ಯಾದಗಿರಿ: ಯಾದಗಿರಿ ನಗರದ ಬಸವೇಶ್ವರ ಗಂಜ್ ಬಳಿ ಮಾಜಿ ಸಚಿವ ರಾಜೂಗೌಡ ತೆರಳುತ್ತಿದ್ದಂತ ಕಾರು ಅಪಘಾತಗೊಂಡಿದೆ. ಈ ಅಪಘಾತದಲ್ಲಿ ಕೂದಲೆಳೆಯ ಅಂತರದಲ್ಲಿ ರಾಜೂಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಾದಗಿರಿ ನಗರದ ಬಸವೇಶ್ವರ ಗಂಜ್ ಬಳಿಯಲ್ಲಿ ಮಾಜಿ ಸಚಿವ ರಾಜೂಗೌಡ ಪ್ರಯಾಣಿಸುತ್ತಿದ್ದಂತ ಫಾರ್ಚುನರ್ ಕಾರಿಗೆ ಹಿಂಬದಿಯಿಂದ ಡಿಪ್ಪರ್ ಲಾರಿಯೊಂದು ಡಿಕ್ಕಿಯಾಗಿದೆ. ಈ ಡಿಕ್ಕಿಯ ರಬಸಕ್ಕೆ ಫಾರ್ಚೂನರ್ ಕಾರಿನ ಹಿಂಬದಿ ನಜ್ಜುಗುಜ್ಜಾಗಿದೆ.
ಮಾಜಿ ಸಚಿವ ರಾಜೂಗೌಡ ಕಾರಿಗೆ ಹಿಂಬದಿಯಿಂದ ಟಿಪ್ಪರ್ ಲಾರಿ ಗುದ್ದಿ ಉಂಟಾದ ಅಪಘಾತದಲ್ಲಿ ಸಣ್ಣಪುಟ್ಟ ಗಾಯದೊಂದಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಶಾಖಪಟ್ಟಣಂ ನಲ್ಲಿ ನಡೆದ ಸಿಸಿಎಲ್ ನಲ್ಲಿ ಭಾಗವಹಿಸಿ ಹೈದರಾಬಾದ್ ಮಾರ್ಗವಾಗಿ ಸುರಪುರಕ್ಕೆ ಕಾರ್‌ನಲ್ಲಿ ಬರುತ್ತಿರುವಾಗ ಸುಮಾರು 2 ಗಂಟೆಗೆ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕೊಡೆಕಲ್ ಬಸವಣ್ಣ, ತಂದೆ ತಾಯಿ ಹಾಗೂ ಕ್ಷೇತ್ರದ ಜನರ ಆಶೀರ್ವಾದದಿಂದಾಗಿ ಯಾವುದೇ ಹಾನಿಯಾಗಿಲ್ಲ ಎಂದು ರಾಜೂಗೌಡ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
BIG NEWS: ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ ‘ಗ್ರಾಮ ಪಂಚಾಯಿತಿ’ಗಳಿಗೆ ‘ಆಡಳಿತಾಧಿಕಾರಿ’ ನೇಮಕಕ್ಕೆ ಸರ್ಕಾರ ಆದೇಶ








