ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಬ್ರಕೊಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಗೆ ಬರ್ತಾ ಇರುವ ತರಕಾರಿ. ಇದರ ಸೇವನೆಯಿಂದ ದೇಹಕ್ಕೆ ಏನಲ್ಲಾ ಲಾಭಗಳಿವೆ ಎಂದು ಒಂದೊಂದಾಗಿ ತಿಳಿದುಕೊಳ್ಳೋಣ.
ಸಲಾಡ್ ರೂಪದಲ್ಲಿ ಹೆಚ್ಚು ಸೇವಿಸುವ ಈ ಹಸಿರು ತರಕಾರಿಯಲ್ಲಿ ವಿಟಮಿನ್ ಸಿ ಹೇರಳ ಪ್ರಮಾಣದಲ್ಲಿ ಇದೆ. ಇನ್ನು ನೀವು ದಿನವೂ ಸಲ್ಪ ಪ್ರಮಾಣದಲ್ಲಿ ತಿಂದರೂ ಸಾಕು ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಝಿಂಕ್, ವಿಟಮಿನ್ ಬಿ ಮತ್ತು ಕೆ, ಪ್ರೋಟೀನ್, ತಾಮ್ರ, ಕ್ಯಾಲ್ಸಿಯಂ, ಫೈಬರ್, ಪೊಟ್ಯಾಶಿಯಮ್, ಪೋಷಕಾಂಶಗಳಿವೆ.
ಆಹಾರ ತಜ್ಞರ ಪ್ರಕಾರ ಈ ಹಸಿರು ತರಕಾರಿಯನ್ನು ಸಲಾಡ್‌ನಿಂದ ಹಿಡಿದು ಸೂಪ್ ವರೆಗೂ ಅಥವಾ ನಿಮ್ಮ ನಿತ್ಯದ ಅಡುಗೆಯಲ್ಲಿ ಬಳಸಬಹುದು. ಇದರಿಂದ ದೇಹಕ್ಕೆ ತುಂಬಾ ಪ್ರಯೋಜನಗಳಿವೆ.
ಬ್ರಕೊಲಿ ಕ್ಯಾಲ್ಸಿಯಂ ಹೊಂದಿರುವ ಡೈರಿಯೇತರ ಅಪರೂಪದ ತರಕಾರಿಯಾಗಿದೆ. ಇದರಲ್ಲಿ ಸಲ್ಫೋರಾಫೇಲ್ ಸಮೃದ್ಧವಾಗಿದ್ದು ಕ್ಯಾನ್ಸರ್‌ಗೆ ಸಂಬಂಧಿಸಿದ ದೇಹದಲ್ಲಿ ಉರಿಯೂತವನ್ನು ತಡೆಗಟ್ಟುತ್ತದೆ. ಕ್ಯಾನ್ಸರ್ ಕೋಶಗಳನ್ನು ಬೆಳವಣಿಗೆಯಾಗದಂತೆ ನೋಡಿಕೊಳ್ಳುವ ಇದು ಕ್ಯಾನ್ಸರ್ ಗಡ್ಡೆಗಳನ್ನು ಕರಗಿಸುವ ಶಕ್ತಿ ಇದಕ್ಕಿದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಇದನ್ನು ತಪ್ಪದೇ ಸೇವಿಸಬೇಕು. ಇದರಲ್ಲಿ ಪೊಟ್ಯಾಷಿಯಮ್ ಅಧಿಕವಾಗಿದ್ದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಪೌಷ್ಟಿಕ ಆಹಾರ ತಜ್ಞರ ಪ್ರಕಾರ ಬ್ರಕೊಲಿಯಲ್ಲಿ ಪ್ರೋಟೀನ್ ಮತ್ತು ಫೈಬರ್ ಅಂಶ ಅತೀ ಹೆಚ್ಚಿನ ಪ್ರಮಾಣದಲ್ಲಿದೆ. ಇದರ ಸೇವನೆಯಿಂದ ಕರುಳಿನ ಆರೋಗ್ಯ ಕಾಪಾಡುತ್ತದೆ ಹಾಗು ಜೀರ್ಣಕ್ರಿಯೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳನ್ನು ಕ್ರಮೇಣವಾಗಿ ನಿವಾರಿಸಿಕೊಳ್ಳಬಹುದು.
ತರಕಾರಿಗಳಲ್ಲಿ ಬ್ರಕೊಲಿಯನ್ನು ಸೂಪರ್ ಗ್ರೀನ್ ಎಂದು ಹೇಳಲಾಗುತ್ತದೆ. ಇದರಲ್ಲಿ ಕ್ವೆರ್ಸೆಟಿಕ್ ನಂತಹ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬೇಗನೇ ಕರಿಗಸುತ್ತದೆ. ಈ ಮೂಲಕ ಹೃದಯ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ ಮಧುಮೇಹಿಗಳ ಆರೋಗ್ಯಕ್ಕೆ ಉತ್ತಮ ರಕ್ಷಣೆ ನೀಡುತ್ತದೆ. ಬ್ರಕೊಲಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಒಂದು ಕುದಿ ಕುದಿಸಿ ಅಥವಾ ಹಬೆಯಲ್ಲಿ ಬೇಯಿಸಿ ತಿಂದರೆ ಉತ್ತಮ ಎಂದು ಆಹಾರ ತಜ್ಞರು ಸಲಹೆ ನೀಡುತ್ತಾರೆ.