Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಮಕ್ಕಳಿಗಾಗಿ NCERT ಯಿಂದ ‘ಇ-ಮ್ಯಾಜಿಕ್ ಬಾಕ್ಸ್’ ಅಪ್ಲಿಕೇಶನ್ ಬಿಡುಗಡೆ : ಇದರ ಪ್ರಯೋಜನಗಳೇನು ತಿಳಿಯಿರಿ !

20/02/2026 10:41 AM

BREAKING : ಶಂಕಿತ ಉಗ್ರ ಜುನೈದ್ ಅಹಮ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ‘NIA’

20/02/2026 10:37 AM

BIG NEWS : ದಾವಣಗೆರೆಯಲ್ಲಿ ಭೀಕರ ಅಪಘಾತ : ಟಿಟಿ ವಾಹನ ಪಲ್ಟಿಯಾಗಿ 13 ಜನರಿಗೆ ಗಂಭೀರ ಗಾಯ!

20/02/2026 10:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » EVM ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ: ಸಚಿವ ಸಂಪುಟದ ನಿರ್ಧಾರಕ್ಕೆ ಬಿಜೆಪಿ ಪಿ.ರಾಜೀವ್ ಕಿಡಿ
KARNATAKA

EVM ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ: ಸಚಿವ ಸಂಪುಟದ ನಿರ್ಧಾರಕ್ಕೆ ಬಿಜೆಪಿ ಪಿ.ರಾಜೀವ್ ಕಿಡಿ

By kannadanewsnow0905/09/2025 6:05 PM

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ಜನಪ್ರಿಯತೆಯನ್ನು ತಡೆದುಕೊಳ್ಳುವುದಕ್ಕೆ ಆಗದೆ, ಕೊನೇ ಅಸ್ತ್ರವಾಗಿ ಕಾಂಗ್ರೆಸ್ ಅಪಪ್ರಚಾರಕ್ಕೆ ಇಳಿದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಚುನಾವಣೆ ಅಕ್ರಮ ಇವಿಎಂಗಳ ಮೂಲಕ ನಡೆಯುತ್ತಿಲ್ಲ ಎಂಬುದು ಗೊತ್ತಾಗಿದೆ. ಮೋದಿಜೀ ಅವರ ಜನಪ್ರಿಯತೆಯಲ್ಲಿ ನಾವು ಚುನಾವಣೆ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದು ಅವರಿಗೆ ಅರ್ಥವಾಗಿದೆ. ಹಾಗಾಗಿ ಜನರ ಮಧ್ಯೆ ಗೊಂದಲ ಸೃಷ್ಟಿ ಮಾಡಲು ಮತಗಳ್ಳತನದ ಆರೋಪವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸ್ಥಳೀಯ ಚುನಾವಣೆಗಳನ್ನು ಮತಪತ್ರಗಳ (ಬ್ಯಾಲೆಟ್ ಪೇಪರ್) ಮೂಲಕ ನಡೆಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ನರೇಂದ್ರ ಮೋದಿಜೀ ಅವರು ಜಗತ್ತಿನಲ್ಲಿ ನಡೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಭಾರತ ಸವಾಲು ಒಡ್ಡುವ ರೀತಿಯಲ್ಲಿ ನಿಲ್ಲಬೇಕು ಎಂದು ಡಿಜಿಟಲ್ ಆಡಳಿತ ಮತ್ತು ಡಿಜಿಟಲ್ ವಹಿವಾಟು ಮಾಡುತ್ತಿರುವಾಗ ರಾಜ್ಯ ಸರ್ಕಾರ ಮತಪತ್ರದ ಕಡೆಗೆ ವಾಪಸ್ಸು ತಿರುಗಿ ಹೋಗುತ್ತಿದೆ ಎಂದು ಟೀಕಿಸಿದರು. ಇದರ ಹಿಂದೆ ಯಾವ ಉದ್ದೇಶವಿದೆ ಎಂದು ಪ್ರಶ್ನಿಸಿದರು.
ಒಕ್ಕೂಟ ವ್ಯವಸ್ಥೆಯ ಒಂದು ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಕೇಂದ್ರಾಡಳಿತ ಪ್ರದೇಶದ ಲೆಪ್ಟಿನೆಂಟ್ ಗವರ್ನರ್ ರೀತಿಯ ವರ್ತನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಮೊದಲು ಬ್ಯಾಲೆಟ್ ಪೇಪರ್ ಇದ್ದಾಗ ನಾವು ಒಬ್ಬಬ್ಬರು 50 ವೋಟುಗಳನ್ನು ಒತ್ತಿದ್ದು ನಿಮಗೆ ಗೊತ್ತಿಲ್ಲವೇ ಗೊತ್ತಿಲ್ಲವೇ ಎಂದು ಹೇಳಿ ಡಾ. ಪರಮೇಶ್ವರ್ ಅವರು ಸ್ವತಃ ಕೇಳಿದ್ದರು ಎಂದು ನೆನಪಿಸಿದರು. ಕೊಪ್ಪಳದಲ್ಲಿ ನಾನು ಚುನಾವಣೆಗೆ ನಿಂತಾಗ ಚುನಾವಣಾ ಅಕ್ರಮದ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಸೋಲಿಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದರು ಎಂದು ನೆನಪಿಸಿದರು.

ದೇಶದ ಇತಿಹಾಸದಲ್ಲಿ ಶ್ರೀಮತಿ ಇಂದಿರಾಗಾಂಧಿ ಚುನಾವಣಾ ಅಕ್ರಮಕ್ಕಾಗಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಮೊದಲ ಪ್ರಧಾನಿ ಎಂದು ಹೇಳಿದರು. ಅಂದರೆ ಕಾಂಗ್ರೆಸ್ ಚುನಾವಣಾ ಅಕ್ರಮಗಳನ್ನು ಮಾಡುವುದು ತನ್ನ ರಾಜಕೀಯ ಚಟುವಟಿಕೆಯ ಭಾಗವಾಗಿ ಇಟ್ಟುಕೊಂಡಿದೆ ಎಂದು ಟೀಕಿಸಿದರು.

ಇವಿಎಂ ಇರುವುದರಿಂದ ಕಾಂಗ್ರೆಸ್ಸಿನವರಿಗೆ ಅಕ್ರಮ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಕಾಂಗ್ರೆಸ್ ಅಕ್ರಮ ಮಾಡುವುದಿದ್ದರೆ ಮತ್ತೆ ಬ್ಯಾಲೆಟ್ ಪೇಪರ್ ತರಬೇಕು ಅನ್ನುವುದು ಕಾಂಗ್ರೆಸ್ಸಿನ ಇರಾದೆ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಕೈಯಲ್ಲೇ ಕಾನೂನು ವ್ಯವಸ್ಥೆ ಇದೆ. ಜಿಲ್ಲಾಧಿಕಾರಿಗಳು ಮತ್ತು ಪ್ರಿಸೈಡಿಂಗ್ ಆಫೀಸರ್ ನಿಯಂತ್ರಿಸುವ ಈ ರಾಜ್ಯ ಸರ್ಕಾರ, ಚುನಾವಣಾ ಅಕ್ರಮ ನಡೆಯುತ್ತದೆ ಎಂದರೆ ಅದನ್ನು ಬೆಳಿಕಿಗೆ ತರುವುದಕ್ಕೆ ಇದಕ್ಕಿಂತ ಅವಕಾಶ ಇನ್ಯಾರಿಗೆ ಸಿಗಬಹುದು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

ಡಬಲ್ ಎಸ್‍ಐಟಿ ರಚಿಸಲು ಸಲಹೆ

ಧರ್ಮಸ್ಥಳದಲ್ಲಿ ಸತ್ಯವನ್ನು ಹೊರಗೆ ತರಬೇಕು ಎನ್ನುವ ಕಾರಣಕ್ಕಾಗಿ ಎಸ್‍ಐಟಿ ರಚಿಸಿದ್ದೇವೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರ ಸರ್ಕಾರ ಇವಿಎಂ ನಲ್ಲಿ ಅಕ್ರಮ ನಡೆಯುತ್ತಿದೆ ಅನ್ನುವುದಾದರೆ ಅದನ್ನು ಹೊರಗೆ ತರುವುದಕ್ಕೆ ಡಬಲ್ ಎಸ್‍ಐಟಿ ಮಾಡಿ ಎಂದು ಅವರು ಒತ್ತಾಯಿಸಿದರು. ನಿಮ್ಮನ್ನು ತಡೆದವರು ಯಾರು?; ಇದಕ್ಕಿಂತ ನಿಮಗೆ ಒಳ್ಳೆ ಅವಕಾಶ ಬೇರೆ ಸಿಗುವುದಕ್ಕೆ ಸಾಧ್ಯವೇ ಎಂದು ಕೇಳಿದರು.

ಈ ಅಪಪ್ರಚಾರದ ಬಗ್ಗೆ ನಿಮಗೆ ಶಕ್ತಿ ಇದ್ದರೆ, ನಿಮಗೆ ನೈತಿಕತೆ ಇದ್ದರೆ ಹಾಗೂ ನಿಮಗೆ ಧೈರ್ಯವೇ ಇದ್ದರೆ ನಿಮ್ಮಲ್ಲೇ ಕಾನೂನು, ಪೊಲೀಸ್ ಇಲಾಖೆ, ಅಧಿಕಾರಿಗಳು ಇರುವಾಗ ತನಿಖೆ ನಡೆಸಿ ಅಕ್ರಮವನ್ನು ಬೆಳಕಿಗೆ ತನ್ನಿ ಎಂದು ಸವಾಲು ಹಾಕಿದರು. ಇದಕ್ಕೆ ಈ ರಾಜ್ಯದ ಜನ ಮತ್ತು ದೇಶದ ಜನ ಉತ್ತರವನ್ನು ಕೊಡುತ್ತಾರೆ ಹಾಗೂ ಬೆಲೆ ಏರಿಕೆಯಿಂದ ಬೇಸತ್ತಿರುವ ರಾಜ್ಯದ ಜನ ಮುಂದಿನ ದಿನಗಳಲ್ಲಿ ನಿಮಗೆ ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ತಿಳಿಸಿದರು.

ದಸರಾ ಉದ್ಘಾಟನೆಯ ಶಿಷ್ಟಾಚಾರ ಉಲ್ಲಂಘಿಸಿದ್ರೆ ರಾಜ್ಯಕ್ಕೆ ಅಪಾಯ: ಕೇಂದ್ರ ಸಚಿವ ವಿ.ಸೋಮಣ್ಣ ಭವಿಷ್ಯ

BREAKING: ರೌಡಿ ಶೀಟರ್ ಜೊತೆ ಶಾಸಕರ ಪುತ್ರನ ಆಡಿಯೋ ವೈರಲ್

Share. Facebook Twitter LinkedIn WhatsApp Email

Related Posts

BREAKING : ಶಂಕಿತ ಉಗ್ರ ಜುನೈದ್ ಅಹಮ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ‘NIA’

20/02/2026 10:37 AM1 Min Read

BIG NEWS : ದಾವಣಗೆರೆಯಲ್ಲಿ ಭೀಕರ ಅಪಘಾತ : ಟಿಟಿ ವಾಹನ ಪಲ್ಟಿಯಾಗಿ 13 ಜನರಿಗೆ ಗಂಭೀರ ಗಾಯ!

20/02/2026 10:33 AM1 Min Read

ರಾಜ್ಯ ಸರ್ಕಾರದಿಂದ `ವೀರಶೈವ ಲಿಂಗಾಯತ ಸಮುದಾಯ’ದವರಿಗೆ ಗುಡ್ ನ್ಯೂಸ್ : `ಮೊಬೈಲ್ ಕ್ಯಾಂಟಿನ್’ ತೆರೆಯಲು ಸಿಗಲಿದೆ 3 ಲಕ್ಷ ರೂ. ಸಹಾಯಧನ !

20/02/2026 10:32 AM1 Min Read
Recent News

BIG NEWS : ಮಕ್ಕಳಿಗಾಗಿ NCERT ಯಿಂದ ‘ಇ-ಮ್ಯಾಜಿಕ್ ಬಾಕ್ಸ್’ ಅಪ್ಲಿಕೇಶನ್ ಬಿಡುಗಡೆ : ಇದರ ಪ್ರಯೋಜನಗಳೇನು ತಿಳಿಯಿರಿ !

20/02/2026 10:41 AM

BREAKING : ಶಂಕಿತ ಉಗ್ರ ಜುನೈದ್ ಅಹಮ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ‘NIA’

20/02/2026 10:37 AM

BIG NEWS : ದಾವಣಗೆರೆಯಲ್ಲಿ ಭೀಕರ ಅಪಘಾತ : ಟಿಟಿ ವಾಹನ ಪಲ್ಟಿಯಾಗಿ 13 ಜನರಿಗೆ ಗಂಭೀರ ಗಾಯ!

20/02/2026 10:33 AM

ರಾಜ್ಯ ಸರ್ಕಾರದಿಂದ `ವೀರಶೈವ ಲಿಂಗಾಯತ ಸಮುದಾಯ’ದವರಿಗೆ ಗುಡ್ ನ್ಯೂಸ್ : `ಮೊಬೈಲ್ ಕ್ಯಾಂಟಿನ್’ ತೆರೆಯಲು ಸಿಗಲಿದೆ 3 ಲಕ್ಷ ರೂ. ಸಹಾಯಧನ !

20/02/2026 10:32 AM
State News
KARNATAKA

BREAKING : ಶಂಕಿತ ಉಗ್ರ ಜುನೈದ್ ಅಹಮ್ಮದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ‘NIA’

By kannadanewsnow0520/02/2026 10:37 AM KARNATAKA 1 Min Read

ಬೆಂಗಳೂರು : ಮೋಸ್ಟ್‌ ವಾಂಟೆಡ್‌ ಉಗ್ರ ಜುನೈದ್‌ ಅಹಮ್ಮದ್‌ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ NIA…

BIG NEWS : ದಾವಣಗೆರೆಯಲ್ಲಿ ಭೀಕರ ಅಪಘಾತ : ಟಿಟಿ ವಾಹನ ಪಲ್ಟಿಯಾಗಿ 13 ಜನರಿಗೆ ಗಂಭೀರ ಗಾಯ!

20/02/2026 10:33 AM

ರಾಜ್ಯ ಸರ್ಕಾರದಿಂದ `ವೀರಶೈವ ಲಿಂಗಾಯತ ಸಮುದಾಯ’ದವರಿಗೆ ಗುಡ್ ನ್ಯೂಸ್ : `ಮೊಬೈಲ್ ಕ್ಯಾಂಟಿನ್’ ತೆರೆಯಲು ಸಿಗಲಿದೆ 3 ಲಕ್ಷ ರೂ. ಸಹಾಯಧನ !

20/02/2026 10:32 AM

BIG NEWS : ಗ್ರಾಮಗಳಲ್ಲಿ `ವರದಕ್ಷಿಣೆ’ ತಡೆಗೆ `PDO’ ಗಳು ಕೈಗೊಳ್ಳಬೇಕಾದ ಕ್ರಮಗಳೇನು? ಇಲ್ಲಿದೆ ಮಾಹಿತಿ

20/02/2026 10:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.