ಬೆಂಗಳೂರು: ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬ ಮಾತಿನಂತೆ ಬಿಜೆಪಿ ಸರ್ಕಾರ ಹೋದರೂ ಅವರ ಭ್ರಷ್ಟಾಚಾರ ಮಾತ್ರ ನಿಂತಿಲ್ಲ ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಗುತ್ತಿಗೆದಾರರಿಂದ ಕಮಿಷನ್ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿರುವ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು “ ಬಿಜೆಪಿಯ ಭ್ರಷ್ಟಾಚಾರದ ಬ್ರ್ಯಾಂಡ್ ” ಅನ್ನು ಗಟ್ಟಿಗೊಳಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಭ್ರಷ್ಟಾಚಾರದಲ್ಲಿ ಪಳಗಿದ ಬಿಜೆಪಿಯ ಹಿರಿತಲೆಗಳು ಹಿಂದಿನ “40% ಕಮಿಷನ್“ ಕಲೆಯನ್ನು ತಮ್ಮ ಯುವ ಶಾಸಕರಿಗೆ ಚೆನ್ನಾಗಿಯೇ ಕಲಿಸಿದ್ದಾರೆ! ಇದು ಯಾರೋ ಮಾಡಿದ ಬಾಯಿ ಮಾತಿನ ಆರೋಪವಲ್ಲ, ಲೋಕಾಯುಕ್ತರು ಪ್ರತ್ಯಕ್ಷವಾಗಿ ಹಿಡಿದಿದ್ದು ಎಂದಿದ್ದಾರೆ.
ತಮ್ಮ ಶಾಸಕರ ಈ ಕೃತ್ಯಕ್ಕೆ ರಾಜ್ಯಾಧ್ಯಕ್ಷರು ಹೊಣೆ ಹೊರುತ್ತಾರಾ? ವಿರೋಧ ಪಕ್ಷದ ನಾಯಕರು ರಾಜೀನಾಮೆ ಕೊಡುತ್ತಾರಾ? ಅಥವಾ ಚಂದ್ರು ಲಮಾಣಿ ಅವರಿಂದ ರಾಜೀನಾಮೆ ಕೊಡಿಸುತ್ತಾರಾ? ಬಿಜೆಪಿ ಆರ್.ಅಶೋಕ್, ಬಿವೈ ವಿಜಯೇಂದ್ರ ಅವರು ಉತ್ತರಿಸಬೇಕು? ಹಾಗೆಯೇ, “ನಾ ಖಾವುಂಗಾ ನಾ ಖಾನೆದುಂಗಾ“ ಎಂಬ ಸ್ಲೋಗನ್ ಗೆ ಯಾವ ಅರ್ಥ ನೀಡಲಾಗಿದೆ ಎಂಬುದನ್ನೂ ಬಿಜೆಪಿ ಹೇಳಬೇಕು? ಎಂದು ಪ್ರಶ್ನಿಸಿದ್ದಾರೆ.
ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬ ಮಾತಿನಂತೆ ಬಿಜೆಪಿ ಸರ್ಕಾರ ಹೋದರೂ ಅವರ ಭ್ರಷ್ಟಾಚಾರ ಮಾತ್ರ ನಿಂತಿಲ್ಲ.
ಗುತ್ತಿಗೆದಾರರಿಂದ ಕಮಿಷನ್ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿರುವ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು “ ಬಿಜೆಪಿಯ ಭ್ರಷ್ಟಾಚಾರದ ಬ್ರ್ಯಾಂಡ್ " ಅನ್ನು ಗಟ್ಟಿಗೊಳಿಸಿದ್ದಾರೆ.
ಭ್ರಷ್ಟಾಚಾರದಲ್ಲಿ…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 21, 2026








