ಶಿವಮೊಗ್ಗ : ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಚುನಾವಣೆಗೆ ತಡೆಯಾಜ್ಞೆ ತಂದಿರುವುದನ್ನು ತೆರವುಗೊಳಿಸಲು ನಮ್ಮ ಸಮಿತಿ ಪ್ರಯತ್ನಶೀಲವಾಗಿದೆ ಎಂದು ಪ್ರತಿಷ್ಟಾನದ ಉಪಾಧ್ಯಕ್ಷ ಸುಂದರ ಸಿಂಗ್ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನ.30ಕ್ಕೆ ಚುನಾವಣೆ ನಿಗಧಿಯಾಗಿದ್ದು, ಎಲ್ಲ ಪ್ರಕ್ರಿಯೆ ಮುಗಿದಿರುವ ಸಂದರ್ಭದಲ್ಲಿಯೆ ಕೊರಮ ಸಮಾಜದವರು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದರು.
ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನವು ಜಿಲ್ಲಾ ನ್ಯಾಯಾಲಯದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದೆ. ಜಿಲ್ಲಾ ನ್ಯಾಯಾಲಯವು ದಿನಾಂಕ 11-07-2025ರಂದು 11-10-2025ರೊಳಗೆ ಚುನಾವಣೆ ನಡೆಸಲು ಆದೇಶ ನೀಡಿತ್ತು. ಈಗಾಗಲೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಚುನಾವಣೆಗೆ ಯಾವುದೇ ಅಡೆತಡೆ ಬರಬಾರದು ಎಂದು ನಮ್ಮ ಪ್ರತಿಷ್ಟಾನದ ವತಿಯಿಂದ ಕೆವಿಯಟ್ ಸಹ ತರಲಾಗಿತ್ತು. ಆದರೆ ಕೊರಮ ಸಮಾಜದವರು ತಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲ ಎಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ನ್ಯಾಯಾಲಯ ಶನಿವಾರ ಚುನಾವಣೆ ನಡೆಸದಂತೆ ತಡೆಯಾಜ್ಞೆ ನೀಡಿದೆ ಎಂದು ಹೇಳಿದರು.
ಕೆಲವರು ತಡೆಯಾಜ್ಞೆ ತರಲು ನಮ್ಮ ಪ್ರತಿಷ್ಟಾನ ಕಾರಣ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ನಾವೆ ಚುನಾವಣೆಗೆ ಯಾವುದೆ ಅಡೆತಡೆ ಬರಬಾರದು ಎಂದು ಕೆವಿಯಟ್ ತಂದಿದ್ದೇವೆ. ಅದನ್ನು ಮೀರಿ ನ್ಯಾಯಾಲಯ ಆದೇಶ ಮಾಡಿದೆ. ಈ ಬಗ್ಗೆ ಸಮಿತಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಿದೆ. ನ್ಯಾಸ ಪ್ರತಿಷ್ಟಾನದ ಮೀಸಲು ಪಟ್ಟಿಯಲ್ಲಿ ಅವಕಾಶ ಕಲ್ಪಿಸಿಲ್ಲ ಎಂದು ಮೇಲ್ಮನವಿ ಸಲ್ಲಿಸಿರುವ ಕೊರಮ ಸಮಾಜದ ಮನವೊಲಿಸಿ ನಿಗಧಿತ ದಿನದಂದು ಚುನಾವಣೆ ನಡೆಸಲು ಪ್ರಯತ್ನ ನಡೆಸುತ್ತೇವೆ ಎಂದರು.
ಈ ವೇಳೆ ನಾಗೇಂದ್ರ ಕುಮಟಾ, ಎಸ್.ವಿ.ಕೃಷ್ಣಮೂರ್ತಿ, ಪುರುಷೋತ್ತಮ, ಬಸವರಾಜ್, ನಾರಾಯಣ ಅರಮನೆಕೇರಿ, ತಾರಾಮೂರ್ತಿ, ಸಂತೋಷ್ ಶೇಟ್, ಅಶೋಕ, ಗಂಗಾಧರ ಜಂಬಿಗೆ, ಎನ್.ಮೋಹನ್, ಶಶಿಕಾಂತ್, ಆರ್. ಚಂದ್ರು, ಟಿ.ನಾಗಪ್ಪ, ಎಚ್.ಎಲ್.ಶ್ರೀಧರ್, ಲಲಿತಮ್ಮ, ಜ್ಯೋತಿ ಶಶಿಧರ್, ಪ್ರಭಾವತಿ, ಕಸ್ತೂರಿ ಕೃಷ್ಣಮೂರ್ತಿ ಹಾಜರಿದ್ದರು.
BREAKING: KSCA ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆ
Health Tips: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ಬಳಸುವುದು ಸುರಕ್ಷಿತವೇ ?








