ಬೆಂಗಳೂರು: ಬಿಎಂಟಿಸಿಯ ( BMTC ) ಯಾವುದೇ ನೌಕರರು ಸಂಸ್ಥೆಯ ಪೂರ್ವಾನುಮತಿ ಇಲ್ಲದೇ ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ. ಒಂದು ವೇಳೆ ಅದು ಕಂಡುಬಂದಲ್ಲಿ, ಆ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಸಂಸ್ಥೆ ಆದೇಶದಲ್ಲಿ ಖಡಕ್ ಎಚ್ಚರಿಕೆ ನೀಡಿದೆ.

BIG BREAKING NEWS: ರಾಜ್ಯದ ‘ಪದವಿ ಪೂರ್ವ ಕಾಲೇಜು’ಗಳ ‘ಮದ್ಯಂತರ ರಜೆ’ ವಿಸ್ತರಿಸಿ ಸರ್ಕಾರ ಆದೇಶ: ಅ.14ರಿಂದ ಕಾಲೇಜು ಓಪನ್

ಈ ಸಂಬಂಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ( Bangalore Metropolitan Transport Corporation -BMTC ) ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಸಂಸ್ಥೆಯ ಹಲವಾರು ನೌಕರರು ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿ, ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿರುತ್ತದೆ ಎಂದಿದ್ದಾರೆ.

BREAKING NEWS : ಉತ್ತರಾಖಂಡ್ ಟ್ರಾನ್ಸಿಟ್ ಕ್ಯಾಂಪ್‌ನಲ್ಲಿ ‘ಗ್ಯಾಸ್ ಸೋರಿಕೆ’ ; 20ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು |Gas Leak

ನೌಕರರ ಶಿಸ್ತು ಮತ್ತು ನಡತೆಗಳ ನಿಯಮಾವಳಿಗಳು 1971ರ ನಿಯಮ 4(1)ರಂತೆ ಸಂಸ್ಥೆಯ ಯಾರೇ ನೌಕರನು ಸಂಸ್ಥೆಯ ಪೂರ್ವಾನುಮತಿಯನ್ನು ಪಡೆಯದೇ ಯಾವುದೇ ವ್ಯಾಪಾರದಲ್ಲಿ ಅಥವಾ ವ್ಯವಹಾರದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗತಕ್ಕದಲ್ಲ. ಇತರ ಯಾವುದೇ ಉದ್ಯೋಗ ಮಾಡತಕ್ಕದ್ದಲ್ಲ ಎಂದು ಹೇಳಲಾಗಿದೆ ಎಂದು ತಿಳಿಸಿದ್ದಾರೆ.

BIGG NEWS : ಸಿಧು ಮೂಸ್ವಾಲಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ‘ಅಜರ್ಬೈಜಾನ್ನಲ್ಲಿ ಪತ್ತೆ’ : ಪಂಜಾಬ್ ಡಿಜಿಪಿ

ಆದ್ದರಿಂದ ಸಂಸ್ಥೆಯ ಯಾವುದೇ ನೌಕರರು ಪೂರ್ವಾನುಮತಿ ಪಡೆಯದೇ ಖಾಸಗಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಲ್ಲಿ, ಅಂತಹ ನೌಕರರ ವಿರುದ್ಧ ಶಿಸ್ತು ಮತ್ತು ನಡತೆಗಳ ನಿಯಮಾವಳಿಗಳು 1971ರ ಅನ್ವಯ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆ

Share.
Exit mobile version