ಹಾವೇರಿ: ಮಂತ್ರಿಗಳೆ ನಿಮ್ಮ ಒಂದು ವರ್ಷದ ಸಾಧನೆ ಏನು ರಾಜ್ಯ ಸರ್ಕಾರದ ಖಜಾನೆಯಿಂದ ಎಷ್ಟು ರೂಪಾಯಿ ಬರ ಪರಿಹಾರ ಕೊಟ್ಟಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಅವರು ಇಂದು ಹಾವೇರಿ ತಾಲೂಕಿನ ಯಲಗಚ್ಚ, ಕೋಣನತಂಬಿಗಿ, ಹಂದಿಗನೂರು, ಹೊಸ ಕಿತ್ತೂರ, ಹಲಗಿ, ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಬರ ಬಿದ್ದಿದ್ದು ಈ ಸರ್ಕಾರ ರೈತರಿಗೆ ತನ್ನ ಖಜಾನೆಯಿಂದ ನಯಾಪೈಸೆ ನೀಡದೆ ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ಇದೊಂದು ಕೂಳು ನೀರಿಲ್ಲದ ದರಿದ್ರ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಕಳೆದ ಹತ್ತು ತಿಂಗಳಿಂದ ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ದಿ ಕೆಲಸ ನಡೆದಿಲ್ಲ. ಅಭಿವೃದ್ದಿ ಮಾಡುವ ಉದ್ದೇಶ ಇವರಿಗಿಲ್ಲ. ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ ಕೊಡುತ್ತಿದ್ದ 4 ಸಾವಿರ ರೂ ಸ್ಥಗಿತಗೊಳಿಸಿದ್ದಾರೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಮಾಡಿದೆ. ಅದನ್ನು ನಿಲ್ಲಿಸಿದರು. ಯಶಸ್ವಿನಿ ನಿಲ್ಲಿಸಿದರು. ಇವರಿಗೆ ರೈತರೆಂದರೆ ಅಲರ್ಜಿ, ಈ ರೈತ ವಿರೋಧಿ ಸರ್ಕಾರವನ್ನು ತೊಲಗಿಸಬೇಕು ಎಂದು ಹೇಳಿದರು.
ಮಂತ್ರಿಗಳು ಕಳೆದ ಒಂದು ವರ್ಷದಲ್ಲಿ ನಿಮ್ಮ ಇಲಾಖೆಗಳಲ್ಲಿ ಎಷ್ಟು ಕೆಲಸ ಮಾಡಿದ್ದೀರಿ ಲೆಕ್ಕ ಕೊಡಿ, ಮಕ್ಕಳ ಹಾಸ್ಟೇಲ್ ಫಿ ಕೊಟ್ಟಿಲ್ಲ, ಕುಡಿಯುವ ನೀರಿಗೆ ಒಂದು ಬೋರ್ ವೆಲ್ ಕೊಟ್ಟಿಲ್ಲ. ರೈತರ ಹಾಲಿನ ಬಾಕಿ ಕೊಟ್ಟಿಲ್ಲ. ಈ ಸರ್ಕಾರ ಇದ್ದೂ ಸತ್ತಂತೆ ಆಗಿದೆ ಎಂದರು.
ಹಾನಗಲ್ ನಲ್ಲಿ ಅಲ್ಪ ಸಂಖ್ಗಾತ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದದವರನ್ನು ರಕ್ಷಣೆ ಮಾಡುತ್ತಿದ್ದಾರೆ. ಹುಬ್ಬಳ್ಲಿಯಲ್ಲಿ ನೇಹಾ ಹಿರೇಮಠ ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಸರ್ಕಾರದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ. ದಲಿತರ ವಿಚಾರದಲ್ಲಿಯೂ ಈ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದೆ.ಎಸ್ಸಿ ಪಿ ಟಿಎಸ್ ಪಿ ಹಣವನ್ನು ಗ್ಯಾರೆಂಟಿ ಗಳಿಗೆ ಕೊಟ್ಟಿದ್ದಾರೆ. ದಲಿತ ವಿರೋಧಿ ಸರ್ಕಾರ ಎಂದು ಆರೋಪಿಸಿದರು.
ಪ್ರಧಾನಿ ಮೋದಿಯವರು ಕೊಟ್ಟ ಅಕ್ಕಿಯನ್ನು ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. 200 ಯುಮಿಟ್ ವಿದ್ಯುತ್ ಯಾರಿಗೂ ನೀಡಿಲ್ಲ. ಗೃಹಲಕ್ಷ್ಮೀ ಶೇ 30% ರಷ್ಟು ತಲುಪಿಲ್ಲ. ಯುವನಿಧಿ ಯಾರಿಗೂ ಬಂದಿಲ್ಲ. ಮತ್ತೆ ಸುಳ್ಳು ಗ್ಯಾರೆಂಟಿ ಗಳನ್ನು ಹೇಳುತ್ತ ಹೊರಟಿದ್ದಾರೆ. ಅವರ ಸುಳ್ಳುಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವಂತೆ ಮನವಿ ಮಾಡಿದರು.
ಇದು ಮಕ್ಕಳ ಭವಿಷ್ಯ ಬರೆಯುವ ಚುನಾವಣೆ ಮೋದಿಯರನ್ನು ಮೂರನೇ ಬಾರಿ ಪಿಎಂ ಮಾಡಲು ನನ್ನನ್ನು ಗೆಲ್ಲಿಸಲು ತೀರ್ಮಾನಿಸಿದ್ದಿರಿ. ನನ್ನ ಕ್ಷೇತ್ರದಲ್ಲಿ 11 ಲಕ್ಷ ಮತದಾರರಿಗೆ ಕೇಂದ್ರದ ಯೋಜನೆಗಳು ತಲುಪಿವೆ. ಪ್ರಧಾನಿ ಮೋದಿಯವರು ಅಸಾಧ್ಯವನ್ನು ಸಾಧ್ಯ ಮಾಡಿದ್ದಾರೆ. ಮನೆ ಮನೆಗೆ ನೀರು ತರುವುದು ಕಷ್ಟ ಅಂತ ಹೇಳಿದ್ದರು. ಮೋದಿಯವರು ನಾಲ್ಕು ವರ್ಷದ ಹಿಂದೆ ಕೆಂಪು ಕೋಟೆಯ ಮೇಲೆ ನಿಂತು ಮನೆ ಮನೆಗಿ ನೀರು ತಲುಪಿಸುವ ಘೊಷಣೆ ಮಾಡಿದರು. ನನ್ನ ಅವಧಿಯಲ್ಲಿ ರಾಜ್ಯದಲ್ಲಿ 30 ಲಕ್ಷ ಮನೆಗಳಿಗೆ ನಲ್ಲಿ ನೀರು ತಲುಪಿಸಿದ್ದೇವೆ. ಮೋದಿಯವರು ಹತ್ತು ವರ್ಷದಲ್ಲಿ 25 ಕೊಟಿ ಬಡವರನ್ನು ಬಡತದಿಂದ ಮೇಲೆ ತಂದಿದ್ದಾರೆ.
ಕೊವಿಡ್ ಸಂದರ್ಭದಲ್ಲಿ ಎಲ್ಲರಿಗೂ ಕೊವಿಡ್ ಲಸಿಕೆ ಕೊಡಿಸಿದ್ದಾರೆ. ಅಕ್ಕಿ, ಮನೆಗೆ ನೀರು ಕೊಟ್ಟಿದ್ದಾರೆ. ಅವರ ಋಣ ತೀರಿಸಲು ಬಿಜೆಪಿಗೆ ಮತ ಹಾಕಿ, ನಿಮ್ಮ ಪರವಾಗಿ ಸಂಸತ್ತಿನಲ್ಲಿ ಸಿಂಹ ಗರ್ಜನೆ ಮಾಡುವುದಾಗಿ ತಿಳಿಸಿದರು.
ಪ್ರಚಾರ ಸಂದರ್ಭದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನ ಹಾಜರಿದ್ದರು.
BREAKING: ಕರ್ನಾಟದ 6 ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ: ಜೂ.3ರಂದು ಮತದಾನ, ಜೂ.6ಕ್ಕೆ ಫಲಿತಾಂಶ ಪ್ರಕಟ
BREAKING : ‘ಬಾರ್ ಅಸೋಸಿಯೇಷನ್’ಗಳಲ್ಲಿ 3ನೇ ಒಂದು ಭಾಗದಷ್ಟು ‘ಮಹಿಳಾ ಕೋಟಾ’ ಜಾರಿಗೆ ಸುಪ್ರೀಂಕೋರ್ಟ್ ಆದೇಶ