ಬೆಂಗಳೂರು : ಮಾರ್ಚ್ 25 ರಿಂದ 2023-24ನೇ ಸಾಲಿನ 5, 8 ಮತ್ತು 9ನೇ ತರಗತಿಗೆ ಮೌಲ್ಯಾಂಕ ಪರೀಕ್ಷೆ ಆರಂಭವಾಗಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ದಿನಾಂಕ: 25.03.2024 ರಿಂದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆಗಳಿರುವ ದಿನಾಂಕ:25.03.2024 ರ ಸೋಮವಾರ ಮತ್ತು 27.03.2024 ರ ಬುಧವಾರದಂದು ಮಧ್ಯಾಹ್ನದ ಅವಧಿಯಲ್ಲಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಇಲ್ಲದಿರುವ ದಿನಾಂಕ : 26.03.2024 ರ ಮಂಗಳವಾರ ಮತ್ತು 28.03.2024 ರ ಗುರುವಾರದಂದು ಬೆಳಗಿನ ಅವಧಿಯಲ್ಲಿ 5, 8 ಮತ್ತು 9ನೇ ತರಗತಿಯ ಮೌಲ್ಯಾಂಕನವನ್ನು ನಡೆಸಲಾಗುತ್ತಿದೆ.