Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಹ್ಯಾಕಥಾನ್’ನಲ್ಲಿ ‘VTU ವಿದ್ಯಾರ್ಥಿ’ಗಳಿಂದ ಟಾಪ್ 5 ತಂಡಗಳಲ್ಲಿ 5ನೇ ಸ್ಥಾನಗಳಿಸಿ ಮಹತ್ವದ ಸಾಧನೆ

24/11/2025 7:03 PM

ಕಲಬುರಗಿಯಲ್ಲಿ 1,000 ಕೋಟಿ‌ ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ: ಸಚಿವ ಪ್ರಿಯಾಂಕ ಖರ್ಗೆ

24/11/2025 6:57 PM

ನಾನು ಯಾವ ಗುಂಪಿನಲ್ಲಿಯೂ ಇಲ್ಲ, ನನ್ನದು ಕಾಂಗ್ರೆಸ್ ಗುಂಪು: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಲಬುರಗಿಯಲ್ಲಿ 1,000 ಕೋಟಿ‌ ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ: ಸಚಿವ ಪ್ರಿಯಾಂಕ ಖರ್ಗೆ
KARNATAKA

ಕಲಬುರಗಿಯಲ್ಲಿ 1,000 ಕೋಟಿ‌ ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ: ಸಚಿವ ಪ್ರಿಯಾಂಕ ಖರ್ಗೆ

By kannadanewsnow0924/11/2025 6:57 PM

ಬೆಂಗಳೂರು: ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (ಲೀಪ್‌- LEAP – Local Economic Accelerator Program ) ಅಡಿಯಲ್ಲಿ ಕಲಬುರಗಿಯಲ್ಲಿ ಹೊಸ ಉದ್ಯಮಶೀಲತಾ ಕೇಂದ್ರ ಪ್ರಾರಂಭಿಸುವುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವರು, ಲೀಪ್ ₹ 1,000 ಕೋಟಿ ವೆಚ್ಚದ ಐದು ವರ್ಷಗಳ ಉಪಕ್ರಮವಾಗಿದೆ. ಪ್ರಾದೇಶಿಕ ಉದ್ಯಮಶೀಲತೆಗೆ ಚೇತರಿಕೆ ನೀಡಲು, ನಾವೀನ್ಯತೆ ವಿಕೇಂದ್ರೀಕರಿಸಲು ಮತ್ತು ರಾಜ್ಯದ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಲಸ್ಟರ್‌ಗಳಲ್ಲಿ ಆರ್ಥಿಕ ಬೆಳವಣಿಗೆ ತ್ವರಿತಗೊಳಿಸಲು ಇದು ನೆರವಾಗಲಿದೆ.

ಕಲ್ಯಾಣ ಕರ್ನಾಟಕದಾದ್ಯಂತ ಕೃಷಿ-ತಂತ್ರಜ್ಞಾನ, ಗ್ರಾಮೀಣ ನಾವೀನ್ಯತೆ ಮತ್ತು ಯುವಜನರಲ್ಲಿ ಉದ್ಯಮಶೀಲತೆ ಉತ್ತೇಜಿಸಲು 15,000 ಚದರ ಅಡಿ ವಿಸ್ತೀರ್ಣದ ಹೊಸ ನವೋದ್ಯಮ ಕೇಂದ್ರ ಮತ್ತು ಪ್ರಾಥಮಿಕ ಮಾದರಿ ಪ್ರಯೋಗಾಲಯ ಸ್ಥಾಪನೆಯಾಗಲಿದ್ದು ಮುಂದಿನ ವರ್ಷದ ಜನವರಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಸಚಿವರು ಹೇಳಿದ್ದಾರೆ.

ಕೃಷಿಕಲ್ಪ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿರುವ ಉದ್ಯಮಶೀಲತಾ ಕೇಂದ್ರವು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಾವೀನ್ಯತೆ ವ್ಯವಸ್ಥೆ ಬಲಪಡಿಸುವ ಗುರಿ ಹೊಂದಿದೆ. ಕೃಷಿ, ಸಂಬಂಧಿತ ವಲಯಗಳು, ಗ್ರಾಮೀಣ ನಾವೀನ್ಯತೆ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸಲಿದೆ.

ಈ ಉಪಕ್ರಮದ ಭಾಗವಾಗಿ, ಕಲಬುರಗಿ ಜಿಲ್ಲಾಡಳಿತವು 15,000 ಚದರ ಅಡಿ ವಿಸ್ತೀರ್ಣದ ಬಳಕೆಗೆ ಸಿದ್ಧವಾದ ಸ್ಥಳಾವಕಾಶ ಹಂಚಿಕೆ ಮಾಡಿದೆ. ಇದು ಈ ಪ್ರದೇಶಕ್ಕೆ ಮೀಸಲಾದ ನವೋದ್ಯಮ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ನವೋದ್ಯಮಗಳ ಸಂಸ್ಥಾಪಕರು, ಕೃಷಿ ಉದ್ಯಮಿಗಳು, ನಾವೀನ್ಯಕಾರರು ಮತ್ತು ಪೂರಕ ಉದ್ದಿಮೆಗಳ ಪಾಲುದಾರರಿಗೆ ಅಗತ್ಯ ನೆರವು ಒದಗಿಸಲಿದೆ‌ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.

ಈ ಕೇಂದ್ರವು ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ ಮತ್ತು ಹಣಕಾಸು ನೆರವಿನ ಲಭ್ಯತೆ ಚೌಕಟ್ಟು ಆಧರಿಸಿ ಕಾರ್ಯನಿರ್ವಹಿಸಲಿದೆ, ನವೋದ್ಯಮಗಳ ವೇಗವರ್ಧನೆ, ಸಾಮರ್ಥ್ಯ ವೃದ್ಧಿ ಮತ್ತು ಉದ್ಯಮಶೀಲತೆಗೆ ಉತ್ತೇಜನ ತತ್ವಗಳಡಿ ಇದು ಕಾರ್ಯನಿರ್ವಹಿಸಲಿದೆ. ಮೂಲಸೌಲಭ್ಯ ಮತ್ತು ಮಾರುಕಟ್ಟೆ ಲಭ್ಯತೆ ಅಡೆತಡೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಮೂಲಕ ನವೋದ್ಯಮಗಳು ಸ್ಥಳೀಯವಾಗಿ ವಿಶ್ವ ದರ್ಜೆಯ ನಾವೀನ್ಯತೆಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ಪರೀಕ್ಷಿಸಲು ಅನುವು ಮಾಡಿಕೊಡಲು ಅತ್ಯಾಧುನಿಕ ಮೂಲಮಾದರಿ ಪ್ರಯೋಗಾಲಯವನ್ನು (ಪ್ರೊಟೊಟೈಪಿಂಗ್‌ ಲ್ಯಾಬ್‌) ಸಹ ಸ್ಥಾಪಿಸಲಾಗುವುದು.

” ಕಲಬುರಗಿಯು ಗ್ರಾಮೀಣ ಕರ್ನಾಟಕದ ಬಳಕೆಯಾಗದ ಅಪಾರ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ಈ ಪ್ರದೇಶದಲ್ಲಿ ಶೇ 70 ಕ್ಕೂ ಹೆಚ್ಚು ಉದ್ಯೋಗಿಗಳು ಕೃಷಿ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ. ʼಲೀಪ್‌ʼ ಉಪಕ್ರಮದಡಿ ಮತ್ತು ಹೊಸ ಉದ್ಯಮಶೀಲತಾ ಕೇಂದ್ರದ ಮೂಲಕ, ನಾವು ತಂತ್ರಜ್ಞಾನ, ನಾವೀನ್ಯತೆ ಮತ್ತು ಅವಕಾಶಗಳನ್ನು ನೇರವಾಗಿ ನಮ್ಮ ಸಮುದಾಯಗಳಿಗೆ ತಲುಪಿಸುವ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಣ ಅಂತರವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

” ರಾಜ್ಯದ ಐಟಿ- ಬಿಟಿ ವಲಯದ ವಹಿವಾಟು ₹ 1.5 ಲಕ್ಷ ಕೋಟಿ ದಾಟಿದೆ. ʼಲೀಪ್‌ʼ ಉಪಕ್ರಮದಡಿ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯೊಂದಿಗೆ, ಈ ಶ್ರೇಷ್ಠತಾ ಕೇಂದ್ರವು ಕಲಬುರಗಿಯ ಯುವಕರಿಗೆ ಕೃಷಿ-ತಂತ್ರಜ್ಞಾನ, ಡೀಪ್-ಟೆಕ್ ಮತ್ತು ಸಂಬಂಧಿತ ವಲಯದ ನಾವೀನ್ಯತೆಗಳ ಮೂಲಕ ಸುಸ್ಥಿರ ಜೀವನೋಪಾಯ ನಿರ್ಮಿಸಲು ಶಕ್ತಿ ತುಂಬಲಿದೆ”
ಎಂದು ಹೇಳಿದ್ದಾರೆ.

ಬೆಂಗಳೂರಿನಾಚೆಗೆ ( beyond Bengaluru)/ನಾವೀನ್ಯತೆಯ ಪ್ರಯೋಜನವು ಎಲ್ಲರಿಗೂ ಸಮಾನವಾಗಿ ದೊರೆಯುವಂತೆ ಮಾಡುವ ರಾಜ್ಯ ಸರ್ಕಾರದ ಧ್ಯೇಯವನ್ನು ʼಲೀಪ್‌ʼ ಉಪಕ್ರಮವು ಪ್ರತಿಬಿಂಬಿಸುತ್ತದೆ. ಕಲಬುರಗಿಯಲ್ಲಿ ಆರಂಭವಾಗಲಿರುವ ಉದ್ಯಮಶೀಲತಾ ಕೇಂದ್ರವು ಈ ಪ್ರದೇಶದ ಕೃಷಿ ಸಾಮರ್ಥ್ಯ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಸಾಮರ್ಥ್ಯವನ್ನು ಬಳಸಿಕೊಳ್ಳಲಿದೆ, ಗ್ರಾಮೀಣ ನಾವೀನ್ಯಕಾರರು ಸುಸ್ಥಿರ ಮತ್ತು ಸ್ಪರ್ಧಾತ್ಮಕ ಉದ್ಯಮಗಳನ್ನು ಬೆಳೆಸಲು ಅನುವು ಮಾಡಿಕೊಡಲಿದೆ ಎಂದು ಸಚಿವರು ವಿವರಿಸಿದ್ದಾರೆ.

ಲೀಪ್ ಯೋಜನೆಯ ಪ್ರಮುಖ‌‌ ಅಂಶಗಳು

• ನವೋದ್ಯಮಗಳಿಗೆ ಚಿಮ್ಮುಹಲಗೆಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು (ಇನ್‌ಕ್ಯುಬೇಟರ್‌) ಮತ್ತು ವ್ಯವಸ್ಥೆಯ ಬಲವರ್ಧನೆ: ಪ್ರತ್ಯೇಕ ಕೆಲಸದ ಸ್ಥಳಗಳು, ರಚನಾತ್ಮಕ ವೇಗವರ್ಧಿಸುವ ಕಾರ್ಯಕ್ರಮಗಳು ಮತ್ತು ನವೋದ್ಯಮಗಳು ಹಾಗೂ ಗ್ರಾಮೀಣ ಉದ್ಯಮಿಗಳಿಗೆ ಅಗತ್ಯ ಬೆಂಬಲ.

• ಮಾರ್ಗದರ್ಶನ ಮತ್ತು ಸಾಮರ್ಥ್ಯ ವೃದ್ಧಿ: ತಜ್ಞರ ನೇತೃತ್ವದ ಮಾರ್ಗದರ್ಶನ, ಮಾರುಕಟ್ಟೆ ಸಂಪರ್ಕ ಮತ್ತು ಕೌಶಲ-ಅಭಿವೃದ್ಧಿ ಮಾರ್ಗದರ್ಶನ– ಮಾರುಕಟ್ಟೆ ಲಭ್ಯತೆ– ಹಣಕಾಸು ನೆರವು.

• ಕೃಷಿ ಹಾಗೂ ಸಂಬಂಧಿತ ವಲಯಗಳಿಗೆ ಡೀಪ್-ಟೆಕ್ ಮತ್ತು ಐಟಿ ಸೇವೆಗಳು: ಗ್ರಾಮೀಣ ಕೃಷಿ ವಹಿವಾಟಿನಲ್ಲಿ ತಂತ್ರಜ್ಞಾನ ಅಳವಡಿಕೆ ಹೆಚ್ಚಿಸಲು ಐಒಟಿ, ರೋಬೊಟಿಕ್ಸ್, ಎಐ, ಆಹಾರ ಸಂಸ್ಕರಣೆ, ಯಾಂತ್ರೀಕರಣ, ಎಆರ್/ವಿಆರ್ ಮತ್ತು ಐಟಿ-ಸೌಲಭ್ಯಗಳ ಸೇವೆಗಳಿಗೆ ಪ್ರಯೋಗಾಲಯಗಳು.

• ಮೂಲಮಾದರಿ ಮತ್ತು ಉತ್ಪನ್ನ ಅಭಿವೃದ್ಧಿ: ನವೋದ್ಯಮಗಳು ಸ್ಥಳೀಯವಾಗಿ ನಾವೀನ್ಯತೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಸಹಾಯ ಮಾಡುವ ಪೂರ್ಣ ಪ್ರಮಾಣದ ಮೂಲಮಾದರಿ ಪ್ರಯೋಗಾಲಯವು, ವೆಚ್ಚ ತಗ್ಗಿಸಲಿದೆ.

• ಸ್ಥಳೀಯ ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಬೆಳವಣಿಗೆ: ಸ್ಥಳೀಯವಾಗಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವುದು, ಗ್ರಾಮೀಣ-ನಗರ ವಲಸೆಯನ್ನು ಕಡಿಮೆ ಮಾಡುವುದು

• ಮೂಲಸೌಕರ್ಯ ಮತ್ತು ಸಹಯೋಗ: ಸರ್ಕಾರಿ ಇಲಾಖೆಗಳು, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳಲ್ಲಿ ಹೂಡಿಕೆ ಮಾಡುವವರು ಮತ್ತು ಇತರರ ಪಾಲುದಾರಿಕೆಯಡಿ 15,000 ಚದರ ಅಡಿಗಳಷ್ಟು ಪ್ರತ್ಯೇಕ ನವೋದ್ಯಮ ಸ್ಥಳಾವಕಾಶ.

ನಾನು ಯಾವ ಗುಂಪಿನಲ್ಲಿಯೂ ಇಲ್ಲ, ನನ್ನದು ಕಾಂಗ್ರೆಸ್ ಗುಂಪು: ಶಾಸಕ ಗೋಪಾಲಕೃಷ್ಣ ಬೇಳೂರು

ಈ ಎರಡು ಎಲೆಗಳು ಮನೆಯಲ್ಲಿದ್ದರೆ ಸಾಕು, ಎಲ್ಲ ದೋಷಗಳು, ದುಷ್ಟಶಕ್ತಿಗಳು ಓಡಿ ಹೋಗುತ್ತವೆ

Share. Facebook Twitter LinkedIn WhatsApp Email

Related Posts

‘ಹ್ಯಾಕಥಾನ್’ನಲ್ಲಿ ‘VTU ವಿದ್ಯಾರ್ಥಿ’ಗಳಿಂದ ಟಾಪ್ 5 ತಂಡಗಳಲ್ಲಿ 5ನೇ ಸ್ಥಾನಗಳಿಸಿ ಮಹತ್ವದ ಸಾಧನೆ

24/11/2025 7:03 PM1 Min Read

ನಾನು ಯಾವ ಗುಂಪಿನಲ್ಲಿಯೂ ಇಲ್ಲ, ನನ್ನದು ಕಾಂಗ್ರೆಸ್ ಗುಂಪು: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:41 PM1 Min Read

ಮೀನುಗಾರಿಕೆ ಉದ್ಯಮ ಪುನಶ್ಚೇತನ, ಮೀನುಗಾರರ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:38 PM1 Min Read
Recent News

‘ಹ್ಯಾಕಥಾನ್’ನಲ್ಲಿ ‘VTU ವಿದ್ಯಾರ್ಥಿ’ಗಳಿಂದ ಟಾಪ್ 5 ತಂಡಗಳಲ್ಲಿ 5ನೇ ಸ್ಥಾನಗಳಿಸಿ ಮಹತ್ವದ ಸಾಧನೆ

24/11/2025 7:03 PM

ಕಲಬುರಗಿಯಲ್ಲಿ 1,000 ಕೋಟಿ‌ ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ: ಸಚಿವ ಪ್ರಿಯಾಂಕ ಖರ್ಗೆ

24/11/2025 6:57 PM

ನಾನು ಯಾವ ಗುಂಪಿನಲ್ಲಿಯೂ ಇಲ್ಲ, ನನ್ನದು ಕಾಂಗ್ರೆಸ್ ಗುಂಪು: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:41 PM

ಮೀನುಗಾರಿಕೆ ಉದ್ಯಮ ಪುನಶ್ಚೇತನ, ಮೀನುಗಾರರ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:38 PM
State News
KARNATAKA

‘ಹ್ಯಾಕಥಾನ್’ನಲ್ಲಿ ‘VTU ವಿದ್ಯಾರ್ಥಿ’ಗಳಿಂದ ಟಾಪ್ 5 ತಂಡಗಳಲ್ಲಿ 5ನೇ ಸ್ಥಾನಗಳಿಸಿ ಮಹತ್ವದ ಸಾಧನೆ

By kannadanewsnow0924/11/2025 7:03 PM KARNATAKA 1 Min Read

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) – ಎಐ ಮತ್ತು ಡೇಟಾ ಸೈನ್ಸ್ ಶಾಖೆಯ ಮೂವರು ವಿದ್ಯಾರ್ಥಿಗಳು ಧಾರವಾಡದ ಐಐಐಟಿ…

ಕಲಬುರಗಿಯಲ್ಲಿ 1,000 ಕೋಟಿ‌ ವೆಚ್ಚದಲ್ಲಿ ಉದ್ಯಮಶೀಲತಾ ಕೇಂದ್ರ ಸ್ಥಾಪನೆ: ಸಚಿವ ಪ್ರಿಯಾಂಕ ಖರ್ಗೆ

24/11/2025 6:57 PM

ನಾನು ಯಾವ ಗುಂಪಿನಲ್ಲಿಯೂ ಇಲ್ಲ, ನನ್ನದು ಕಾಂಗ್ರೆಸ್ ಗುಂಪು: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:41 PM

ಮೀನುಗಾರಿಕೆ ಉದ್ಯಮ ಪುನಶ್ಚೇತನ, ಮೀನುಗಾರರ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ: ಶಾಸಕ ಗೋಪಾಲಕೃಷ್ಣ ಬೇಳೂರು

24/11/2025 6:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.