ಮೈಸೂರು: ಮೈಸೂರು-ದರ್ಭಾಂಗ ಭಾಗಮತಿ ಎಕ್ಸ್ಪ್ರೆಸ್ ರೈಲು ಚೆನ್ನೈ ಸಮೀಪದ ಕವರೈಪೆಟ್ಟೈ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಆರು ಬೋಗಿಗಳು ಹಳಿ ತಪ್ಪಿದ್ದು, ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹಲವರು ರೈಲಿನಲ್ಲಿ ಸಿಲುಕಿರುವುದಾಗಿ ತಿಳಿದು ಬಂದಿದೆ. ಈ ಬೆನ್ನಲ್ಲೈ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ಸಹಾಯವಾಣಿ ಸಂಖ್ಯೆ ರಿಲೀಸ್ ಮಾಡಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ತಿಳಿಸಿದ್ದು, ರೈಲು ಸಂಖ್ಯೆ 12578 (ಎಂವೈಎಸ್-ಡಿಬಿಜಿ) ಎಂಎಎಸ್ ವಿಭಾಗದ ಪೊನ್ನೇರಿ-ಕವರಪೆಟ್ಟೈ ನಿಲ್ದಾಣಗಳ ನಡುವೆ (ಎಸ್ ಪಿಇಗೆ 50 ಕಿ.ಮೀ ಮತ್ತು ಜಿಡಿಆರ್ ಗೆ 103 ಕಿ.ಮೀ) ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ತುರ್ತು ನಿಯಂತ್ರಣದಿಂದ ಪಡೆದ ಮಾಹಿತಿ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದಿದೆ.
ಬೆಂಗಳೂರು ಕಂಟ್ರೋಲ್ ರೂಂನಲ್ಲಿ ಸಹಾಯವಾಣಿಯೊಂದಿಗೆ ವಾರ್ ರೂಂ ಸ್ಥಾಪಿಸಲಾಗಿದ್ದು, ದೂರವಾಣಿ 08861309815 ಸಂಪರ್ಕಿಸಬಹುದು. ಎಸ್ಬಿಸಿ, ಎಂವೈಎ ಮತ್ತು ಕೆಜಿಐ ರೈಲ್ವೆ ನಿಲ್ದಾಣಗಳಲ್ಲಿ ಸ್ಥಾಪಿಸಲಾದ ಸಹಾಯ ಕೇಂದ್ರವನ್ನು ತೆರೆಯಲಾಗಿದೆ ಎಂದಿದೆ.
ಮೈಸೂರು ವಿಭಾಗದಿಂದಲೂ ಸಹಾಯವಾಣಿ ಸಂಖ್ಯೆ ರಿಲೀಸ್, ಕಂಟ್ರೋಲ್ ರೂಂ ಓಪನ್
ಇನ್ನೂ ನೈರುತ್ಯ ರೈಲ್ವೆಯ ಮೈಸೂರು ವಿಭಾಗದಿಂದಲೂ ಸಹಾಯವಾಣಿ ಸಂಖ್ಯೆ ರಿಲೀಸ್ ಮಾಡಲಾಗಿದೆ. ಕಂಟ್ರೋಲ್ ರೂಂ ಕೂಡ ಓಪನ್ ಮಾಡಲಾಗಿದೆ. ರೈಲು ಸಂಖ್ಯೆ 12578 (ಮೈಸೂರಿನಿಂದ ದರ್ಭಂಗಾ ಎಕ್ಸ್ಪ್ರೆಸ್) ಎಂಎಎಸ್ ವಿಭಾಗದ ಕವರೈಪೆಟ್ಟೈ ನಿಲ್ದಾಣವನ್ನು ಹಾದುಹೋಗುವಾಗ ಕೆಲವು ಬೋಗಿಗಳು ಹಳಿ ತಪ್ಪಿವೆ. ಮೈಸೂರು ಕಂಟ್ರೋಲ್ ರೂಂನಲ್ಲಿ ಸಹಾಯವಾಣಿಯೊಂದಿಗೆ ವಾರ್ ರೂಂ ಸ್ಥಾಪಿಸಲಾಗಿದ್ದು, ದೂರವಾಣಿ 9731143981 ಸಂಪರ್ಕಿಸಬಹುದು.
ಎಂವೈಎಸ್ ರೈಲ್ವೆ ನಿಲ್ದಾಣದಲ್ಲಿ 0821-2422400 ಸಂಖ್ಯೆಯೊಂದಿಗೆ ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಎಂವೈಎಸ್ ವಿಭಾಗೀಯ ಅಧಿಕಾರಿ ಮತ್ತು ಸಿಬ್ಬಂದಿಯಿಂದ ನಿರ್ವಹಿಸಲ್ಪಡುವ 139 ಸಹಾಯವಾಣಿಗೆ ಸಂಪರ್ಕಿಸುವಂತೆ ತಿಳಿಸಿದೆ.
BREAKING: ನ್ಯೂಜಿಲೆಂಡ್ ಸರಣಿಗೆ ಬಲಿಷ್ಠ ಭಾರತ ತಂಡ ಪ್ರಕಟ: ರೋಹಿತ್ ಶರ್ಮಾ ನಾಯಕ, ಜಸ್ಪ್ರೀತ್ ಬುಮ್ರಾ ಉಪನಾಯಕ
ಲಾವೋಸ್’ನಲ್ಲಿ ಕೆನಡಾದ ಪ್ರಧಾನಿ ‘ಜಸ್ಟಿನ್ ಟ್ರುಡೋ’ ಭೇಟಿಯಾದ ‘ಪ್ರಧಾನಿ ಮೋದಿ’
ರೈಲು ಸಂಖ್ಯೆ 12578 (ಮೈಸೂರಿನಿಂದ ದರ್ಭಂಗಾ ಎಕ್ಸ್ಪ್ರೆಸ್) ಎಂಎಎಸ್ ವಿಭಾಗದ ಕವರೈಪೆಟ್ಟೈ ನಿಲ್ದಾಣವನ್ನು ಹಾದುಹೋಗುವಾಗ ಕೆಲವು ಬೋಗಿಗಳು ಹಳಿ ತಪ್ಪಿವೆ.
* ಬೆಂಗಳೂರು ಕಂಟ್ರೋಲ್ ರೂಂನಲ್ಲಿ ಸಹಾಯವಾಣಿಯೊಂದಿಗೆ ವಾರ್ ರೂಂ ಸ್ಥಾಪಿಸಲಾಗಿದ್ದು, ದೂರವಾಣಿ 08861309815 ಸಂಪರ್ಕಿಸಬಹುದು.
* ಎಸ್ಬಿಸಿ, ಎಂವೈಎ ಮತ್ತು ಕೆಜಿಐ ರೈಲ್ವೆ ನಿಲ್ದಾಣಗಳಲ್ಲಿ ಸ್ಥಾಪಿಸಲಾದ ಸಹಾಯ ಕೇಂದ್ರವನ್ನು ತೆರೆಯಲಾಗಿದೆ.