ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಬೆನ್ನಲ್ಲೇ ಮತ್ತೊಂದು ಶಾಕ್ ಎನ್ನುವಂತೆ ವಿದ್ಯುತ್ ದರ ಏರಿಕೆಯ ಶಾಕ್ ಅನ್ನು ನೀಡಲಾಗಿದೆ.
ಈ ಸಂಬಂಧ ಇಂದು ಕೆಇಆರ್ ಸಿ ಮಾಹಿತಿ ನೀಡಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ರಾಜ್ಯಾಧ್ಯಂತ ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ. ಈ ಮೂಲಕ ಹಾಲಿನ ದರ ಏರಿಕೆ ಬೆನ್ನಲ್ಲೇ ವಿದ್ಯುತ್ ದರೆ ಏರಿಕೆ ಶಾಕ್ ನೀಡಲಾಗಿದೆ.
ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ರಾಜ್ಯದಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರ್/ಕೆಜಿಗೆ ರೂ.4/- ರಂತೆ ಹೆಚ್ಚಿಸಲು ಸಮ್ಮತಿಸಲಾಯಿತು. ದರ ಪರಿಷ್ಕರಣೆಯ ಮೊತ್ತವು ರಾಜ್ಯದ ಹಾಲು ಉತ್ಪಾದಕರಿಗೆ ನೇರವಾಗಿ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಈ ಹಿಂದೆ ದಿನಾಂಕ:26.06.2024 ರಿಂದ ಪ್ರತಿ 1 ಲೀಟ ನಂದಿನಿ ಹಾಲಿಗೆ 50 ಮಿಲಿ ಹೆಚ್ಚುವರಿ ನೀಡಿ ಸದರಿ ಪ್ರಮಾಣಕ್ಕೆ ರೂ.2/- ರಂತೆ ಹೆಚ್ಚಿಸಲಾಗಿದ್ದ ದರವನ್ನು ಹಿಂಪಡೆದು ಮೊದಲಿನಂತೆ ಯಥಾಸ್ಥಿತಿ 500 ಮಿಲಿ ಮತ್ತು 1 ಲೀಟರ್ ಮೊಟ್ಟಣದಲ್ಲಿ ಪ್ರಸ್ತುತ ರೂ.4/- ದರ ಪರಿಷ್ಕರಣೆಯನ್ನು ಅಳವಡಿಸಿಕೊಂಡು ಮಾರಾಟಕ್ಕೆ ನಿರ್ಧರಿಸಲಾಗಿದೆ.