ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಹುದೊಡ್ಡ ಭ್ರಷ್ಟಾಚಾರವನ್ನೇ ಖೈದಿಯೊಬ್ಬ ಬಿಚ್ಚಿಟ್ಟಿದ್ದಾನೆ. ಜೈಲಲ್ಲ ಅದು ಸ್ವರ್ಗ. ದುಡ್ಡು ಕೊಟ್ಟರೇ ಎಲ್ಲವೂ ಸಿಗುತ್ತದೆ. ಏನು ಬೇಕಾದ್ರೂ ವ್ಯವಸ್ಥೆ ಮಾಡುತ್ತಾರೆ ಎಂಬುದಾಗಿ ಬಿಡುಗಡೆಯಾದಂತ ಖೈದಿಯೊಬ್ಬ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಈ ಬಗ್ಗೆ ಮಾಧ್ಯಮಗಳಿಗೆ ಹೆಸರು ಹೇಳಲು ಇಚ್ಚಿಸದಂತ ಬಿಡುಗಡೆಯಾದಂತ ಖೈದಿಯೊಬ್ಬ ಮಾತನಾಡಿದ್ದು, ಪರಪ್ಪನ ಅಗ್ರಹಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಲ್ಲಿ ಏನು ಬೇಕಾದ್ರೂ ವ್ಯವಸ್ಥೆ ಮಾಡ್ತಾರೆ. ಅದಕ್ಕೆ ದುಡ್ಡು ಕೊಡಬೇಕು ಎಂದರು.
ಸಿಗರೇಟ್, ಗಾಂಜಾ, ಗುಟ್ಕವೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗುತ್ತೆ. ಮೊಬೈಲ್ ಪೋನ್ ಅಂತೂ ಎಲ್ಲರೂ ಬಳಕೆ ಮಾಡ್ತಾರೆ. ಚಿಕನ್ ಬೇಕಾದವರಿಗೆ ಚಿಕನ್ ಮಾಡಿಕೊಡ್ತಾರೆ. ಡ್ರಗ್ಸ್ ಬೇಕಾದವರಿಗೆ ಅದನ್ನು ಸಪ್ಲೈ ಮಾಡ್ತಾರೆ. ಅದಕ್ಕಾಗಿ ಇಂತಿಷ್ಟು ದುಡ್ಡು ಕೊಡಬೇಕು ಎಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನಾನು ಜೈಲಿನಲ್ಲಿ ಇದ್ದಾಗ ಎಲ್ಲಾ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡಿದ್ದೇನೆ. ಇದಕ್ಕಾಗಿ 1.30 ಲಕ್ಷ ಹಣವನ್ನು ಖರ್ಚು ಮಾಡಿದ್ದೇನೆ. ದುಡ್ಡು ಇದ್ದರೇ ದುನಿಯಾ ಅಂತಾರಲ್ಲ ಹಾಗೆ ಪರಪ್ಪನ ಅಗ್ರಹಾರ ಜೈಲು. ಅಲ್ಲಿ ಎಲ್ಲವೂ ಸಿಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
Job Alert : ಭಾರತೀಯ ರೈಲ್ವೆ ಇಲಾಖೆಯಲ್ಲಿ 14,298 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | RRB Recruitment 2024