ಹಾಸನ: ಗಂಡಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಅರಸೀಕೆರೆ ತಾಲ್ಲೂಕು ಈ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳ ಚುನಾವಣೆಯನ್ನು ಮೇ.25 ರಂದು ಬೆಳ್ಳಿಗೆ 09 ಗಂಟೆಯಿAದ ಸಂಜೆ 04 ಗಂಟೆಯವರೆಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗಂಡಸಿ ಅರಸೀಕೆರೆ ತಾಲ್ಲೂಕು ಇದರ ಆವರಣದಲ್ಲಿ ನಿಗಧಿಪಡಿಸಿದ್ದು, ನಾಮ ಪತ್ರಗಳ ಸ್ವಿಕೃತಿಯು ಸಂಘದ ಕಚÉÃರಿಯಲ್ಲಿ ಮೇ.12 ರಿಂದ 17 ರವರೆಗೆ ಬೆ.11 ಗಂಟೆಯಿAದ ಮದ್ಯಾಹ್ನ 01 ಗಂಟೆಯ ವರೆಗೆ ಸ್ವೀಕರಿಸಲಾಗುವುದು ಹಾಗೂ ನಾಮಪತ್ರಗಳ ಪರಿಶೀಲನೆಯು ಮೇ.18 ರಂದು ಬೆ.11.30 ಗಂಟೆಗೆ ಸಂಘದ ಕಚೇರಿಯಲ್ಲಿ ಮತ್ತು ನಾಮಪತ್ರಗಳ ವಾಪಸಾತಿಯ ಪ್ರಕ್ರಿಯೆಯು ಮೇ.19 ರಂದು ಮ.03 ಗಂಟೆಯವರೆಗೆ ಸಂಘದ ಕಚೇರಿಯಲ್ಲಿ ನಿಗಧಿಪಡಿಸಲಾಗಿರುವ ಕುರಿತು ಗಂಡಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ದ ರಿಟರ್ನಿಂಗ್ ಅಧಿಕಾರಿಗಳು ಹಾಗೂ ಹಿರಿಯ ನಿರೀಕ್ಷಕರು ತಿಳಿಸಿರುತ್ತಾರೆ.