Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಬ್ರಿಡ್ಜ್, ರಸ್ತೆ ದುರಸ್ತಿಗಾಗಿ ಎಲ್ಲಾ ಶಾಸಕರಿಗೆ ಹಣ ಕೊಡುತ್ತಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

06/07/2025 12:50 PM

BREAKING : ರಾಜ್ಯದಲ್ಲಿ `ಗ್ಯಾರಂಟಿ ಯೋಜನೆ’ಗಳು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ 

06/07/2025 12:46 PM

Shocking: ಕೋಲ್ಕತಾ ಕಾನೂನು ಕಾಲೇಜು ಅತ್ಯಾಚಾರ ಪ್ರಕರಣ: ವಿಡಿಯೋಗಳಿಗಾಗಿ ಆನ್ ಲೈನ್ ನಲ್ಲಿ ಹುಡುಕಾಟ ಹೆಚ್ಚಳ

06/07/2025 12:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕನ್ನಡದ ಹಬ್ಬವಾದ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ: ದಿನೇಶ್ ಗೂಳಿಗೌಡ
KARNATAKA

ಕನ್ನಡದ ಹಬ್ಬವಾದ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ: ದಿನೇಶ್ ಗೂಳಿಗೌಡ

By kannadanewsnow0914/11/2024 5:32 PM

ಮಂಡ್ಯ: ನಗರದಲ್ಲಿ ಡಿಸೆಂಬರ್ 20, 21, 22ರಂದು ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಹಬ್ಬ. ನಮ್ಮ ಮನೆಯ ಹಬ್ಬ. ಕುಟುಂಬದವರೊಂದಿಗೆ ಹಬ್ಬ ಆಚರಣೆ ಮಾಡುವಂತೆ ಜಿಲ್ಲೆಯ ಜನತೆ ಒಟ್ಟಾಗಿ ಕನ್ನಡ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಶಾಸಕರು ಹಾಗೂ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.

ನಗರದ ಹೊರವಲಯದ ಅಮರಾವತಿ ಹೋಟೆಲ್ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಮಾಧ್ಯಮದ ಪಾತ್ರ ಬಹಳ ಮುಖ್ಯ. ಸಾಹಿತ್ಯ ಸಮ್ಮೇಳನದ ಕುರಿತು ಮಾಧ್ಯಮದಲ್ಲಿ ವ್ಯಾಪಕ ಪ್ರಚಾರ ನೀಡುವ ಮೂಲಕ ಸಮ್ಮೇಳನದ ಯಶಸ್ವಿಗೆ ಮಾಧ್ಯಮದವರು ಸಹಕರಿಸಬೇಕು ಎಂದರು.

ಇದು ಕನ್ನಡದ ಹಬ್ಬ, ನಮ್ಮ ಮನೆ ಹಬ್ಬ. ಕನ್ನಡದ ತೇರು ಎಳೆಯಲು ಎಲ್ಲರ ಸಹಕಾರ ಮುಖ್ಯ. ಮಾಧ್ಯಮದಲ್ಲಿ ಹೆಚ್ಚಿನ ಪ್ರಚಾರ ನೀಡಿ ಸಕ್ಕರೆಯ ನಾಡು ಅಕ್ಕರೆಯ ಬೀಡಿನ ಗಮಲನ್ನು ಜಗಕ್ಕೆ ಪಸರಿಸುವಂತೆ ಮಾಡಬೇಕು ಎಂದು ಹೇಳಿದರು.

ಮಂಡ್ಯ ಆತಿಥ್ಯಕ್ಕೆ ಹೆಸರುವಾಸಿ. ರಾಜ್ಯ, ಹೊರರಾಜ್ಯದಿಂದ ಆಗಮಿಸುವ ಸಾಹಿತ್ಯಾಸಕ್ತರು, ಮಾಧ್ಯಮ ಮಿತ್ರರ ಆತಿಥ್ಯಕ್ಕೆ ಯಾವುದೇ ಕುಂದುಕೊರತೆ ಉಂಟಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದು ಸೂಚಿಸಿದರು.

ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಸ್ಥಳೀಯ ಪತ್ರಿಕೆ ಮತ್ತು ಟಿವಿ ಚಾನೆಲ್ ಗಳು ಹೆಚ್ಚಿನ ಪ್ರಚಾರ ನೀಡಿ ನುಡಿ ಹಬ್ಬವನ್ನು ಯಶಸ್ವಿಗೊಳಿಸಬೇಕು. ಎನ್ ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಹಾಗೂ ಎನ್ ಜಿಒಗಳಿಂದ ಸ್ವಯಂ ಸೇವಕರನ್ನು ನೇಮಿಸುಕೊಳ್ಳಬೇಕು. ನಮ್ಮನೆ ಕಾರ್ಯಕ್ರಮದಂತೆ ಕಾರ್ಯ ನಿರ್ವಹಿಸಬೇಕು. ಮಾಧ್ಯಮ ಸಂಸ್ಥೆಗಳಿಂದ ಸಮ್ಮೇಳನಕ್ಕೆ ಆಗಮಿಸುವವವರಿಗೆ ಸೂಕ್ತ ವಸತಿ ವ್ಯವಸ್ಥೆ, ವಾಹನ, ಊಟ, ತಿಂಡಿ ವ್ಯವಸ್ಥೆ ಆಗಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಕಸಾಪ ಸಂಚಾಲಕರಾದ ಮೀರ ಶಿವಲಿಂಗಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ, ವಾರ್ತಾಧಿಕಾರಿ ನಿರ್ಮಲಾ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಮ್ಮೇಳನದ ಪ್ರಚಾರ ಕಾರ್ಯ ಆರಂಭ: ಜಿಲ್ಲಾಧಿಕಾರಿ ಕುಮಾರ್

ಸಾಹಿತ್ಯ ಸಮ್ಮೇಳನದ  ಪ್ರಚಾರ ಕಾರ್ಯ ಆರಂಭಿಸಲಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಸಂಚರಿಸುತ್ತಿರುವ ಜ್ಯೋತಿ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಗುತ್ತಿದೆ. ಎಲ್ಲೆಡೆ ನಿರೀಕ್ಷೆಗೂ ಮೀರಿ ರಥವನ್ನು ಬರಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕುಮಾರ್ ಅವರು ಹೇಳಿದರು.

ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಸಾಕಷ್ಟು ಒತ್ತು ನೀಡಲಾಗುತ್ತಿದೆ. ಪ್ರಚಾರದ ರೂವಾರಿಗಳು ಮಾಧ್ಯಮದವರೇ. ಜನರನ್ನು ತಲುಪಲು ಮಾಧ್ಯಮಗಳ ಸಹಕಾರ ಬಹಳ ಮುಖ್ಯ. ಸಮ್ಮೇಳನದ ಯಶಸ್ವಿಗೆ ಎಲ್ಲರ ಸಲಹೆಗಳನ್ನು ಪಡೆದುಕೊಂಡು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಮಾಧ್ಯಮ ಸಮನ್ವಯ ಸಮಿತಿ ಬಹಳ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಅಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರ ಕಾರ್ಯಕ್ಕೆ ಜಿಲ್ಲಾಡಳಿತ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಜ್ಯ, ರಾಷ್ಟ್ರದ ನಾನಾ ಭಾಗಗಳಿಂದ ಬರುವವರಿಗೆ ಸಕಲ ವ್ಯವಸ್ಥೆ ಮಾಡಲಾಗುವುದು. ಊಟ, ಪುಸ್ತಕ ಮಳಿಗೆ, ವೇದಿಕೆ ಒಂದೇ ಕಡೆ ಇರುವಂತೆ ಜಾಗ ಗುರುತಿಸಲಾಗಿದೆ. ಎಲ್ಲಾ ಆಯಮದಲ್ಲಿ ಚರ್ಚಿಸಿ, ತಾಂತ್ರಿಕ ವರದಿ ಆಧರಿಸಿ ಜಾಗ ಗುರುತಿಸಲಾಗಿದೆ. ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲಾಗುವುದು ಎಂದರು.

BIG NEWS: ರಾಜ್ಯದ ‘ಶಿಕ್ಷಣ ಇಲಾಖೆ’ಯ ಅಧಿಕಾರಿ, ಸಿಬ್ಬಂದಿಗಳಿಗೆ ಬಿಗ್ ಶಾಕ್: ವಸತಿ ಕೊಠಡಿಗಳ ‘ಬಾಡಿಗೆ ದರ’ ಹೆಚ್ಚಳ

BREAKING: ರಾಜ್ಯದ ‘108 ಆಂಬುಲೆನ್ಸ್ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್: ಮೂರು ತಿಂಗಳ ವೇತನ ಬಿಡುಗಡೆ

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಬ್ರಿಡ್ಜ್, ರಸ್ತೆ ದುರಸ್ತಿಗಾಗಿ ಎಲ್ಲಾ ಶಾಸಕರಿಗೆ ಹಣ ಕೊಡುತ್ತಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

06/07/2025 12:50 PM1 Min Read

BREAKING : ರಾಜ್ಯದಲ್ಲಿ `ಗ್ಯಾರಂಟಿ ಯೋಜನೆ’ಗಳು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ 

06/07/2025 12:46 PM1 Min Read

BREAKING : `ಒಬಿಸಿ ರಾಷ್ಟ್ರೀಯ ಘಟಕ’ಕ್ಕೆ ನೇಮಕ ವಿಚಾರ : CM ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್.!

06/07/2025 12:35 PM1 Min Read
Recent News

BREAKING : ರಾಜ್ಯದಲ್ಲಿ ಬ್ರಿಡ್ಜ್, ರಸ್ತೆ ದುರಸ್ತಿಗಾಗಿ ಎಲ್ಲಾ ಶಾಸಕರಿಗೆ ಹಣ ಕೊಡುತ್ತಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

06/07/2025 12:50 PM

BREAKING : ರಾಜ್ಯದಲ್ಲಿ `ಗ್ಯಾರಂಟಿ ಯೋಜನೆ’ಗಳು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ 

06/07/2025 12:46 PM

Shocking: ಕೋಲ್ಕತಾ ಕಾನೂನು ಕಾಲೇಜು ಅತ್ಯಾಚಾರ ಪ್ರಕರಣ: ವಿಡಿಯೋಗಳಿಗಾಗಿ ಆನ್ ಲೈನ್ ನಲ್ಲಿ ಹುಡುಕಾಟ ಹೆಚ್ಚಳ

06/07/2025 12:44 PM

ಅಸಾಧಾರಣ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು: ದೆಹಲಿ ಹೈಕೋರ್ಟ್

06/07/2025 12:40 PM
State News
KARNATAKA

BREAKING : ರಾಜ್ಯದಲ್ಲಿ ಬ್ರಿಡ್ಜ್, ರಸ್ತೆ ದುರಸ್ತಿಗಾಗಿ ಎಲ್ಲಾ ಶಾಸಕರಿಗೆ ಹಣ ಕೊಡುತ್ತಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

By kannadanewsnow5706/07/2025 12:50 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ, ಬ್ರಿಡ್ಜ್, ರಸ್ತೆ ದುರಸ್ತಿಗಾಗಿ ಶಾಸಕರಿಗೆ…

BREAKING : ರಾಜ್ಯದಲ್ಲಿ `ಗ್ಯಾರಂಟಿ ಯೋಜನೆ’ಗಳು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ : CM ಸಿದ್ದರಾಮಯ್ಯ ಸ್ಪಷ್ಟನೆ 

06/07/2025 12:46 PM

BREAKING : `ಒಬಿಸಿ ರಾಷ್ಟ್ರೀಯ ಘಟಕ’ಕ್ಕೆ ನೇಮಕ ವಿಚಾರ : CM ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್.!

06/07/2025 12:35 PM

BIG NEWS : ಕಾಂಗ್ರೆಸ್ ನಲ್ಲಿ `CM ಸಿದ್ದರಾಮಯ್ಯ’ಗೆ ರಾಷ್ಟ್ರಮಟ್ಟದ ಹುದ್ದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದೇನು?

06/07/2025 12:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.