ಬೆಂಗಳೂರು: ವಿಧಾನಮಂಡಲ ವಿಶೇಷ ಅಧಿವೇಶನದಲ್ಲಿ ಅಬಕಾರಿ ಇಲಾಖೆಯ ಲಂಚಾವತಾರ ಪ್ರತಿಧ್ವನಿಸಿದೆ. ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಸದಸ್ಯ ವಿನಯ ಕುಮಾರ್ ಸೊರಕೆ ಅವರು ವಿಷಯ ಪ್ರಸ್ತಾಪಿಸಿ, ಸಚಿವ ಆರ್.ಬಿ ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿದರು. ಈ ವೇಳೆ ಗದ್ದಲ ಕೋಲಾಹಲಕ್ಕೂ ಕಾರಣವಾಯಿತು.
ಇಂದು ವಿಧಾನಸಭೆಯಲ್ಲಿ ಅಬಕಾರಿ ಲಂಚಾವತಾರದ ವಿಷಯವು ಪ್ರತಿಧ್ವನಿಸಿತು. ಬಿಜೆಪಿಯಿಂದ ಈ ಕುರಿತಂತೆ ಚರ್ಚೆ ನಡೆಸೋದಕ್ಕೆ ಅವಕಾಶ ನೀಡುವಂತೆ ಸ್ಪೀಕರ್ ಯು.ಟಿ ಖಾದರ್ ಅವರಿಗೆ ವಿಪಕ್ಷಗಳ ಸದಸ್ಯರು ಆಗ್ರಹಿಸಿದರು. ಆದರೇ ಇದಕ್ಕೆ ಅವಕಾಶ ನೀಡದಿದ್ದರಿಂದ ಸದನದಲ್ಲಿ ಗದ್ದಲ ಕೋಲಾಹಲವೇ ನಡೆಯಿತು. ಹೀಗಾಗಿ 10 ನಿಮಿಷಗಳ ಕಾಲ ಸದನದ ಕಲಾಪವನ್ನು ಸ್ಪೀಕರ್ ಯು.ಟಿ ಖಾದರ್ ಮುಂದೂಡಿಕೆ ಮಾಡಿದರು.
ಇದಾದ ಬಳಿಕ ಕಲಾಪ ಆರಂಭಗೊಂಡಾಗ ಮತ್ತೆಯೂ ಬಿಜೆಪಿ ಸದಸ್ಯರು ಅಬಕಾರಿ ಇಲಾಖೆಯ ಲಂಚಾವತಾರವನ್ನು ಪ್ರಸ್ತಾಪಿಸಿ, ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಧರಣಿ, ಪ್ರತಿಭಟನೆ ನಡೆಸಿದರು. ಅಬಕಾರಿ ಲಂಚಾವತಾರದ ಬಗ್ಗೆ ಚರ್ಚೆ ಮಾಡೋದಕ್ಕೆ ಅವಕಾಶ ನೀಡುವಂತೆ ವಿಪಕ್ಷಗಳ ಸದಸ್ಯರು ಪಟ್ಟು ಸಡಿಲಿಸದೇ ಮುಂದುವರೆದಿದ್ದಾರೆ.
ನೀವು ಇವುಗಳನ್ನು 7 ದಿನಗಳವರೆಗೆ ತಿಂದರೆ, ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳನ್ನು ನಂಬೋದೇ ಇಲ್ಲ
ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ಕಾಡ್ಗಿಚ್ಚು ನಿಯಂತ್ರಣಕ್ಕೆ ಈ ಖಡಕ್ ಸೂಚನೆ ಕೊಟ್ಟ ಸಚಿವ ಈಶ್ವರ್ ಖಂಡ್ರೆ








