ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅಕ್ರಮಕ್ಕೆ ಅವಕಾಶ ನೀಡದಂತೆ ಚುನಾವಣಾ ಆಯೋಗ ಹದ್ದಿನ ಕಣ್ಣಿರಿಸಿದೆ. ನಿನ್ನೆ ಒಂದೇ ದಿನ ಬರೋಬ್ಬರಿ 1.33 ಕೋಟಿ ರೂ ನಗದು ಜಪ್ತಿ ಮಾಡಿದೆ.
ಈ ಕುರಿತಂತೆ ಬಿಬಿಎಂಪಿ ಚುನಾವಣಾಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ಕಳೆದ 24 ಗಂಟೆಯಲ್ಲಿ 1.33 ಕೋಟಿ ರೂ ನಗದನ್ನು ವಿವಿಧ ತನಿಖಾ ತಂಡಗಳು ಜಪ್ತಿ ಮಾಡಿದ್ದಾವೆ. ಈವರೆಗೆ 23.19 ಕೋಟಿ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ನೀತಿ ಸಂಹಿತೆ ಜಾರಿಯಾದ ಬಳಿಕ ಇದುವರೆಗೆ ಒಟ್ಟು 72.84 ಕೋಟಿ ರೂ ಮೌಲ್ಯದ ವಸ್ತುಗಳನ್ನು ಸೀಜ್ ಮಾಡಲಾಗಿದೆ. ಈವರೆಗೆ 1.73 ಕೋಟಿ ರೂ ಉಚಿತ ಉಡುಗೋರೆಗಳನ್ನು, 7.71 ಲಕ್ಷ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದಿದೆ.
ಈವರೆಗೆ 29 ಕೋಟಿ ರೂ ಮೌಲ್ಯದ ಮದ್ಯ, 1.63 ಕೋಟಿ ರೂ ಮೌಲ್ಯದ 218 ಕೆಜಿ ಮಾದಕ ವಸ್ತುಗಳನ್ನು, 9.18 ಕೋಟಿ ರೂ ಮೌಲ್ಯದ 15.38 ಕೆಜಿ ಚಿನ್ನ ಹಾಗೂ 27.23 ಲಕ್ಷ ಮೌಲ್ಯದ 59 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಈ ಪ್ರಕಗಳಿಗೆ ಸಂಬಂಧಿಸಿದಂತೆ 1,087 ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಟಿಎಂ ಲೇಔಟ್ ನಲ್ಲಿ 87.90 ಲಕ್ಷ ರೂ ಮೌಲ್ಯದ ಒಂದು ಸಾವಿರ ಎಲ್ಇಡಿ ಟಿವಿ, ದಾವಣಗೆರೆ ಕ್ಷೇತ್ರದಲ್ಲಿ 73.98 ಲಕ್ಷ ರೂ ನಗದು ಜಪ್ತಿ ಮಾಡಲಾಗಿದೆ.
‘ಟರ್ಕಿ ಸ್ಥಳೀಯ ಚುನಾವಣೆ’ಯಲ್ಲಿ ‘ಅಧ್ಯಕ್ಷ ಎರ್ಡೊಗನ್’ಗೆ ಮುಖಭಂಗ: ‘ಪ್ರತಿಪಕ್ಷ’ಗಳು ಭರ್ಜರಿ ಗೆಲುವು
ತಿಂಗಳ ಮೊದಲ ದಿನವೇ `ಗ್ರಾಹಕರಿಗೆ ಗುಡ್ ನ್ಯೂಸ್’ : ‘LPG’ ವಾಣಿಜ್ಯ ಸಿಲಿಂಡರ್ ಬೆಲೆ 32 ರೂ. ಇಳಿಕೆ