ಬೆಂಗಳೂರು: ನಗರದಲ್ಲಿರುವ ಕೆರೆಗಳಿಗೆ ಕೊಳಚೆ ನೀರು ಬರುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಕೆರೆಗಳಲ್ಲಿ ಕೊಳಚೆ ನೀರು ನಿಯಂತ್ರಣ ಹಾಗೂ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಇಂದು ಪಾಲಿಕೆ ಕೇಂದ್ರ ಕಛೇರಿಯ ಮುಖ್ಯ ಆಯುಕ್ತರ ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಕೆರೆಗಳಿಗೆ ಕೊಳಚೆ ನೀರು ಬಾರದಂತೆ ಪಾಲಿಕೆ ಹಾಗೂ ಜಲಮಂಡಳಿ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನಿಡಿದರು.
ಯಾವ್ಯಾವ ಕೆರೆಗಳಿಗೆ ಕೊಳಚೆ ನೀರು ಸೇರುತ್ತಿದೆ, ಅಂತಹ ಕಡೆಗಳಲ್ಲಿ ಡೈವರ್ಷನ್ ಲೈನ್ ಮಾಡಿ ಕೆರೆಗೆ ಕೊಳಚೆ ನೀರು ಬರದಂತೆ ಕ್ರಮವಹಿಸಬೇಕು. ಕೆರೆಗಳ ಪಕ್ಕದಲ್ಲಿರುವ ಒಳಚರಂಡಿಗಳಿಂದ ಕೊಳಚೆ ನೀರು ಉಕ್ಕಿ ಹರಿಯುತ್ತಿರುವುದರಿಂದ ವಾಯುವಿಹಾರ ಮಾರ್ಗ ದುರಸ್ತಿಯಾಗುವುದರ ಜೊತೆಗೆ ನೇರವಾಗಿ ಕೆರೆಗೆ ಕಲುಷಿತ ನೀರು ಸೇರುತ್ತಿದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಕೂಡಲೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಲಾಯಿತು.
ನಗರದಲ್ಲಿ ಕೊಳಚೆ ನಿರನ್ನು ಅನಧಿಕೃತವಾಗಿ ಮಳೆ ನೀರುಗಾಲುವೆಗಳಿಗೆ ಬಿಡುತ್ತಿದ್ದಾರೆ ಅದರಿಂದ ಕೆರೆಗಳಿಗೆ ಕೊಳಚೆ ನೀರು ಸೇರುತ್ತಿದೆ. ಅಂತಹವರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಅದಲ್ಲದೆ ಒಳಚರಂಡಿಗಳ ಚೇಂಬರ‍್ಸ್ ಗಳಲ್ಲಿ ಕೊಳಚೆ ನೀರು ಉಕ್ಕಿ ಹರಿಯುವ ಕಡೆ ಸಮಸ್ಯೆಯನ್ನು ಬಗೆಹರಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಏನೇನು ಸಮಸ್ಯೆ ಇದೆ, ಯಾವೆಲ್ಲಾ ಕ್ರಮ ಕೈಗೊಳ್ಳಬೇಕಿದೆ, ಜಲಮಂಡಳಿಯಿಂದ ಏನು ಮಾಡಬೇಕಿದೆ, ಪಾಲಿಕೆಯಿಂದ ಏನು ಕ್ರಮ ಕೈಗೊಳ್ಳಬೇಕಿದೆ ಎಂಬುದನ್ನು ಪರಿಶೀಲಿಸಿ ಪಟ್ಟಿ ಮಾಡಬೇಕು. ಅನಂತರ ಆ ಸಮಸ್ಯೆಗಳಿಗೆ ನಿಗದಿತ ಸಮಯವನ್ನು ನಿಗದಿಪಡಿಸಿ ಆ ವೇಳೆಯೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಕೆರೆಗಳಿಗೆ ತ್ಯಾಜ್ಯ ಸೇರದಂತೆ ಕ್ರಮ:
ನಗರದಲ್ಲಿ ರಾಜಕಾಲುವೆಗಳಲ್ಲಿ ತ್ಯಾಜ್ಯ ಬಿಸಾಡುತ್ತಿದ್ದು, ಆ ತ್ಯಾಜ್ಯವು ಕೆರೆಗಳ ಒಡಲಿಗೆ ಸೇರುತ್ತಿದೆ. ಈ ಸಂಬಂಧ ಕೆರೆಗಳಿಗೆ ತ್ಯಾಜ್ಯ ಹೋಗುವುದನ್ನು ನಾವು ಪರಿಣಾಮಕಾರಿಯಾಗಿ ನಿಯಂತ್ರಿಬೇಕು. ಅದಕ್ಕೆ ರಾಜಕಾಲುವೆ ವಿಭಾಗದಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು.
ಎಸ್.ಟಿ.ಪಿ ಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ:
ನಗರದಲ್ಲಿ ಜಲಮಂಡಳಿ ವತಿಯಿಂದ ಎಲ್ಲೆಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಸಿ) ಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆ ಎಲ್ಲಾ ಎಸ್.ಟಿ.ಪಿ ಗಳಿಗೆ ವೇಗ ನೀಡಿ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅದರಿಂದ ಸಂಸ್ಕರಣೆಯಾದ ನೀರನ್ನು ಕೆರೆಗಳಿಗೆ ಬಿಡಲು ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ವೇಳೆ ವಿಶೇಷ ಆಯುಕ್ತರಾದ ಪ್ರಿತಿ ಗೆಹ್ಲೋಟ್, ವಲಯ ಆಯುಕ್ತಾದ ರಮೇಶ್, ರಮ್ಯಾ, ದಿಗ್ವಿಜಯ್ ಬೋಡ್ಕೆ, ಮುಖ್ಯ ಕಾರ್ಯಾಚರಣೆ ಅಧಿಕಾರಿಯಾದ ರಮಾಮಣಿ, ಮುಖ್ಯ ಅಭಿತಂತರರಾದ ವಿಜಯ್ ಕುಮಾರ್ ಹರಿದಾಸ್, ರಾಜೇಶ್, ಬಿಬಿಎಂಪಿ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
‘ಸಾಗರ ಆರಣ್ಯಾಧಿಕಾರಿ’ಗಳ ಭರ್ಜರಿ ಕಾರ್ಯಾಚರಣೆ: 2 ಸಾಗುವಾನಿ ಮರ ಕಡಿದ್ದ ‘ನಾಲ್ವರು ಅರೆಸ್ಟ್’
ರಾಜ್ಯದ ಅರಿವು ಕೇಂದ್ರಗಳಲ್ಲಿ ಸ್ವಾತಂತ್ರ್ಯ ಸಂಭ್ರಮ: ಸಚಿವ ಪ್ರಿಯಾಂಕ್ ಖರ್ಗೆ