ಬೆಂಗಳೂರು : 2025-26ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ/ ಪ್ರೌಢ ಶಾಲೆಗಳಲ್ಲಿ ಪ್ರಸ್ತುತ ಇರುವ ಕನ್ನಡ/ಇತರೆ ಮಾಧ್ಯಮದ ಜೊತೆಗೆ ಆಂಗ್ಲ (ದ್ವಿಭಾಷಾ) ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಮತ್ತು ಉಲ್ಲೇಖಗಳಿಗೆ-1.2.3.4.5.6.7ಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಟ್ಟು 4404 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ/ಇತರೆ ಮಾಧ್ಯಮದ ಜೊತೆಗೆ ಅಂಗ್ಲ ಮಾಧ್ಯಮ (ದ್ವಿಭಾಷಾ) (Bilingual) ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಈಗಾಗಲೇ ಅನುಮತಿ ನೀಡಿ ಆದೇಶಿಸಿದೆ.
2025-26ನೇ ಸಾಲಿನಿಂದ ಉಲ್ಲೇಖ-8ರ ಸರ್ಕಾರದ ಆದೇಶ ಮತ್ತು ಅದರೊಂದಿಗಿನ ಅನುಬಂಧದಲ್ಲಿನ ರಾಜ್ಯದ ಒಟ್ಟು 4134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಯಿಂದ ಪ್ರಸ್ತುತ ನಡೆಯುತ್ತಿರುವ ಕನ್ನಡ/ಇತರ ಮಾಧ್ಯಮದ ಜೊತೆಗೆ ಹೊಸದಾಗಿ ಅಂಗ್ಲ ಮಾಧ್ಯಮ(ದ್ವಿಭಾಷಾ ಮಾಧ್ಯಮ) (Bilingual) ತರಗತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಿಲು ಸರ್ಕಾರದ ಆದೇಶದ ಸಂಖ್ಯೆ:ಇಡಿ 109 ಯೋಯೋಕ 2018 ದಿನಾಂಕ:18.05.2019ರಲ್ಲಿನ ಷರತ್ತುಬದ್ಧವಾಗಿ ಅನುಮತಿಸಿ ಆದೇಶಿಸಿದೆ.
ಮುಂದುವರೆದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ ಬಿಳಲುಕೊಪ್ಪ, ಸರ್ಕಾರಿ ಪ್ರೌಢಶಾಲೆ ಹೊಸೂರು-ಗುಡ್ಡಕೇರಿ ಮತ್ತು ಸರ್ಕಾರಿ ಪ್ರೌಢಶಾಲೆ ಹೆದ್ದೂರುಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಕನ್ನಡ/ಇತರೆ ಮಾಧ್ಯಮದ ಜೊತೆಗೆ ಹೊಸದಾಗಿ ಅಂಗ್ಲ ಮಾಧ್ಯಮ(ದ್ವಿಭಾಷಾ ಮಾಧ್ಯಮ) (Bilingual) ತರಗತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಿಲು ಸರ್ಕಾರದ ಆದೇಶದ ಸಂಖ್ಯೆ ಇಡಿ 109 ಯೋಯೋಕ 2018 ದಿನಾಂಕ:18.05.2019ರಲ್ಲಿನ ಷರತ್ತುಬದ್ಧವಾಗಿ ಅನುಮತಿಸಿ ಉಲ್ಲೇಖ-8ರ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಉಲ್ಲೇಖ-01 ರಿಂದ 08ರಲ್ಲಿನ ಸರ್ಕಾರದ ಆದೇಶಗಳಲ್ಲಿನ ಅಂಶಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೂಡಲೇ ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸುವಂತೆ ಹಾಗೂ ಶಾಲೆಯಲ್ಲಿ EMTIP ತರಬೇತಿ ಪಡೆದ ಶಿಕ್ಷಕರು ಲಭ್ಯವಿದ್ದಲ್ಲಿ ಸದರಿ ಶಿಕ್ಷಕರೇ ಆಂಗ್ಲ ಮಾಧ್ಯಮವನ್ನು ಬೋಧಿಸುವಂತೆ ಕ್ರಮಮಾಡಲು ಸಂಬಂಧಿಸಿದ ಎಲ್ಲಾ ಇಲಾಖಾಧಿಕಾರಿಗಳಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ಈ ಮೂಲಕ ಸೂಚಿಸಿದೆ.