ಬೆಂಗಳೂರು : ಕ್ವಾಂಟಮ್ ಕ್ಷೇತ್ರದಲ್ಲಿ ಕರ್ನಾಟಕವನ್ನು ಏಷ್ಯದ ರಾಜಧಾನಿಯನ್ನಾಗಿಸಲು ಪಣ ತೊಟ್ಟಿರುವ ರಾಜ್ಯ ಸರ್ಕಾರ ಕ್ವಾಂಟಮ್ ಮಿಷನ್ ಗಾಗಿ ₹1,000 ಕೋಟಿ ಮೀಸಲಿಡಲು ನಿರ್ಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕ್ವಾಂಟಮ್ ಮಿಷನ್ ನಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ, ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ನೆರವು ನೀಡಲು ಕ್ವಾಂಟಮ್ ವೆ೦ಚರ್ ಕ್ಯಾಪಿಟಲ್ ಫ೦ಡ್ ಪ್ರಾರ೦ಭಿಸಲಾಗುವುದು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದಂತಹ ಕ್ರಮಗಳಿಂದಾಗಿ ಕರ್ನಾಟಕ ರಾಜ್ಯವನ್ನು ಜಾಗತಿಕ ಕ್ವಾಂಟಮ್ ಕೇಂದ್ರ ಮಾಡಲಾಗುವುದು.
2035ರ ವೇಳೆಗೆ 10 ಸಾವಿರ ಉದ್ಯೋಗ ಸೃಷ್ಟಿಸಿ, ಬೆಂಗಳೂರು ಅನ್ನು ಏಷ್ಯಾದ ಕ್ವಾಂಟಮ್ ರಾಜಧಾನಿ ಮಾಡುವ ಗುರಿ ಇದೆ. ₹1.75 ಲಕ್ಷ ಕೋಟಿ ಮೌಲ್ಯದ ಕ್ವಾಂಟಮ್ ಆರ್ಥಿಕತೆ ಸೃಷ್ಟಿಸಲಾಗುವುದು ಎಂದು ಹೇಳಿದ್ದಾರೆ.