ಮಂಡ್ಯ : ಶ್ರೀ ವರ ಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹಣ ಮತ್ತು ಚಿನ್ನಾಭರಣಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕೆಂದು ಮದ್ದೂರು ಪೋಲೀಸರು ಮನವಿ ಮಾಡಿದ್ದಾರೆ.
ಮದ್ದೂರು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಗೆ ಮದ್ದೂರು ವೃತ್ತದ ಇನ್ಸ್ಪೆಕ್ಟರ್ ಶಿವಕುಮಾರ್ ಹಾಗೂ ಗ್ರಾಮಾಂತರ ವೃತ್ತದ ಇನ್ಸ್ಪೆಕ್ಟರ್ ವೆಂಕಟೇಗೌಡ ಅವರುಗಳು ಗುರುವಾರ ಸಂಜೆ ತೆರಳಿ ಸಂದೇಶ ಸಾರುವ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಪೂಜಾ ಸಮಯದಲ್ಲಿ ಹೆಚ್ಚು ಚಿನ್ನಾಭರಣಗಳನ್ನು ಪ್ರದರ್ಶನಕ್ಕೆ ಇಡದೆ ಸರಳವಾಗಿ ಹಬ್ಬವನ್ನು ಆಚರಿಸಿ, ಹಬ್ಬದ ದಿನ ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಳ್ಳಿ, ನೆರೆ ಮನೆಯವರ ಮನೆಗೆ ಪೂಜೆಗೆ ಹೋಗುವಾಗ ಬಾಗಿಲುಗಳನ್ನು ಹಾಕಿರುವುದನ್ನು ಖಚಿತಪಡಿಸಿಕೊಳ್ಳಿ, ಅಪರಿಚಿತರು ನಿಮ್ಮ ಮನೆಗೆ ಪೂಜೆಗೆ ಬಂದಾಗ ಆದಷ್ಟು ಜಾಗ್ರತೆ ವಹಿಸಿ, ಕಿಟಕಿ ಬಾಗಿಲುಗಳ ಪಕ್ಕದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇಡಬೇಡಿ ಎಂದು ಪೋಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರತಿ ವರ್ಷ ಶ್ರೀ ವರ ಮಹಾಲಕ್ಷ್ಮಿ ಹಬ್ಬದ ದಿನಗಳಲ್ಲಿ ಒಂದಿಲ್ಲೋಂದು ಕಳ್ಳತನ ಪ್ರಕರಣಗಳು ಸಂಭವಿಸುತ್ತಿದ್ದು, ಹೀಗಾಗಿ ಸಾರ್ವಜನಿಕರು ಹಬ್ಬದ ದಿನದಂದು ಸಾಕಷ್ಟು ಮುಂಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
‘ಮದ್ದೂರಿನ ಜನತೆ’ಗೆ ವರ ಮಹಾಲಕ್ಷ್ಮಿ ಹಬ್ಬದ ಗಿಫ್ಟ್ ಕೊಟ್ಟ ‘ರಾಜ್ಯ ಸರ್ಕಾರ’
GOOD NEWS: ಹಳೆ ಪಿಂಚಣಿ ಯೋಜನೆ (OPS) ಜಾರಿ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್