದ ಅವರು ಇಂದು ಮಧ್ಯಾಹ್ನ 2:30 ಕ್ಕೆ ಬೆಂಗಳೂರಿನ ವಕೀಲರ ಸಂಘದ ಸದಸ್ಯರು ಮತ್ತು ವಕೀಲರ ಹಿರಿಯ ಸದಸ್ಯರನ್ನ ತಮ್ಮ ನ್ಯಾಯಾಲಯಕ್ಕೆ ಕರೆಸಿಕೊಂಡು ಅಹಿತಕರ ಕಾಮೆಂಟ್’ಗಳಿಗೆ ವಿಷಾದ ವ್ಯಕ್ತಪಡಿಸುವ ಟಿಪ್ಪಣಿಯನ್ನು ಓದಿದರು.
“ಆ ಹೇಳಿಕೆಗಳನ್ನ ನೀಡಿದ್ದಕ್ಕಾಗಿ ವಿಷಾದಿಸುತ್ತೇನೆ ಮತ್ತು ಯಾವುದೇ ನಿರ್ದಿಷ್ಟ ಸಮುದಾಯವನ್ನು ಅಥವಾ ಬಾರ್ನ ಯಾವುದೇ ಸದಸ್ಯರನ್ನ ನೋಯಿಸುವುದು ತನ್ನ ಉದ್ದೇಶವಲ್ಲ ಎಂದು ಅವರು ಹೇಳಿದರು. ಇವು ಅವರ ನಿಖರವಾದ ಮಾತುಗಳು. ಇದನ್ನು ಬಾರ್’ನ ಎಲ್ಲಾ ಸದಸ್ಯರಿಗೆ ತಿಳಿಸುವಂತೆ ಅವರು ನಮಗೆ ಹೇಳಿದರು” ಎಂದು ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ಹೇಳಿದರು.
“ಇನ್ನು ಮುಂದೆ ತಮ್ಮ ನ್ಯಾಯಾಲಯದಲ್ಲಿ ಯುವ ವಕೀಲರನ್ನು ಪ್ರೋತ್ಸಾಹಿಸುವಂತೆ ಮತ್ತು ವಿಚಾರಣೆಯ ಸಮಯದಲ್ಲಿ ಇತರ ಯಾವುದೇ ವಿಷಯಗಳತ್ತ ತಿರುಗದಂತೆ ನಾವು ಅವರಿಗೆ ಹೇಳಿದ್ದೇವೆ” ಎಂದು ರೆಡ್ಡಿ ತಿಳಿಸಿದರು.
SHOCKING : ಗಂಟಲಲ್ಲಿ ‘ಇಡ್ಲಿ’ ಸಿಲುಕಿ ವ್ಯಕ್ತಿ ಸಾವು.! ಯಾಕೆ ಹೀಗಾಗುತ್ತೆ ಗೊತ್ತಾ.?