ನವದೆಹಲಿ: ರಾಜ್ಯಸಭಾ ಖಾಲಿ ಇರುವ 12 ಸ್ಥಾನಗಳಿಗೆ ಸೆಪ್ಟೆಂಬರ್.3 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯಸಭೆಯಲ್ಲಿ ಖಾಲಿ ಇರುವ 12 ಸ್ಥಾನಗಳಿಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಒಂಬತ್ತು ರಾಜ್ಯಗಳಲ್ಲಿ ಖಾಲಿ ಇರುವ 12 ರಾಜ್ಯಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ. ನಾಮಪತ್ರ ಹಿಂಪಡೆಯಲು ಆಗಸ್ಟ್ 26 ರಿಂದ 27 ಕೊನೆಯ ದಿನವಾಗಿದೆ.
ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಸರ್ಬಾನಂದ ಸೋನೊವಾಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಾಲಿ ಸದಸ್ಯರು ಲೋಕಸಭೆಗೆ ಆಯ್ಕೆಯಾದ ನಂತರ ಹತ್ತು ಸ್ಥಾನಗಳು ಖಾಲಿಯಾಗಿವೆ. ಸದಸ್ಯರು ರಾಜೀನಾಮೆ ನೀಡಿದ ನಂತರ ಎರಡು ಸ್ಥಾನಗಳು ಖಾಲಿ ಉಳಿದಿವೆ.
12 ಸ್ಥಾನಗಳ ಪೈಕಿ ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದ ತಲಾ 2 ಸ್ಥಾನಗಳಿವೆ. ಮತ್ತು ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರಾ, ತೆಲಂಗಾಣ ಮತ್ತು ಒಡಿಶಾದಿಂದ ತಲಾ 1.
ಅಂದಹಾಗೇ ಅಸ್ಸಾಂನ ಕಾಮಕ್ಯ ಪ್ರಸಾದ್ ತಾಸಾ, ಸರ್ಬಾನಂದ ಸೋನವಾಲ, ಬಿಹಾರದ ಮಿಶಾ ಭಾರತಿ, ವಿವೇಕ್ ಠಾಕೂರ್, ಹರಿಯಾಣದ ದೀಪೇಂದ್ರ ಹೂಡಾ, ಮಧ್ಯಪ್ರದೇಶದ ಜ್ಯೋತಿರಾಧ್ಯ ಎಂ ಸಿಂಧೆ, ಮಹಾರಾಷ್ಟ್ರದ ಉದಬರಾಜೆ ಬೋನ್ಸ್ಲೇ, ಪಿಯೂಶ್ ವೇದಪ್ರಕಾಶ್ ಗೋಯಲ್, ರಾಜಸ್ಥಾನದ ಕೆ.ಸಿ ವೇಣುಗೋಪಾಲ್, ತ್ರಿಪುರದ ಬಿಪ್ಲಬ್ ಕುಮಾರ್ ದೇಬ್, ತೆಲಂಗಾಣದ ಡಾ.ಕೆ ಕೇಶವ ರಾವ್ ಹಾಗೂ ಒಡಿಶಾದ ಮಮತಾ ಮೊಹಂತ ಅವರ ಸ್ಥಾನಗಳಿಗೆ ರಾಜೀನಾಮೆ ನೀಡಲಾಗಿತ್ತು.
Election Commission of India releases notification for the 12 vacant seats of Rajya Sabha. Elections will be held on 3rd September. The last date for withdrawal of nominations is the 26th and 27th of August. pic.twitter.com/1d3SgWivOT
— ANI (@ANI) August 7, 2024
BREAKING: ನನ್ನ ವಿರುದ್ಧದ ಆರೋಪ ಸಾಬೀತು ಪಡಿಸಿದ್ರೇ ‘ರಾಜಕೀಯ ನಿವೃತ್ತಿ’: ಶಾಸಕ ಬೇಳೂರು ಗೋಪಾಲಕೃಷ್ಣ ಸವಾಲ್