ನವದೆಹಲಿ:ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿರುದ್ಧ ಬಣ್ಣದ ತಾರತಮ್ಯದ (Colour Discrimination) ಆರೋಪ ಕೇಳಿಬಂದಿದ್ದು, ಭಾರತದ ಮಾಜಿ ಸ್ಟಾರ್ ಕ್ರಿಕೆಟಿಗರೊಬ್ಬರು ಕಾಮೆಂಟರಿ ವೃತ್ತಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.
ಮಾಜಿ ಕ್ರಿಕೆಟಿಗರು ತಮ್ಮ ಹೇಳಿಕೆಯಲ್ಲಿ, “ಕಾಮೆಂಟರಿ ಪ್ಯಾನಲ್ ಆಯ್ಕೆ ಮಾಡುವಾಗ ಪ್ರತಿಭೆಗಿಂತ ಹೆಚ್ಚಾಗಿ ಚರ್ಮದ ಬಣ್ಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕಪ್ಪು ವರ್ಣದವರಿಗೆ ಸೂಕ್ತ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ,” ಎಂದು ನೇರವಾಗಿ ಬಿಸಿಸಿಐ ಅನ್ನು ಗುರಿಯಾಗಿಸಿಕೊಂಡು ಕಿಡಿಕಾರಿದ್ದಾರೆ.
ಈ ತಾರತಮ್ಯದಿಂದ ಬೇಸತ್ತು ನಾನು ಇನ್ನು ಮುಂದೆ ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. ಇದು ಕೇವಲ ನನ್ನೊಬ್ಬನ ಸಮಸ್ಯೆಯಲ್ಲ, ವ್ಯವಸ್ಥೆಯಲ್ಲಿರುವ ದೊಡ್ಡ ಲೋಪ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಒಂದು ವರ್ಗವು ಕ್ರಿಕೆಟಿಗನ ಬೆಂಬಲಕ್ಕೆ ನಿಂತು, “ಕ್ರೀಡೆಯಲ್ಲಿ ಬಣ್ಣದ ತಾರತಮ್ಯ ಇರಬಾರದು, ಬಿಸಿಸಿಐ ಈ ಬಗ್ಗೆ ತನಿಖೆ ನಡೆಸಬೇಕು” ಎಂದು ಒತ್ತಾಯಿಸುತ್ತಿದೆ.ಇನ್ನೊಂದು ವರ್ಗವು, “ಇದು ಕೇವಲ ವೈಯಕ್ತಿಕ ಹತಾಶೆ, ಕಾಮೆಂಟರಿಯಲ್ಲಿ ಬಣ್ಣಕ್ಕಿಂತ ಕಮ್ಯುನಿಕೇಶನ್ ಸ್ಕಿಲ್ ಮುಖ್ಯ” ಎಂದು ವಾದಿಸುತ್ತಿದೆ.








