ಬೆಂಗಳೂರು : ಮಲಹೊರುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳ ಪ್ರಕಾರ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಶಿಕ್ಷಾರ್ಹ ಅಪರಾಧ. ಶೌಚಾಲಯ ಗುಂಡಿಯ ಮಲತ್ಯಾಜ್ಯವನ್ನು ತೆರವುಗೊಳಿಸಲು ಕಡ್ಡಾಯವಾಗಿ ಸಕ್ಕಿಂಗ್ ವಾಹನ ಬಳಸಿ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಕಟನೆ ಹೊರಡಿಸಿದ್ದು, ಮ್ಯಾನುಯಲ್ ಸ್ಕ್ಯಾವೆಂಜಿಂಗ್ (ಮಲಹೊರುವ ಪದ್ಧತಿ) ಶಿಕ್ಷಾರ್ಹ ಅಪರಾಧ. ಶೌಚಾಲಯ ಗುಂಡಿಯ ಮಲ ತ್ಯಾಜ್ಯವನ್ನು ತೆರವುಗೊಳಿಸಲು ಕಡ್ಡಾಯವಾಗಿ ಸಕ್ಕಿಂಗ್ ವಾಹನವನ್ನು ಬಳಸಬೇಕು. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅನ್ನು ಪ್ರೋತ್ಸಾಹಿಸಿದ್ದಲ್ಲಿ 2-7 ವರ್ಷ ಜೈಲು ಶಿಕ್ಷೆ ಅಥವಾ 2-5 ಲಕ್ಷ ದಂಡ ಅಥವಾ ಎರಡು ಅನ್ವಯವಾಗುತ್ತದೆ.